ಅಫ್ಘಾನಿಸ್ತಾನಕ್ಕೂ ಸಿಪೆಕ್ ವಿಸ್ತರಣೆ: ಚೀನಾ ತಂತ್ರ
Team Udayavani, Dec 27, 2017, 7:15 AM IST
ಬೀಜಿಂಗ್: ಪಾಕಿಸ್ತಾನದ ಜತೆ 45 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿರ್ಮಾಣಕ್ಕೆ ಚೀನಾ ಸಹಿ ಹಾಕಿದ್ದು ಹಳೆಯ ಸಂಗತಿ. ಅದನ್ನೀಗ ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಚೀನಾ ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಚೀನಾ ನಡೆಸುತ್ತಿರುವ ಕುತಂತ್ರ ಇದಾಗಿದೆ. ಇಂಥ ಪ್ರಯತ್ನದ ಮೂಲಕ “ಒನ್ ಬೆಲ್ಟ್ ಒನ್ ರೋಡ್; ‘ ಯೋಜನೆಯನ್ನು ಐರೋಪ್ಯ ಒಕ್ಕೂಟದಿಂದಾಚೆಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನೂ ಚೀನಾ ಹೊಂದಿದೆ.
ಈ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಜತೆಗೆ ಕೂಡ ಮಾತುಕತೆ ನಡೆಸಿದೆ. ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಇ ಎರಡೂ ದೇಶಗಳ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ. ಯೋಜನೆ ವಿಸ್ತಾರದಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರವಲ್ಲದೆ ಪ್ರಾದೇಶಿಕವಾಗಿ ಕೂಡ ಅಭಿವೃದ್ಧಿ ಹೊಂದಲು ಸಾಧ್ಯ ಎಂಬಂತೆ ಮನವರಿಕೆ ಮಾಡಿದ್ದಾರೆ. 1947ರಿಂದ ಈಚೆಗೆ ಕೂಡ ಚೀನಾ ಪಾಕ್ ಮತ್ತು ಅಫ್ಘಾನಿಸ್ತಾನದ ಜತೆಗೆ ಉತ್ತಮ ಬಾಂಧವ್ಯ ಹೊಂದಲು ಮುಂದಾಗಿದೆ. ತಾಲಿ ಬಾನ್ ಉಗ್ರರ ಕರಾಳ ಹಸ್ತಕ್ಕೆ ಸಿಕ್ಕಿ ನಲುಗಿರುವ ಅಫ್ಘಾನಿಸ್ತಾನಕ್ಕೆ ಅಭಿವೃದ್ಧಿ ಕಾಮಗಾರಿಗಳೂ ಅಗತ್ಯ ಎಂದಿದ್ದಾರೆ ಚೀನಾ ಸಚಿವ. ಇಬ್ಬರಿಗೂ ಅನುಕೂಲವಾಗುವಂತೆ ಯೋಜನೆ ಜಾರಿಯಾಗಲಿ ಎಂಬ ಆಶಯ ನಮ್ಮದು ಎಂದಿದ್ದಾರೆ. ಈ ಬಗ್ಗೆ 2015ರಲ್ಲಿ ನಡೆದಿದ್ದ ಮಾತುಕತೆ ಮುರಿದು ಬಿದ್ದಿತ್ತು.
ಮತ್ತೂಂದು ಪ್ರಮುಖ ಬೆಳವಣಿಗೆಯಲ್ಲಿ ಟಿಬೆಟ್‌ನಲ್ಲಿ ಭೂಕಂಪ ಉಂಟಾಗಿ ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಕೃತಕ ಕೆರೆಗಳು ಉಂಟಾಗಿವೆ. ಈ ಬಗ್ಗೆ ಭಾರತ ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ಚೀನಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.