ನೀರು ಹೀರಿಕೊಂಡ ಮಂಗಳ; ಆಕ್ಸ್ಫರ್ಡ್ ವಿವಿ ವಿಜ್ಞಾನಿಗಳ ಸಂಶೋಧನೆ
Team Udayavani, Dec 25, 2017, 11:39 AM IST
ಲಂಡನ್: ಕೆಂಪು ಗ್ರಹ ಮಂಗಳನ ಮೇಲೆ ಹಿಂದೊಮ್ಮೆ ನೀರು ಹರಿಯುತ್ತಿತ್ತು. ಆದರೆ ಆ ನೀರನ್ನು ಮೇಲ್ಪದರವು ಸ್ಪಾಂಜ್ ರೀತಿ ಹೀರಿಕೊಂಡು, ಈಗ ವಾಸಕ್ಕೆ ಯೋಗ್ಯವಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಇಂಗ್ಲೆಂಡ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.
ಈಗ ಮಂಗಳನ ಬಹುತೇಕ ಮೇಲ್ಮೆ„ಶುಷ್ಕ ಹಾಗೂ ಒಣಗಿದಂತಿದೆ. ಆದರೂ ಕೆಲವು ಕಡೆ ನೀರು ಈ ಹಿಂದೆ ಇದ್ದ ಸುಳಿವು ಲಭ್ಯವಾಗುತ್ತದೆ. ಆದರೆ ಈ ನೀರು ಕಾಲಸರಿದಂತೆ ಎಲ್ಲಿಹೋಯಿತು ಮತ್ತು ಏನಾ ಯಿತು ಎಂಬುದು ಇನ್ನೂ ಬಗೆಹರಿಯದ ಸಮಸ್ಯೆಯಾಗಿದೆ.
ಈ ಹಿಂದೆ ಸಂಶೋಧನೆಯಲ್ಲಿ ತಿಳಿದು ಬಂದ ಪ್ರಕಾರ, ಮಂಗಳ ಅಯಸ್ಕಾಂತೀಯ ಶಕ್ತಿಯನ್ನು ಕಳೆದುಕೊಂಡಿದ್ದರಿಂದಾಗಿ, ನೀರೆಲ್ಲವೂ ಬಾಹ್ಯಾಕಾಶ ಸೆಳೆದುಕೊಂಡಿದೆ. ತೀವ್ರ ವೇಗದ ಗಾಳಿಯಿಂದಾಗಿ ನೀರು ಗ್ರಹದಾಚೆಗೆ ಸಾಗಿದೆ ಅಥವಾ ಹಿಮರೂಪಕ್ಕೆ ಪರಿವರ್ತನೆಯಾಗಿದೆ ಎನ್ನಲಾಗಿತ್ತು.
ಮಂಗಳ ನಲ್ಲಿನ ನೀರಿನ ವ್ಯವಸ್ಥೆಯನ್ನು ಅರಿಯಲು ಆಕ್ಸ್ಫರ್ಡ್ ವಿವಿ ವಿಜ್ಞಾನಿಗಳು ಮಾಡೆಲಿಂಗ್ ವಿಧಾನವನ್ನು ಬಳಸಿದ್ದಾರೆ. ಅಲ್ಲದೆ ಭೂಮಿಯ ಮೇಲಿರುವ ಕಲ್ಲಿನ ಮಾದರಿಗಳನ್ನು ಇಟ್ಟುಕೊಂಡು ಈ ಸಂಶೋಧನೆ ನಡೆಸಿದ್ದು, ಭೂಮಿಯ ಮೇಲಿರುವ ಕಲ್ಲುಗಳಿಗಿಂತ ಶೇ.25ರಷ್ಟು ಹೆಚ್ಚು ನೀರನ್ನು ಮಂಗಳನಲ್ಲಿರುವ ಕಲ್ಲುಗಳು ಹಿಂದೊಮ್ಮೆ ಹೊಂದಿದ್ದವು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.