ಈ ಗುಣ ನಿಮ್ಮದಾಗಿದ್ರೆ, ಲೈಫಲ್ಲಿ ಏನಾದ್ರೂ ಮಾಡ್ತೀರಿ!
Team Udayavani, Dec 26, 2017, 6:15 AM IST
ಜೀವನದಲ್ಲಿ ನಾವು ಯಶಸ್ಸು ಗಳಿಸುತ್ತೇವೆಯೇ, ಇಲ್ಲವೆ? ಎಂಬ ಪ್ರಶ್ನೆಗೆ ಉತ್ತರ ಯಾರಿಗೂ ತಿಳಿದಿಲ್ಲ. ಅದನ್ನು ತಿಳಿದುಕೊಳ್ಳುವ ಕುತೂಹಲವಂತೂ ಎಲ್ಲರಲ್ಲೂ ಇದ್ದೇ ಇರುತ್ತೆ. ಕೆಲವರು ಒಂದೇ ಒಂದು ಸೂಚನೆ ಕೊಡುವಂತೆ ದೇವರ ಮೊರೆ ಹೋದರೆ ಇನ್ನೂ ಕೆಲವರು ಜೋತಿಷ್ಯರ ಬಳಿ ತೆರಳುತ್ತಾರೆ. ಅದಕ್ಕೇ ಅವೆರಡೂ ತಾಪತ್ರಯಗಳೂ ಬೇಡವೆಂದೇ ನಿಮಗೆ ನೀವೇ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಒಂದು ಮಾರ್ಗವನ್ನು ಇಲ್ಲಿ ನೀಡಿದ್ದೇವೆ. ಕೆಳಗಿನ 8 ಪಾಯಿಂಟುಗಳನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೋ, ಪಾಲಿಸುತ್ತಿದ್ದಾರೋ ಅವರು ಜೀವನದಲ್ಲಿ ಯಶಸ್ಸು ಪಡೆಯುವುದಂತೂ ಪಕ್ಕಾ. ಇವನ್ನು ಪಾಲಿಸದೇ ಇದ್ದವರು ತಾವು ಯಶಸ್ಸು ಪಡೆಯುವುದಿಲ್ಲವೆಂದು ಕೊರಗಬೇಕಿಲ್ಲ, ಇನ್ನು ಮುಂದಾದರೂ ಈ 7 ಸೂತ್ರಗಳನ್ನು ಪಾಲಿಸಬಹುದಲ್ಲ…
1. ನೀವು ನಿಮ್ಮಿಷ್ಟದ ಕೆಲಸವನ್ನು ಹುಡುಕಿಕೊಂಡಿದ್ದೀರಿ!
ಇದು ನಿಮ್ಮ ಜೀವನದ ಬಗ್ಗೆ ನಿಮಗಿರುವ ಸ್ಪಷ್ಟತೆಯನ್ನು ಸೂಚಿಸುತ್ತದೆ. ತಾವು ಇಷ್ಟ ಪಟ್ಟ ಕ್ಷೇತ್ರದಲ್ಲಿಯೇ ಕೆಲಸ ಮಾಡುವುದರಿಂದ ಖುಷಿಯೂ ಸಿಗುತ್ತದೆ, ಜೀವನದಲ್ಲಿ ಯಶಸ್ಸು ಪಡೆಯಬಹುದು.
2. ನೀವು ಓವರ್ ಡ್ನೂಟಿ ಮಾಡುವುದಕ್ಕೂ ಹಿಂದೆಮುಂದೆ ನೋಡೋಲ್ಲ
ಕೆಲವರು ಸಂಬಳಕ್ಕೆ ತಕ್ಕ ಕೆಲಸ ಮಾತ್ರ ಮಾಡುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ. ಅಂಥವರು ನಿಂತ ನೀರಾಗಿ ಬಿಡುವ ಅಪಾಯವಿರುತ್ತದೆ. ಎಷ್ಟು ತಡವಾದರೂ, ಎಂಥದ್ದೇ ಕೆಲಸವಾದರೂ ತಮ್ಮ ಕೆಲಸವನ್ನು ಪೂರ್ತಿಯಾಗಿ ಮುಗಿಸಿಕೊಂಡೇ ಹೋಗುವ ಜಾಯಮಾನದವರು ಜೀವನದಲ್ಲಿ ಬಹಳ ಬೇಗ ಏಳಿಗೆಯನ್ನು ಕಾಣುತ್ತಾರೆ.
