ಲಿಂಗಾಯತ ಸ್ಥಾನಮಾನ: ತಜ್ಞರ ಸಮಿತಿಯೂ, ಸರಕಾರದ ಹೆಜ್ಜೆ  ಗತಿಯೂ 


Team Udayavani, Dec 27, 2017, 11:44 AM IST

Status.jpg

ಲಿಂಗಾಯತ ಸಮುದಾಯಕ್ಕೆ “ಅಲ್ಪಸಂಖ್ಯಾಕರ ಧರ್ಮ’ ಎಂಬ ಪ್ರತ್ಯೇಕ ಧರ್ಮದ ಸ್ಥಾನಮಾನ ಕಲ್ಪಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವ ಸಲುವಾಗಿ ಸಪ್ತ ಸದಸ್ಯ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರುವ ಮೂಲಕ ಸಿದ್ದರಾಮಯ್ಯ ಅವರ ಸರಕಾರ, ಈ ಜ್ವಲಂತ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಪ್ರಪ್ರಥಮ ನಿರ್ಣಾಯಕ ಹೆಜ್ಜೆಯನ್ನು ಇರಿಸಿದಂತಾಗಿದೆ.

ಸರಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಖೀಲ ಭಾರತ ವೀರಶೈವ ಮಹಾಸಭಾದಿಂದ, ಪಂಚಾಚಾರ್ಯ ಮಠಗಳಲ್ಲಿ ಒಂದಾದ ರಂಭಾಪುರಿ ಮಠದ ಪೀಠಾಧೀಶರಿಂದ ಹಾಗೂ ರವಿವಾರ ಗದಗದಲ್ಲಿ ನಡೆದಿರುವ ವೀರಶೈವ-ಲಿಂಗಾಯತ ಸಮಾವೇಶದ ಸಂಘಟಕರಿಂದ ವಿರೋಧ ವ್ಯಕ್ತವಾಗಿದ್ದರೆ, ಇದರಲ್ಲಿ ಅಚ್ಚರಿಯ ಮಾತೇನೂ ಇಲ್ಲ. ವೀರಶೈವರು ಹಾಗೂ ಲಿಂಗಾಯ ತರು ಒಂದೇ ಸಮುದಾಯದವರೇ ಅಥವಾ ಅಲ್ಲವೇ ಎಂಬ ವಿವಾದ ಬಗೆಹರಿದ ಮೇಲಷ್ಟೆ ಸರಕಾರ ನಿರ್ಧಾರವೊಂದನ್ನು ತೆಗೆದುಕೊಳ್ಳುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಇದುವರೆಗೂ ಹೇಳುತ್ತ ಬಂದಿದ್ದರು.

ಇಲ್ಲೊಂದು ಗಮನಿಸಲೇಬೇಕಾದ ಅಂಶವಿದೆ. ಈಗ ಧುತ್ತೆಂದು ತಲೆಯೆತ್ತಿರುವ ಈ ಪ್ರಶ್ನೆಯ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ರಾಜ್ಯ ಅಲ್ಪಸಂಖ್ಯಾಕ ಆಯೋಗಕ್ಕೆ ಮನವಿ ಮಾಡಲಾಗಿರುವುದು ಬಹುಶಃ ಇದೇ ಮೊದಲು. ಲಿಂಗಾಯತರು ಹಿಂದುಗಳೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವಂತೆ ಆಯೋಗವನ್ನು ವಿನಂತಿಸಲಾಗಿದೆಯೇನೋ ನಿಜ. ಇದೇ ವೇಳೆ, ಉತ್ತರಭಾರತದ ರಾಜ್ಯಗಳು ಜೈನ ಸಮುದಾಯದವರ ಸ್ಥಾನ ಮಾನದ ಬಗ್ಗೆ ನಿರ್ಧಾರ ಪ್ರಕಟಿಸುವಂತೆ ಆಯೋಗವನ್ನು ಆಗ್ರಹಿಸಿದ್ದನ್ನೂ, ಇಲ್ಲಿ ನೆನಪಿಸಿಕೊಳ್ಳಬೇಕು. ಈ ನಡುವೆ, ತಾವು ಹಿಂದೂ ಏತರರೆಂದೋ ಧಾರ್ಮಿಕ ಅಲ್ಪಸಂಖ್ಯಾಕರೆಂದೋ ಪ್ರತಿಪಾದಿಸಿ ತಮಗೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವಂತೆ ಆಗ್ರಹಿಸಿರುವ ಹಲಕೆಲವು ಧಾರ್ಮಿಕ ಸಂಘಟನೆಗಳು ಸಲ್ಲಿಸಿರುವ ಮನವಿ ಗಳನ್ನು ನ್ಯಾಯಾಲಯಗಳು ವಿಚಾರಣೆಗೆ ಸ್ವೀಕರಿಸಿ ಪರಿಶೀಲಿಸಿದ್ದುಂಟು. ಈ ಹಿಂದೆ, ಅಲ್ಪಸಂಖ್ಯಾಕ ಧರ್ಮೀಯರೆಂಬ ಸ್ಥಾನಮಾನ ಕಲ್ಪಿಸುವಂತೆ ಕೋರಿ ರಾಮಕೃಷ್ಣ ಮಿಷನ್‌ ಹಾಗೂ ಆರ್ಯ ಸಮಾಜ ಮುಖಂಡರು ಸಲ್ಲಿಸಿದ್ದ ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ್ದನ್ನು ಇದೇ ಅಂಕಣದಲ್ಲಿ ಹೇಳಲಾಗಿದೆ. 

