ಉ ಪ್ರ : ಪ್ರತ್ಯೇಕ ಘಟನೆಗಳಲ್ಲಿ 4 ಬಾಲಕಿಯರ ಮೇಲೆ ಅತ್ಯಾಚಾರ
Team Udayavani, Dec 26, 2017, 3:53 PM IST
ಲಕ್ನೋ : ಉತ್ತರ ಪ್ರದೇಶದ ಪ್ರತಾಪಗಢ, ಬಂಡಾ ಮತ್ತು ಮುಜಫರನಗರ ಜಿಲ್ಲೆಗಳಲ್ಲಿ ನಡೆದಿರುವ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ನಾಲ್ವರು ಬಾಲಕಿಯರು ಅತ್ಯಾಚಾರಕ್ಕೆ ಗುರಿಯಾಗಿದ್ದಾರೆ.
ಪ್ರತಾಪಗಢದಲ್ಲಿ ಆರರ ಹರೆಯದ ಬಾಲಕಿಯನ್ನು ಹದಿಹರೆಯದ ಯುವಕನೋರ್ವ ರೇಪ್ ಮಾಡಿದ್ದಾನೆ. ಆತ ಈ ಕೃತ್ಯ ಎಸಗಿದಾಗ ಬಾಲಕಿಯ ಹೆತ್ತವರು ಹೊಲದಲ್ಲಿ ಕೆಲಸ ಮಾಡುತ್ತಿದ್ದರು.
ಬಾಲಕಿಗೆ ಸೈಕಲ್ ರೈಡ್ ಮಾಡಿಸುವ ಆಸೆ ತೋರಿಸಿ ಒಯ್ದ ಕಾಮಾಂಧ ತರುಣನು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ರೇಪ್ ಮಾಡಿದ. ಪೊಲೀಸರು ಆತನನ್ನು ಅನಂತರ ಬಂಧಿಸಿದರು.
ಬಂಡಾ ಜಿಲ್ಲೆಯ ಅಟ್ಟಾರಾ ಪ್ರದೇಶದಲ್ಲಿ 15ರ ಬಾಲಕಿಯನ್ನು ಕಾಮಾಂಧನೋರ್ವ ಡಿ.24ರಂದು ಅಪಹರಿಸಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಅಪಹರಣಕಾರ ಅನಿರುದ್ದನ ಹಿಡಿತದಿಂದ ಹೇಗೋ ಪಾರಾಗಿ ಬಂದ ಬಾಲಕಿ ಕೊಟ್ಟ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಐದರ ಹರೆಯದ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪ ಓಂ ಪ್ರಕಾಶ್ ಎಂಬಾತ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಯನ್ನು ಆಕೆಯ ಚಿಕ್ಕಪ್ಪನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಘಟನೆಯ ಬಗ್ಗೆ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮುಜಫರನಗರ ಜಿಲ್ಲೆಯ ನಂಗ್ಲಾ ಬಜೂರ್ಗ್ ಗ್ರಾಮದಲ್ಲಿ ಇಬ್ಬರು ಕಾಮಾಂಧ ಯುವಕರು 15ರ ಬಾಲಕಿಗೆ ಬಂದೂಕು ತೋರಿಸಿ ಜೀವ ಬೆದರಿಕೆ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಬಾಲಕಿಯ ಮನೆಯನ್ನು ಅಕ್ರಮವಾಗಿ ಪ್ರವೇಶಿಸಿ ಆಕೆಯನ್ನು ಬಲವಂತದಿಂದ ಟೆರೇಸ್‌ಗೆ ಒಯ್ದು ಅಲ್ಲಿ ಅವರು ರೇಪ್ ಮಾಡಿದ್ದಾರೆ.
ಮನೆಯವರು ಇನ್ನೊಂದು ಕೋಣೆಯಲ್ಲಿ ಮಲಗಿದ್ದುದರಿಂದ ಅವರಿಗೆ ಈ ಘಟನೆ ನಡೆದುದೇ ಗೊತ್ತಾಗಲಿಲ್ಲ ಎನ್ನಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.