ನಾಲ್ಕನೇ ದಿನಕ್ಕೆ ಕಾಲಿಟ್ಟ ಮಹದಾಯಿ ಧರಣಿ


Team Udayavani, Dec 26, 2017, 1:34 PM IST

ma-dharani.jpg

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಮಲ್ಲೇಶ್ವರ ಬಿಜೆಪಿ ಕಚೇರಿ ಎದುರು ಮಹದಾಯಿ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಯಡಿಯೂರಪ್ಪ ಸ್ಥಳಕ್ಕೆ ಧಾವಿಸಿ ತಮ್ಮ ಮನವಿ ಸ್ವೀಕರಿಸಿ ಸ್ಪಷ್ಟ ನಿಲುವು ತಿಳಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಧರಣಿ ನಿರತರು ಪಟ್ಟುಹಿಡಿದ್ದಿದ್ದಾರೆ. ಈ ಮಧ್ಯೆ ಪರಿವರ್ತನಾ ಯಾತ್ರೆಯಲ್ಲಿ ತೊಡಗಿಕೊಂಡಿರುವ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರ ಮನವೊಲಿಸುವ ಸಾಧ್ಯತೆ ಇದೆ.

ಗಣ್ಯರ ಬೆಂಬಲ: ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ನೂರಾರು ಮಹದಾಯಿ ಹೋರಾಟಗಾರರು ಬಿಜೆಪಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಆರಂಭಿಸಿದ್ದು, ಇದು ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿತ್ತು. ಈ ಮಧ್ಯೆ ಹಲವು ರಾಜಕೀಯ ಪಕ್ಷಗಳೂ ಧರಣಿ ನಿರತರಿಗೆ ಕೈಜೋಡಿಸಿದ್ದರು. ಅಲ್ಲದೆ, ಹೋರಾಟಗಾರರಿಗೆ ಜೆಡಿಎಸ್‌ ನಾಯಕರು, ಕನ್ನಡಪರ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಚಿತ್ರಮಂಡಳಿಯ ಸದಸ್ಯರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಬೆಂಬಲ ಸೂಚಿಸಿದ್ದಾರೆ. 

ಉಪಾಹರಕ್ಕೆ ಮನವೊಲಿಕೆ: ಭಾನುವಾರ ಧರಣಿ ನಿರತರಿಗೆ ಉಪಹಾರ ಒದಗಿಸಲು ವಿಫ‌ಲ ಯತ್ನ ಮಾಡಿದ್ದ ವಿಧಾನಪರಿಷತ್‌ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಸೋಮವಾರವೂ ರೈತರಿಗೆ ಉಪಾಹಾರ ನೀಡಲು ಮುಂದಾದರು. ಆದರೆ, ಪ್ರತಿಭಟನಾ ನಿರತರು ಉಪಾಹಾರವನ್ನು ನಿರಾಕರಿಸಿ ರೈತರ ಸಮಸ್ಯೆ ಮೊದಲು ಬಗೆಹರಿಸುವಂತೆ ಪಟ್ಟುಹಿಡಿದರು.

ಯಾವುದೇ ಪಕ್ಷದ ಜನಪ್ರತಿನಿಧಿಯಿಂದ ಏನನ್ನೂ ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಮನವೊಲಿಕೆ ಬಳಿಕ ಉಪಾಹಾರ ಸೇವಿಸಿದರು. ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮತ್ತು ಸಂಸದ ಪ್ರಹ್ಲಾದ ಜೋಷಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ರೈತರಿಗೆ ಭರವಸೆ ನೀಡಿದರು.

ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ ಬೆಂಬಲ ಸೂಚಿಸಿದರು.ಎಸ್‌ಡಿಪಿಐ ಕಾರ್ಯಕರ್ತರು, ಆಟೋ ರಿಕ್ಷಾ ಚಾಲಕರ ಯೂನಿಯನ್‌ ಸೇರಿದಂತೆ ಸಾರ್ವಜನಿಕರು ಬಿಜೆಪಿ ಕಚೇರಿ ಬಳಿ ಆಗಮಿಸಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.

ಹೋರಾಟಗಾರರಿಗೆ ಆರೋಗ್ಯ ಸಮಸ್ಯೆ: ರೈತ ಅಸ್ವಸ್ಥ
3 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಮಹದಾಯಿ ಹೋರಾಟಗಾರರಲ್ಲಿ ಕೆಲವರು ಅಸ್ವಸ್ಥಗೊಂಡಿದ್ದು, ತೀವ್ರ ಅಸ್ವಸ್ಥಗೊಂಡ ನರಗುಂದದ ರೈತ ಹನುಮಂತಪ್ಪ ಎಂಬುವರನ್ನು ಕೆ.ಸಿ.ಜನರಲ್‌ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಅವರು ಗುಣಮುಖರಾಗಿದ್ದಾರೆ.

ಕೆಲವರು ಚಳಿ ಜ್ವರದಿಂದ ಬಳಲುತ್ತಿರುವ ಕಾರಣ ಆಂಬ್ಯುಲೆನ್ಸ್‌ನು° ಸ್ಥಳದಲ್ಲಿಯೇ ಇಡಲಾಗಿದ್ದು, ಹೋರಾಟಗಾರರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೆಲವರು ಮಹಿಳೆಯರ ಆರೋಗ್ಯದಲ್ಲಿಯೂ ಏರುಪೇರಾಗಿದೆ. ಹೋರಾಟದಲ್ಲಿ ಪಾಲ್ಗೊಂಡಿರುವ ಮಕ್ಕಳನ್ನು ವೈದ್ಯರು ತಪಾಸಣೆ ಮಾಡಿದ್ದಾರೆ. ಕೆಲವು ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ.

ದೇವೇಗೌಡರ ಬೆಂಬಲ: ಮಹದಾಯಿ ಹೋರಾಟಗಾರರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ವೀರೇಶ್‌ ಸೊಬರದ ಮಠ ಅವರನ್ನು ಸೋಮವಾರ ದೂರವಾಣಿ ಮೂಲಕ ಸಂಪರ್ಕಿಸಿದ ಅವರು, ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ.

ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಹೋರಾಟಕ್ಕೆ ಬೆಂಬಲ ಘೋಷಿಸುತ್ತೇನೆ ಎಂದು ತಿಳಿಸಿದರು. ಮಾಜಿ ಸಚಿವ ಬಸವರಾಜ ಹೊರಟ್ಟಿ  ಪ್ರತಿಕ್ರಿಯಿಸಿ ಕಾಂಗ್ರೆಸ್‌, ಬಿಜೆಪಿ ನಾಯಕರು ಒಪ್ಪಿದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲು ಸಿದ್ಧ ಎಂದು ಹೇಳಿದರು.

ಟಾಪ್ ನ್ಯೂಸ್

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Bengaluru: ಅಪಾರ್ಟ್‌ಮೆಂಟ್‌ನಿಂದ ಜಾರಿ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು!

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

4

Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್‌ ವೆಲ್ಡಿಂಗ್‌ ದೋಷ ಕಾರಣ; ಸಮಿತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

10

Panaji: ಮಲ್ಪೆಯ 2 ಮೀನುಗಾರಿಕಾ ಬೋಟ್‌ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.