ಈನಂ ಗಂಭೀರ್ ಮೊಬೈಲ್ ದೋಚಿ ಪರಾರಿಯಾದ ಕಳ್ಳರು
Team Udayavani, Dec 26, 2017, 7:05 AM IST
ನವದೆಹಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಟೆರರಿಸ್ತಾನ ಎಂದು ಕರೆದು ಪಾಕ್ ಬಾಯಿ ಮುಚ್ಚಿಸಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿ ಈನಂ ಗಂಭೀರ್ ಅವರ ಮೊಬೈಲ್ ಫೋನ್ ಅನ್ನು ದುಷ್ಕರ್ಮಿಗಳು ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಮಿಷನ್ನ ಮೊದಲ ಕಾರ್ಯದರ್ಶಿಯಾಗಿರುವ ಏನಂ, ರಜೆಗೆಂದು ದೆಹಲಿಗೆ ಬಂದಿದ್ದರು. ಶನಿವಾರ ರಾತ್ರಿ ಊಟದ ಬಳಿಕ ತಮ್ಮ ತಾಯಿ ಜೊತೆ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಅವರ ಫೋನ್ ದೋಚಿದ್ದಾರೆ.
ಸಂಜೆ ವೇಳೆಯಾದ್ದರಿಂದ ಅವರಿಗೆ ಬೈಕಿನ ನಂಬರ್ ದಾಖಲಿಸಿಕೊಳ್ಳಲಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. “ಬೈಕಿನಲ್ಲಿ ಬಂದ ಇಬ್ಬರು ನನಗೆ ಹನುಮಾನ್ ಮಂದಿರದ ದಾರಿಯನ್ನು ಕೇಳಿದರು. ನಾನು ತೋರಿಸಲು ಮುಂದಾದಾಗ ಕೈಯಲ್ಲಿದ್ದ ಮೊಬೈಲ್ ಕಸಿದು ವೇಗವಾಗಿ ಬೈಕ್ನಲ್ಲಿ ಪರಾರಿಯಾದರು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.