ವಿದೇಶಿ ದೇಣಿಗೆ ಪಡೆವವರು ತಿಂಗಳೊಳಗೆ ಖಾತೆ ತೆರೆಯಿರಿ
Team Udayavani, Dec 26, 2017, 6:40 AM IST
ನವದೆಹಲಿ: ಎನ್‌ಜಿಒಗಳ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಇದೀಗ, ಒಂದು ತಿಂಗಳೊಳಗಾಗಿ ಬ್ಯಾಂಕ್ ಖಾತೆ ತೆರೆಯುವಂತೆ ಆದೇಶಿಸಿದೆ. ವಿದೇಶದಿಂದ ದೇಣಿಗೆ ಪಡೆಯುತ್ತಿರುವ ದೇಶದಲ್ಲಿರುವ ಎಲ್ಲ ಎನ್‌ಜಿಒಗಳು, ಸಂಸ್ಥೆಗಳು, ಉದ್ಯಮಗಳು ಹಾಗೂ ವ್ಯಕ್ತಿಗಳು ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ 32 ಬ್ಯಾಂಕ್‌ಗಳ ಪೈಕಿ ಒಂದರಲ್ಲಿ ಒಂದು ತಿಂಗಳೊಳಗೆ ಖಾತೆ ತೆರೆಯಬೇಕು ಮತ್ತು ಆ ಖಾತೆಯ ಮೂಲಕವೇ ವಿದೇಶದಿಂದ ಬಂದ ಹಣವನ್ನು ಪಡೆಯಬೇಕು ಎಂದು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ವಿದೇಶದಿಂದ ಪಡೆದ ಹಣವನ್ನು ದೇಶದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಕೆಗೆ ಬಳಸಬಾರದು ಎಂದೂ ತಿಳಿಸಿದೆ.
ವಿದೇಶಿ ಅನುದಾನದ ಬಗ್ಗೆ ಪಾರದರ್ಶಕತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. 2018ರ ಜನವರಿ 21 ರೊಳಗೆ ಬ್ಯಾಂಕ್ ಖಾತೆ ತೆರೆದು ನಿಗದಿತ ನಮೂನೆಯಲ್ಲಿ ಗೃಹ ಸಚಿವಾಲಯಕ್ಕೆ ವಿವರ ಒದಗಿಸಬೇಕು. ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆ (ಪಿಎಫ್ಎಂಎಸ್) ಅನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ಥಾಪಿಸಿದ್ದು, ಇದರ ಅಡಿಯಲ್ಲಿ ಬ್ಯಾಂಕ್‌ಗಳು ನೋಂದಾಯಿಸಿಕೊಳ್ಳಬೇಕಿದೆ. ಈಗಾಗಲೇ 32 ಬ್ಯಾಂಕ್‌ಗಳು ನೋಂದಣಿ ಮಾಡಿಕೊಂಡಿವೆ. ವಿದೇಶಿ ಅನುದಾನವನ್ನು ವಿದೇಶಿ ಅನುದಾನ ಕಾಯ್ದೆ 2010ರ ಅಡಿಯಲ್ಲಿ ಸೂಚಿಸಿದ ನಿಯಮಾವಳಿಗೆ ಅನುಗುಣವಾಗಿ ಬಳಸಬೇಕಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ನಿರ್ದೇಶನ ಹೊರಡಿಸಿದೆ. 32 ಬ್ಯಾಂಕ್‌ಗಳ ಪೈಕಿ ದೇಶದ ಬಹುತೇಕ ಪ್ರಮುಖ ಬ್ಯಾಂಕ್‌ಗಳು ಇವೆ ಮತ್ತು ವಿದೇಶದ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ಕೂಡ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.