ಅನಂತ ಹೆಗಡೆಗೆ ದೇವನೂರ ಬಹಿರಂಗ ಪತ್ರ


Team Udayavani, Dec 27, 2017, 7:20 AM IST

mahadeva.jpg

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆಯವರೇ, ಯಲಬುರ್ಗ ತಾಲೂಕು ಕುಕನೂರಿನಲ್ಲಿ ತಾವು ಆಡಿದ ಮಾತುಗಳನ್ನು ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ. ಅಪ್ಪ, ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ತಾವು ಲೇವಡಿ ಮಾಡಿದ್ದೀರ! ಈಗ ತಮಗೆ ಅಪ್ಪ, ಅಮ್ಮನ ಗುರುತು ತಿಳಿಸಿಕೊಡಬೇಕಾಗಿದೆ- ದ್ವೇಷವೇ ನಿಮ್ಮ ತಂದೆ; ಅಸಹನೆಯೇ ನಿಮ್ಮ ತಾಯಿ; ಭ್ರಮೆಯೇ ನಿಮ್ಮ ಮೂಲ ಪುರುಷ; ಮಿಥ್ಯಾ ಎಂಬುದೇ ನಿಮ್ಮ
ಜಾnನ ಸಂಪತ್ತು. ಇಷ್ಟು ಸಾಕೆನ್ನಿಸುತ್ತದೆ.

ಈಗಲೂ ಆಗಾಗ ನೆನಪಾಗುತ್ತ ನನಗೆ ನೋವನ್ನುಂಟು ಮಾಡುವ ಸಂಗತಿ ಎಂದರೆ- ಬಿಜೆಪಿಯ ದೊಡ್ಡ ನಾಯಕ
ವಾಜಪೇಯಿ ಅವರು ಪ್ರಜಾnಹೀನ ಸ್ಥಿತಿಯಲ್ಲಿದ್ದಾರೆ, ಹಾಗೇ ಎನ್‌ಡಿಎಗೆ ಸೇರಿದ ಸಮಾಜವಾದಿ ಹಿನ್ನೆಲೆಯ ಜಾರ್ಜ್‌
ಫ‌ರ್ನಾಂಡೀಸ್‌ ಕೂಡ ಪ್ರಜಾnಹೀನ ಸ್ಥಿತಿಯಲ್ಲಿದ್ದಾರೆ.

ಇಂಥವರು ಈಗ ತಮ್ಮ ಪಕ್ಷದಲ್ಲಿ ಸಕ್ರಿಯವಾಗಿ ಇಲ್ಲದ ಕಾರಣವಾಗಿ ಹಾಲಿ ಬಿಜೆಪಿ ಹಾಗೂ ಎನ್‌ಡಿಎಗಳು ಪ್ರಜಾnಹೀನ ಪುಂಡುಪೋಕರಿ ಮಾತುಗಳನ್ನು ಉದುರಿಸುತ್ತಿದ್ದಾರೇನೋ ಎನ್ನಿಸಿಬಿಡುತ್ತದೆ. ಆಮೇಲೆ ತಮ್ಮ ಇನ್ನೊಂದು ಮಾತು-ಹುಟ್ಟಿದಾಗ ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೇ. ಆದರೆ ಅವನು ಮಾಡುವ ಕೆಲಸ ಕಾರ್ಯಗಳಿಂದ ಮನುಷ್ಯನಾಗಿ ಬದಲಾಗುತ್ತಾನೆ ಎನ್ನುತ್ತೀರಿ. ತಮ್ಮ ಕೇಸಲ್ಲಿ ಇದು ಯಾಕೋ ಉಲ್ಟಾ ಅನಿಸುತ್ತದೆ. ತಮ್ಮ ಗದ್ದಲದ ನಡುವೆಯೂ ಸ್ವಲ್ಪಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಗಮನಿಸಿ ಎಂದು ವಿನಂತಿಸುವೆ.