3. ದೀರ್ಘ ಸಮಯದವರೆಗೆ ನಿಮ್ಮ ಗುರಿಯ ಜಪವನ್ನೇ ಮಾಡಬಲ್ಲಿರಿ…
ಗುರಿ ಸಾಧನೆಯ ಪಯಣದಲ್ಲಿ ಎದುರಾಗುವ ನಾನಾ ಥರದ ಆಮಿಷಗಳಿಗೆ ಬಲಿಯಾಗದೆ, ವಿಚಲಿತಗೊಳ್ಳದೆ ಇರುವವರಿಗೆ ಯಶಸ್ಸು ಒಲಿಯುತ್ತದೆ.
4. ತಮ್ಮ ವ್ಯಾಪ್ತಿಯನ್ನು ಮೀರಲು ಹಾತೊರೆಯುತ್ತಿರುತ್ತೀರಿ
ಕಂಫರ್ಟ್ ಝೋನ್‌ನಿಂದ ಹೊರಬರುವ ತುಡಿತವಿದ್ದವರು ಬದುಕಿನಲ್ಲಿ ಎಂಥ ಸಂಕಷ್ಟ ಒದಗಿದರೂ ಪಾರಾಗಬಲ್ಲರು. ಇವರು ಒಂದೇ ವಿಚಾರಕ್ಕೆ ಅಂಟಿಕೊಳ್ಳುವುದಿಲ್ಲ. ತಮಗೆ ಗೊತ್ತಿಲ್ಲದ, ಸವಾಲಿನ ಕೆಲಸವಾದರೂ ಸರಿ ಅದನ್ನು ಸ್ವೀಕರಿಸುವರು. ಇದು ಅವರ ಕ್ರಿಯಾಶೀಲತೆಯನ್ನು ತೋರಿಸುತ್ತದೆ.
5. ಹೊಸ ಹೊಸ ಐಡಿಯಾಗಳ ಕೊರತೆ ನಿಮಗೆ ಬರುವುದಿಲ್ಲ…
ಯಶಸ್ವಿ ವ್ಯಕ್ತಿಗಳು ಯಾವಾಗಲೂ ಮಹತ್ತರ ಕೆಲಸಗಳನ್ನು ಮಾಡುತ್ತಾರೆ. ಅದಕ್ಕೆ ಅವರ ಆಲೋಚನಾ ವಿಧಾನವೇ ಕಾರಣ. ಅವರ ಮನಸ್ಸು ಹೊಸ ಹೊಸ ವಿಚಾರಗಳ ಬಗ್ಗೆ ಯೋಚಿಸುವುದರಿಂದ ಹೊಸ ಹೊಸ ಉಪಾಯಗಳು ಅವರಿಗೆ ಹೊಳೆಯುತ್ತಲೇ ಇರುತ್ತವೆ.
6. ಸುತ್ತಮುತ್ತಲಿನವರ ಹಿತವನ್ನೂ ಬಯಸುವವರು…
ಯಶಸ್ವಿ ವ್ಯಕ್ತಿಗಳು ಯಾವತ್ತೂ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಆಜ್ಞಾತರಾಗಿರುವುದಿಲ್ಲ. ಅವರು ತಾವು ಬೆಳೆಯುವುದರ ಜೊತೆಗೆ ತಮ್ಮ ಸುತ್ತಲಿನವರನ್ನೂ ತಮ್ಮ ಜೊತೆ ಮೇಲೆತ್ತಬೇಕೆಂಬ ಅಭಿಲಾಷೆಯನ್ನು ಹೊಂದಿರುತ್ತಾರೆ. ಇತರರ ಅಭಿವೃದ್ಧಿಯಲ್ಲಿ ಅವರೂ ಖುಷಿ ಕಾಣುತ್ತಿರುತ್ತಾರೆ.
7. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ
ಸವಾಲುಗಳನ್ನು ಸ್ವೀಕರಿಸಿದಾಗ ಮೊದಲು ಹೆದರಿಕೆಯಾಗುವುದು ಸಹಜವೇ. ಆದರೆ, ಅದನ್ನೇ ನೆಪ ಮಾಡಿಕೊಂಡು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬಾರದು. ಬಂದದ್ದನ್ನು ಎದುರಿಸುತ್ತಲೇ ಹೋಗಬೇಕು. ಆಗಲೇ ಯಶಸ್ಸು ಕೈಗೆ ದಕ್ಕುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.