ಹಿಂದೂ ಧರ್ಮದ ಪ್ರತೀಕವೆಂದು ಈಗ ಪರಿಗಣಿಸಲಾಗಿರುವ ಸ್ವಾಮಿ ವಿವೇಕಾನಂದರು, ಹೊಸ ಧಾರ್ಮಿಕ ಶಾಖೆಯೊಂದನ್ನು ಸ್ಥಾಪಿಸಿದ್ದರೆಂದು ಹೇಳುವಷ್ಟು ಮುಂದು ವರಿದಿತ್ತು ರಾಮಕೃಷ್ಣ ಮಿಶನ್‌! ಸ್ವಾಮಿ ವಿವೇಕಾನಂದರು 1893ರಲ್ಲಿ ನಡೆದ ಶಿಕಾಗೋ ಧರ್ಮ ಸಮ್ಮೇಳನದಲ್ಲಿ ಹಿಂದೂ ಸನ್ಯಾಸಿಯೆಂಬ ನೆಲೆಯಲ್ಲಿ ಪಾಲ್ಗೊಂಡಿದ್ದುದು ನಿಜವಾದರೂ, ಮುಂದೆ ಅವರು ಹಿಂದೂ ಧರ್ಮಕ್ಕೆ ತೀರಾ ವಿಭಿನ್ನವಾದ ಧರ್ಮವೊಂದನ್ನು ಬೋಧಿಸಿದರೆಂಬುದು ರಾಮಕೃಷ್ಣ ಮಿಷನ್‌ ನ್ಯಾಯಾಲಯ ದಲ್ಲಿ ವಾದಿಸಿತ್ತು. ಲಿಂಗಾಯತರು ಇದುವರೆಗೂ ತಾವು ಹಿಂದೂಯೇತ ರರೆಂಬ, ಇದೇ ಕಾರಣಕ್ಕೆ ತಮ್ಮನ್ನು ಧಾರ್ಮಿಕ ಅಲ್ಪಸಂಖ್ಯಾಕರೆಂದು ಘೋಷಿಸಬೇಕೆಂಬ ಆಗ್ರಹವನ್ನು ಇನ್ನೂ  ಯಾಲಯದವರೆಗೆ ಒಯ್ದಿಲ್ಲ. ಹಾಗೆ ನೋಡಿದರೆ, ಲಿಂಗಾಯತರು ಹಿಂದೂಗಳೇ ಅಥವಾ ಅಲ್ಲವೇ ಎಂಬ ವಿಷಯದಲ್ಲಿ ಅಥವಾ ಹಿಂದೂ ಧಾರ್ಮಿಕ ವಲಯದ ಜಾತಿ-ಶ್ರೇಣಿ ವ್ಯವಸ್ಥೆಯಲ್ಲಿ ಲಿಂಗಾಯತರ ಸ್ಥಾನ ಮಾನವೇನೆಂಬ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವಾಗಲಿ, ಉಚ್ಚ ನ್ಯಾಯಾಲಯಗಳಾಗಲಿ ತೀರ್ಪು ನೀಡಿಲ್ಲವೆಂದೂ ಹೇಳುವಂತಿಲ್ಲ.

