ಬಿಗಿ ಭದ್ರತೆಯಲ್ಲಿ ದೇವರ ಬಸವನಿಗೆ ಶ್ರದ್ಧಾಂಜಲಿ
Team Udayavani, Dec 24, 2017, 5:42 PM IST
ಹುಳಿಯಾರು: ಪೊಲೀಸರ ಸರ್ಪಗಾವಲಿನಲ್ಲಿ ಹುಳಿ ಯಾರಿ ನಲ್ಲಿ ಶನಿವಾರ ಏರ್ಪಡಿಸಿದ್ದ ಆಂಜನೇಯಸ್ವಾಮಿ ದೇವರ ಬಸವನ ಶ್ರದ್ಧಾಂಜಲಿ ಮೆರವಣಿಗೆ ನಡೆಯಿತು. ಇತ್ತೀಚೆಗೆ ಆಂಜನೇಯಸ್ವಾಮಿ ಬಸವ ಅಪಹರಣಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವ ನ್ನ ಪ್ಪಿತ್ತು. ಧಾರ್ಮಿಕ ಬಾಂಧವ್ಯ ಹೊಂದಿದ್ದ ದೇವರ ಬಸವಣ್ಣನ ಹತ್ಯೆ ಇಲ್ಲಿನ ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಆರೋಪಿಗಳ ಬಂಧನಕ್ಕೆ ಪಕ್ಷಾತೀತವಾಗಿ ಒಕ್ಕೊರಲಿನಿಂದ ಆಗ್ರಹಿಸಿ ಶನಿವಾರದವರೆವಿಗೂ ಗಡುವು ನೀಡಲಾಗಿತ್ತು.
ಹಾಗಾಗಿ ಶನಿವಾರದ ಶ್ರದ್ಧಾಂಜಲಿ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶನಿವಾರದ ಗಡುವು ಮೀರಿದ್ದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಒತ್ತಡ ತರುವ ಸದುದ್ದೇಶದಿಂದ ಹಳ್ಳಿಹಳ್ಳಿಗಳಿಂದ ಸಾವಿರಾರು ಜನರು ಶ್ರದ್ಧಾಂಜಲಿ ಸಭೆಗೆ ಜನ ಆಗಮಿಸಿದ್ದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ: ಇಲ್ಲಿನ ಗ್ರಾಮ ದೇವತೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಮಾವಣೆ ಗೊಂಡ ಜನ ಅಲ್ಲಿಂದ ರಾಜ್ ಕುಮಾರ್ ರಸ್ತೆ, ಬಿ.ಎಚ್.ರಸ್ತೆ, ರಾಂಗೋಪಾಲ್ ಸರ್ಕಲ್ ಮೂಲಕ ಆಂಜನೇಯಸ್ವಾಮಿ ದೇವಸ್ಥಾನದವರೆವಿಗೂ ಮೃತ ಬಸವನ ಭಾವಚಿತ್ರದ ಮೆರವಣಿಗೆ ನಡೆಸಿದರು.
ಮೆರವಣಿಗೆಯುದ್ದಕ್ಕೂ ಭಗವಾಧ್ವಜ ಹಿಡಿದ ಜನರು ಜೈ ರಾಮ್, ದೇವರ ಬಸವನನ್ನು ಕೊಂದ ಆರೋಪಿಗಳನ್ನು ಬಂಧಿಸಿ ಎಂದು ಘೋಷಣೆ ಕೂಗಿದರು. ಮೆರವಣಿಗೆ ಮಧ್ಯೆ ಕೆಲ ಯುವಕರ ಗುಂಪು ಮನೆಯೊಂದರ ಮೇಲೆ ಹಾರುತ್ತಿದ್ದ ಹಸಿರು ಬಾವುಟ ತೆಗೆಸುವಂತೆ ಪಟ್ಟು ಹಿಡಿದಿದ್ದು ಶಾಂತಿಯುತ ಮೆರವಣಿಗೆಯಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.
ವಿಳಂಬ ಧೋರಣೆಗೆ ಖಂಡನೆ: ಮೆರವಣಿಗೆ ಸಮಾಪ್ತಿಯ ಸಂದರ್ಭದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡ ಜನ ಆರೋಪಿಗಳ ಪತ್ತೆಯಲ್ಲಿ ವಿಳಂಬ ಮಾಡುತ್ತಿರುವ ಪೊಲೀಸರ ಧೋರಣೆ ಪ್ರಶ್ನಿಸಿದರು. ರಸ್ತೆಯಲ್ಲಿ ಕುಳಿತು ಗಡುವು ಮೀರಿದ್ದರೂ ಆರೋಪಿಗಳ ಪತ್ತೆಗೆ ಮೀನ ಮೇಷಕ್ಕೆ ಕಾರಣ ತಿಳಿಸುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಮಹಾಮಂಗಳಾರತಿ ಮಾಡಿ ಅನ್ನಸಂತರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಇತಿ ಹಾಡಲಾಯಿತು.