ಮುಂದೆ ತಾವು ರಣರಂಗದಲ್ಲಿ ಠೇಂಕರಿಸುವಂತೆ- ಸಂವಿಧಾನ ಬದಲಾಯಿಸುತ್ತೇವೆ… ಅದಕ್ಕೇ ನಾವು ಬಂದಿರುವುದು ಎನ್ನುತ್ತೀರಿ. ತಮ್ಮಂಥವರ ಕೈಗೇನಾದರೂ ಸಂವಿಧಾನದ ರಚನಾ ಕಾರ್ಯ ಆಗ ಸಿಕ್ಕಿಬಿಟ್ಟಿದ್ದರೆ ಭ್ರಮಾಧೀರನಾದ ತಮ್ಮ ಪೂರ್ವಿಕರು ನರಕ ಸೃಷ್ಟಿಸಿ ಅದನ್ನೇ ಸ್ವರ್ಗ ಅಂದು ಬಿಡುತ್ತಿದ್ದ ರೇನೋ. ಸಂವಿಧಾನ ರಚನಾ ಕಾರ್ಯ ಡಾ.ಅಂಬೇಡ್ಕರ್‌ ಅವರ ಕೈಗೆ ಸಿಕ್ಕಿ ಭಾರತಮಾತೆ ಬಚಾವಾದಳು. ಸಂವಿಧಾನದ ಪ್ರಿಯಾಂಬಲ್‌ ಕಡೆಗೆ ಸಂವಿಧಾನದ ತಿದ್ದುಪಡಿಗಳು ಚಲಿಸುತ್ತ ನಡೆಯಬೇಕಾಗಿದೆ. ನಮ್ಮ ಸಂಸತ್‌ ಸದಸ್ಯರಾದ ತಾವು ಇದನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು.

ಕೊನೆಯದಾಗಿ ತಮಗೊಂದು ಕಿವಿಮಾತು: ಕುವೆಂಪು ಅವರ ವೈಚಾರಿಕತೆಗೆ ತತ್ತರಿಸಿದ ಧರ್ಮಾಂಧರು ತುಂಬಾ ನೀಚವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಕುವೆಂಪು ಅಂಥದ್ದನ್ನೆಲ್ಲ ನಿರ್ಲಕ್ಷಿಸಿ ಹೇಳುತ್ತಾರೆ. ಕುಸ್ತಿ ಅಖಾಡಕ್ಕೆ ಬರುವವರು ಕನಿಷ್ಠ ಲಂಗೋಟಿ ಹಾಕಿ ಬರಬೇಕು… ಲಂಗೋಟಿ ಹಾಕದೆ ಅಖಾಡಕ್ಕೆ ಬರುವವರ ಜೊತೆ ನಾನು ಕುಸ್ತಿ ಆಡಲಾರೆ ಎಂದು. ಕುವೆಂಪು ಅವರ ಈ ಮಾತನ್ನು ತಾವು ಮನನ ಮಾಡಿಕೊಳ್ಳಿ ಎಂದು ವಿನಂತಿಸುವೆ. ಬೀದಿಯನ್ನೇ ಅಖಾಡ ಮಾಡಿಕೊಳ್ಳುವ ತಮ್ಮ ಮತ್ತು ತಮ್ಮಂಥವರ ಮಾನಮರ್ಯಾದೆ ಆಗ ಸ್ವಲ್ಪವಾದರೂ ಉಳಿಯಲೂಬಹುದು.

ಕೊಳಕನ್ನು ಹೀರಿಕೊಂಡು ಸಸ್ಯಗಳು ಫ‌ಲಪುಷ್ಪ ಕೊಡುವಂತೆ ಹೆಗಡೆಯವರ ವಾಕ್‌ ಕೊಳಕನ್ನು ರೂಪಾಂತರಿಸಿಕೊಂಡು ಸೆಕ್ಯುಲರಿಸಂಗೆ ಒಂದು ಪದ ಹುಟ್ಟಿತು. ಅದು ಸಹನಾಧರ್ಮ(Religion of Tolerance) ಈ ಸಹನಾಧರ್ಮ ಆಯಾಯ ಧರ್ಮ ದೊಳಗೂ ಇರಬೇಕು, ಹಾಗೇ ಧರ್ಮ ಧರ್ಮಗಳ ನಡುವೆಯೂ ಇರಬೇಕು. ಈ ನುಡಿ ಹುಟ್ಟಿಗೆ ಕಾರಣರಾದ ಅನಂತಕುಮಾರ್‌ ಹೆಗಡೆಯ ವರಿಗೆ ಕೃತಜ್ಞತೆಗಳು.
– ದೇವನೂರ ಮಹಾದೇವ, ಹಿರಿಯ ಸಾಹಿತಿ

ಟಾಪ್ ನ್ಯೂಸ್

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.