ಅರ್ಥಾತ್‌, ವೈಯಕ್ತಿಕ ದಾವೆಗಳ ವಿಚಾರಣೆ ನಡೆಸಿ ನ್ಯಾಯಾಲಯಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರು ವುದು ಉಂಟು. ನೆನಪಿಸಿಕೊಳ್ಳಿ, 1943ರಷ್ಟು ಹಿಂದೆಯೇ, ಬಾಂಬೆ ಹೈಕೋರ್ಟ್‌ ಲಿಂಗಾಯತರನ್ನು “ಹಿಂದೂ ಪ್ರೊಟೆಸ್ಟೆಂಟ್‌ಗಳು’ ಎಂದು ಘೋಷಿಸಿತ್ತು!

“ಅಲ್ಪಸಂಖ್ಯಾಕ ಹಿಂದೂಯೇತರ’ ನಿಲುವು ಇದೀಗ ಅಲ್ಪಸಂಖ್ಯಾಕರ ಆಯೋಗ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿಂದಿನ ನ್ಯಾಯಾಧೀಶ ಎಚ್‌.ಎನ್‌. ನಾಗ್‌ ಮೋಹನ್‌ ದಾಸ್‌ ಅವರ ನೇತೃತ್ವದ ತಜ್ಞರ ಸಮಿತಿಯ ಮೇಲೆ ದೊಡ್ಡದೊಂದು ಸವಾಲಿನ ಕೆಲಸವನ್ನೇ ಹೇರಿದಂತಾಗಿದೆ. ಲಿಂಗಾ ಯತರು ಹಿಂದುಗಳೇ ಅಥವಾ ಪ್ರತ್ಯೇಕ ಧರ್ಮೀಯರೇ ಎಂಬ ವಿಸ್ಮಯಕಾರಿ ಪ್ರಶ್ನೆಯನ್ನು ಕೇವಲ ನಾಲ್ಕೇ ನಾಲ್ಕು ವಾರಗಳಲ್ಲಿ ಬಗೆಹರಿಸಬಲ್ಲ ನಿರ್ಧಾರವೊಂದನ್ನು ಪ್ರಕಟಿಸುವಂತೆ ಆಯೋಗ ಈ ಸಮಿತಿಗೆ ಸೂಚಿಸಿದೆ. ಈಗ ಇಲ್ಲಿ ಇನ್ನೊಂದೇ ಪ್ರಶ್ನೆ ಉದ್ಭವಿಸುತ್ತದೆ – ಇದು ನಿಜಕ್ಕೂ ತಜ್ಞರ ಸಮಿತಿಯೇ? ಸಮಿತಿಯಲ್ಲಿ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು ಅಥವಾ ಕನ್ನಡ ಸಾಹಿತಿಗಳು, ಓರ್ವ ಲಾಯರ್‌ ಹಾಗೂ ಓರ್ವ ಪತ್ರಕರ್ತ ಇದ್ದಾರೇನೋ ಹೌದು. ಈ ಸಮಿತಿಯಲ್ಲಿ ಹಿಂದೂ ಧರ್ಮ ಮತ್ತದರ ತತ್ವಜ್ಞಾನಕ್ಕೆ ಸಂಬಂಧಿಸಿದ, ವೀರಶೈವ ಅಥವಾ ಲಿಂಗಾಯತ ಸಿದ್ಧಾಂತಕ್ಕೆ ಸಂಬಂಧಿಸಿದ ವಿದ್ವಾಂಸರಿಲ್ಲ. ಮೇಲಾಗಿ ಸಮಿತಿಯ ಕೆಲ ಸದಸ್ಯರು ಹಿಂದೂ ಧರ್ಮಕ್ಕೆ ಹಾಗೂ ಮುಂದು ವರಿದ-ಹಿಂದುಳಿದ ಜಾತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ “ಸಿದ್ಧ ಚಿಂತನೆ’ಗಳನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ. ಲಿಂಗಾ ಯತರ ಒಂದು ವರ್ಗ ಹೇಳುತ್ತಿರುವಂತೆ, ವೀರಶೈವ ಹಾಗೂ ಲಿಂಗಾಯತ ಸಮುದಾಯಗಳು ಪ್ರತ್ಯೇಕ ಧಾರ್ಮಿಕ ಸಮು ದಾಯಗಳಾಗಿರುವುದರಿಂದ ಸಮಿತಿಯಲ್ಲಿ
ಹಿಂದೂ, ವೀರಶೈವ ಹಾಗೂ ಲಿಂಗಾಯತ್ತ ಸಿದ್ಧಾಂತಗಳ, ಅಂತೆಯೇ ಬಸವ ಧರ್ಮ ಕುರಿತಂತೆ ಚಿಂತಿಸಿ ನಿರ್ಣಯ ಪ್ರಕಟಿಸಬಲ್ಲ ವಿದ್ವಾಂಸರಿರಬೇಕೆಂಬ ನಿರೀಕ್ಷೆ ಸಹಜವೇ ಆಗಿದೆ.