ಊರಿನ ಎಲ್ಲಾ ದೇವಸ್ಥಾನ ಸಮಿತಿಯವರು, ಕರವೇ, ಜಯಕರ್ನಾಟಕ, ರೈತ ಸಂಘ, ಹಿಂದೂ ಜಾಗರಣ ವೇದಿಕೆ, ಎಬಿವಿಪಿ ಹೀಗೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ಅಘೋಷಿತ ಬಂದ್
ಆಂಜನೇಯಸ್ವಾಮಿ ದೇವರ ಬಸವನ ಶ್ರದ್ಧಾಂಜಲಿ ಸಭೆಯ ಅಂಗವಾಗಿ ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಸಿತ್ತು. ಕಾರ್ಯಕ್ರಮದ ಸಂಘಟಕರು ಅಂಗಡಿ ಬಂದ್ ಮಾಡುವಂತೆ ಸೂಚಿಸದಿದ್ದರೂ ಬಹುಪಾಲು ಮಂದಿ ಮಧ್ಯಾಹ್ನದ ವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಾಹನ ಸಂಚಾರ ಎಂದಿನಂತಿತ್ತು. ಖಾಸಗಿ ಶಾಲೆಗಳಿಗೆ ರಜೆ ನೀಡಿದ್ದರೆ ಸರ್ಕಾರಿ ಶಾಲೆಗಳು ತೆರೆದಿದ್ದವು
ಮೌನವಾಗಿದ್ದ ಮಾಜಿ ಶಾಸಕರು
ಇತ್ತೀಚೆಗೆ ನಡೆದ ಸಭೆಯಲ್ಲಿ ಆರೋಪಿಗಳ ಪತ್ತೆಗೆ ಶನಿವಾರ ಗಡುವು ನೀಡಿದ್ದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಈ ಸಂದರ್ಭದಲ್ಲಿ ತುಟಿಬಿಚ್ಚದೆ ಮೌನವಾಗಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಿರಣ್‌ಕುಮಾರ್ ಪೊಲೀಸರ ವಿಳಂಬ ಧೋರಣೆ ವಿರುದ್ಧ ಉಗ್ರ ಪ್ರತಿಭಟನೆಗೆ ಮುಹೂರ್ತ ನಿಗದಿ ಮಾಡುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಮೆರವಣಿಗೆ ಮುಗಿದ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು
ಪೊಲೀಸರ ಮೇಲೆ ನಂಬಿಕೆಯಿಡಿ
ಪೊಲೀಸರು ಸಣ್ಣ ಸುಳಿವು ಸಿಕ್ಕರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನಿಸ್ಸೀಮರು. ಕೆಲ ಪ್ರಕರಣಗಳು ಒಂದೆರಡು ಗಂಟೆಗಳಲ್ಲಿ, ಕೆಲವು ವರ್ಷಗಳ ಕಾಲ ಹಿಡಿದಿದೆ. ಇದಕ್ಕೆ ಪಕ್ಕ ಸಾಕ್ಷಾಧಾರ ಸಂಗ್ರಹಿಸಲು ತಡವಾಗುತ್ತದೆ ವಿನಃ ಯಾವುದೇ ದುರುದ್ದೇಶದಿಂದಲ್ಲ. ಹಾಗಾಗಿ ಬಸವಣ್ಣನ ಹತ್ಯೆಯ ಆರೋಪಿಗಳ ಸುಳಿವು ಈಗಾಗಲೇ ಸಿಕ್ಕಿದ್ದು ಕೆಲ ಸಾಕ್ಷಾಧಾರಗಳ ಸಂಗ್ರಹದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಹಾಗಾಗಿ ಪೊಲೀಸರ ಮೇಲೆ ಅಪನಂಬಿಕೆ ಬೇಕ. ಘದಲ್ಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡುತ್ತೇವೆ ಎಂದು ತಿಪಟೂರು ಡಿವೈಎಸ್‌ಪಿ ವೇಣುಗೋಪಾಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.