ಮುಂದಿನ ವರ್ಷ ಚುನಾವಣೆ ನಡೆಯಲಿದೆ – ಇತ್ಯಾದಿ ಬಾಹ್ಯ ಕಾರಣಗಳನ್ನು ಮುಂದೊಡ್ಡಿ ಕಡಿಮೆ ಅವಧಿಯಲ್ಲಿ ನಿರ್ಧಾರ ಪ್ರಕಟಿಸುವಂತೆ ಸಮಿತಿಯ ಮೇಲೆ ಒತ್ತಡ ಹಾಕುವುದು ತಪ್ಪಾಗುತ್ತದೆ. ಒಂದು ಧರ್ಮವನ್ನು ರಾಜ್ಯಮಟ್ಟದಲ್ಲಿ ಒಡೆಯುವುದು ಎಷ್ಟು ಸರಿ? ಹೋಗಲಿ, ಇದು ಚಿಕ್ಕ ವಿಷಯ ಎಂದು ಅಸಡ್ಡೆ ಮಾಡ ಲಾಗದಂಥ ಗಂಭೀರ ವಿಷಯ ಇದು. ಯಾವುದೇ ಸರಕಾರ, ಇತರ ಯಾವುದೇ ಧರ್ಮಗಳ ವಿಷಯದಲ್ಲಿ ಇಂಥ ಸ್ವಾತಂತ್ರ್ಯ ತೆಗೆದುಕೊಳ್ಳಲು ಸಾಧ್ಯವೇ? ಅಹ್ಮದೀಯರನ್ನು ಹಾಗೂ ದಾವೂದಿ ಬೋಹ್ರಾಗಳನ್ನು ಮುಸ್ಲಿಮೇತರರೆಂದು ಘೋಷಿಸಲು ಭಾರತ ಸರಕಾರ ಮುಂದಾದೀತೆ? 1974ರಲ್ಲಿ ಪಾಕಿಸ್ಥಾನ ಸರಕಾರ, ಅಹ್ಮದೀಯರನ್ನು ಮುಸ್ಲಿಮೇತರರೆಂದು ಘೋಷಿಸುವ ಏಕ ಪಕ್ಷೀಯ ನಿರ್ಧಾರ ವನ್ನು ತೆಗೆದುಕೊಂಡಿತು. ನಮ್ಮ ದೇಶದಲ್ಲಿ ಕೂಡ, ಕೆಲವು ಮುಸ್ಲಿಂ ಸಂಘಟನೆಗಳು ಅಹ್ಮದೀಯರು ಮುಸ್ಲಿಮೇತರರೆಂಬ ಅಭಿಪ್ರಾಯವನ್ನೇ ಹೊಂದಿವೆ; ಅಹ್ಮದೀಯರಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. 

ದಾವೂದಿ ಬೋಹ್ರಾ ಸಮುದಾಯದವರು ಇಂದು ಇಸ್ಲಾಮಿ ಶಿಯಾಗಳ ಸಮುದಾಯಕ್ಕೆ ಅನ್ವಯವಾಗುವ ವೈಯಕ್ತಿಕ ಕಾನೂನನ್ನು ಪಾಲಿಸುತ್ತಿದ್ದಾರಾದರೂ ಹಿಂದೆ ಇವರುಗಳು ಹಿಂದೂ ಕಟ್ಟಳೆಗನುಗುಣವಾಗಿಯೇ ನಡೆದುಕೊಳ್ಳುತ್ತಿದ್ದರು. ಹಿಂದೂಯೇತರ ಸ್ಥಾನಮಾನ ನೀಡಬೇಕೆಂಬ ಲಿಂಗಾಯತರ ಬೇಡಿಕೆಗೆ ಸಿದ್ದರಾಮಯ್ಯ ಸರಕಾರ ತೋರಿಸುತ್ತಿರುವ ಪ್ರತಿಕ್ರಿಯೆ ಹೇಗಿದೆಯೆಂದರೆ, ಇದನ್ನು ಈ ಹಿಂದೆ ಗಾಂಧೀಜಿಯವರು ಪರಿಶಿಷ್ಟ ಜಾತಿಗಳ ವಿಷಯದಲ್ಲಿ ನಡೆದುಕೊಂಡ ರೀತಿಗೆ ಹೋಲಿಸಬಹುದಾಗಿದೆ. 1932ರಲ್ಲಿ ಗಾಂಧೀಜಿ ಬ್ರಿಟಿಷ್‌ ಸರಕಾರದ ಕೋಮುವಾದಿ ದೃಷ್ಟಿಕೋನದ ಆದೇಶವೊಂದನ್ನು ಪ್ರತಿಭಟಿಸುವ ಸಲುವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ
ಕೈಗೊಂಡರು. ಪರಿಶಿಷ್ಟ ಜಾತಿಗಳವರಿಗಾಗಿಯೇ ಪ್ರತ್ಯೇಕ “ಚುನಾಯಕ ಸಮುದಾಯ’ಗಳನ್ನು ರೂಪಿಸಬೇಕೆಂಬುದೇ ಈ ಆದೇಶ. ದಲಿತ (ಆಗ ಈ ಪದದ ಬದಲಿಗೆ “ದಮನಿತ’ ಎಂಬ ಪದವಿತ್ತು) ವರ್ಗಗಳನ್ನು ಪ್ರತ್ಯೇಕಿಸುವ ಮೂಲಕ ಹಿಂದೂ ಸಮುದಾಯವನ್ನು ಒಡೆಯಲು ರಾಮ್ಸೇ ಮೆಕ್‌ಡೊನಾಲ್ಡ್‌ ಅವರ ಲೇಬರ್‌ ಪಕ್ಷದ ಸರಕಾರ ರೂಪಿಸಿದ ಸಂಚು ಇದೆಂದು ಗಾಂಧೀಜಿ ಬೊಟ್ಟು ಮಾಡಿದ್ದರು. ಈ ವಿವಾದದ ಪರಿಣಾಮವಾಗಿ, ಗಾಂಧೀಜಿ ಹಾಗೂ ಬಿ.ಆರ್‌. ಅಂಬೇಡ್ಕರ್‌ ನಡುವೆ ಒಪ್ಪಂದವೊಂದು ಮಾರ್ಪಟ್ಟಿತು. ಇದು ಪೂನಾ ಒಪ್ಪಂದವೆಂದೇ ಇಂದಿಗೂ ಪ್ರಸಿದ್ಧ.

ಪ್ರತ್ಯೇಕ ಮತದಾರ ಕ್ಷೇತ್ರಗಳ ಬದಲಿಗೆ ದಮನಿತ (ದಲಿತ) ವರ್ಗಗಳಿಗೆಂದೇ 148 ಸ್ಥಾನಗಳನ್ನು ಮೀಸಲಿರಿಸಲಾಯಿತು. ಇದಕ್ಕೆ ಸಹಿ ಹಾಕಿದವರಲ್ಲಿ, ಕಾಂಗ್ರೆಸ್‌ ಕಡೆಯಿಂದ (ಹಿಂದೂಗಳ ಕಡೆಯಿಂದ) ಪಂಡಿತ್‌ ಮದನ ಮೋಹನ ಮಾಳವೀಯ, ಸಿ. ರಾಜಗೋಪಾಲಾ ಚಾರಿ, ಡಾ| ರಾಜೇಂದ್ರ ಪ್ರಸಾದ್‌, ಸರ್‌ ತೇಜ ಬಹಾದ್ದೂರ್‌ ಸಪ್ರೂ ಹಾಗೂ ಸರ್‌ ಎಂ.ಆರ್‌. ಜಯಕರ್‌ ಇವರುಗಳಿದ್ದರೆ, ದಮನಿತ ವರ್ಗಗಳ ಪರವಾಗಿ ಡಾ| ಅಂಬೇಡ್ಕರ್‌, ರಾವ್‌ ಬಹಾದ್ದೂರ್‌ ಆರ್‌. ಶ್ರೀನಿವಾಸನ್‌, ಎಂ.ಸಿ. ರಾಜಾ ಹಾಗೂ ಖ್ಯಾತ ಕ್ರಿಕೆಟರ್‌ ಪಲ್ವಂಕರ್‌ ಬಾಲೂ ಸಹಿ ಮಾಡಿದ್ದರು. ಈ ಮೂಲಕ ಗಾಂಧೀಜಿ ಪರಿಶಿಷ್ಟ ಜಾತಿಗಳನ್ನು ಹಿಂದೂ ಧರ್ಮದ ಕಕ್ಷೆಯಿಂದ ಹೊರಹೋಗದಂತೆ ತಡೆದಿದ್ದರು. ಆದರೂ ಹಿಂದೂಗಳು ಅಸ್ಪೃಶ್ಯ ತೆಯ ಧೋರಣೆಯನ್ನು ಪಾಲಿಸುತ್ತಿದ್ದುದರಿಂದ ಇಂಥ ಪ್ರತ್ಯೇಕ ತಾವಾದದ ಪ್ರಮಾದದ ಹೊಣೆಯನ್ನು ಹಿಂದೂಗಳೇ ಹೊರಬೇ ಕಾಗುತ್ತದೆ ಎಂದಿದ್ದರು ಗಾಂಧಿ. 

ರಾಮ್ಸೇ ಮೆಕ್‌ಡೊನಾಲ್ಡ್‌ ಅವರ ಕೋಮುವಾದಿ ನಿರ್ದೇಶ, ಹಿಂದೂ ಧರ್ಮವನ್ನು ನಾಶ ಮಾಡುವ ಉದ್ದೇಶದ ವಿಷಮಯ ಚುಚ್ಚುಮದ್ದು ಎಂದು ಗಾಂಧೀಜಿ ಬಣ್ಣಿಸಿದ್ದರು. ಯಾರೋ ಆರೆಸ್ಸೆಸ್‌ ಮುಖಂಡರಿಗಿಂತ ಹೆಚ್ಚಿನ ಸೇವೆಯನ್ನು ಗಾಂಧೀಜಿ ಈ ಮೂಲಕ ಹಿಂದೂ ಸಮುದಾಯಕ್ಕೆ ಸಲ್ಲಿಸಿದ್ದರು. ಪೂನಾ ಒಪ್ಪಂದಕ್ಕೆ ಸಹಿಬೀಳುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗಳು ಅತ್ಯಂತ ಸಂಕಷ್ಟಕರ ಸನ್ನಿವೇಶದಲ್ಲಿದ್ದವು. ಅವುಗಳ ಅಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂದಿನ ಲಿಂಗಾಯತ ಸಮುದಾಯದವರು ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲ, ಇತರ ವಿವಿಧ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸಿದ್ದಾರೆ. ತಮ್ಮದು ಅಲ್ಪಸಂಖ್ಯಾಕ ಧರ್ಮವೆಂದು ಪರಿಗಣಿಸಲ್ಪಡಬೇಕೆಂದು ವಾದಿಸುತ್ತಿರುವವರು, ತಮ್ಮ ವಿರುದ್ಧ ಯಾರಾದರೂ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆಯೇ, ಹಿಂದೂ ಧರ್ಮದ ಇತರ ಕವಲುಗಳ ಮಂದಿಯಿಂದ ತಮಗೇನಾದರೂ ಅನಾನುಕೂಲ  ವಾಗುತ್ತಿದೆಯೆ ಎಂಬುದನ್ನು ಇದುವರೆಗೂ ಸ್ಪಷ್ಟವಾಗಿ ಹೇಳಿಲ್ಲ. 

ಲಿಂಗಾಯತ ಸಮುದಾಯದಲ್ಲಿ ಹಿಂದುಳಿತ ಉಪಜಾತಿಗಳವರು ಇದ್ದಾರೆಂದು ಕೆಲ ಲಿಂಗಾಯತ ಮುಖಂಡರು ಹೇಳುತ್ತಿದ್ದಾರಾದರೂ, ಈ ಸಮುದಾಯದವರನ್ನು ಹಿಂದುಳಿದವರೆಂದು ಪರಿಗಣಿಸುತ್ತಿರುವುದು ಕೆಲವೇ ಕೆಲವರು ಹಿಂದೂಗಳಷ್ಟೆ. ಅಥವಾ ಹಾಗೆ ಪರಿಗಯಿಸುತ್ತಿರುವವರು ಯಾರೂ ಇಲ್ಲವೆಂದರೂ ನಡೆದೀತು. ಇತರ ಎಲ್ಲ ಹಿಂದೂಗಳಲ್ಲಿರುವ ಜಾತಿ ಪದ್ಧತಿಯಂತೆಯೆ ಲಿಂಗಾಯತರೂ ಒಂದು ಜಾತಿ ಆಧರಿತ ಹಾಗೂ ವರ್ಗ ಆಧರಿತ ಸಮಾಜವಾಗಿ ಉಳಿದುಕೊಂಡಿದ್ದಾರೆ.  ತಾವು ಸಂವಿಧಾನದ 29 ಹಾಗೂ 30ನೆಯ ವಿಧಿಗಳಡಿಯಲ್ಲಿ ಬರುವ “ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುಗಳತ್ತ ಕಣ್ಣಿಟ್ಟಿಲ್ಲ’ ಎಂದು ಕೆಲ ಲಿಂಗಾಯತ ಧಾರ್ಮಿಕ ಮುಖಂಡರು ಹೇಳಿಕೊಂಡಿರುವರಾದರೂ ಲಿಂಗಾಯತರಲ್ಲೇ
ಕೆಲವರು ನೀಡಿರುವ ಹೇಳಿಕೆಗಳು ಈ ಹೇಳಿಕೆಗೆ ವಿರುದ್ಧವಾಗಿವೆ. 

1970ರ ದಶಕದ ಮಧ್ಯಭಾಗದಲ್ಲಿ ಆಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಜೆ.ಬಿ. ಮಲ್ಲಾರಾಧ್ಯ ಅವರು, ವೀರಶೈವ ಲಿಂಗಾಯತರದು ಒಂದು ವಿಶಿಷ್ಟ ಅಲ್ಪಸಂಖ್ಯಾಕ ಧರ್ಮವೆಂದು ಹೇಳಿದ್ದರೆ, ಅದಕ್ಕೊಂದು ಕಾರಣವಿತ್ತು. ಅಂದು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಹಾವನೂರ್‌ ಆಯೋಗ, ವೀರಶೈವ ಲಿಂಗಾಯತ ಸಮುದಾಯವನ್ನು ಮುಂದುವರಿದ ಜಾತಿ/ವರ್ಗವೆಂದು ಪರಿಗಣಿಸೀತೆಂಬ ಭೀತಿ ಅವರಿಗಿತ್ತು. ರಾಜ್ಯ ಅಲ್ಪಸಂಖ್ಯಾಕರ ಆಯೋಗದಂಥ ಆಯೋಗಗಳು ಇತರ ರಾಜ್ಯಗಳಲ್ಲೂ ಇವೆ; ಜೈನ ಸಮುದಾಯವನ್ನು ಅಲ್ಪಸಂಖ್ಯಾಕ ಸಮುದಾಯವೆಂದು ವರ್ಗೀಕರಿಸಿರುವ ಆಯೋಗ ಇವುಗಳಲ್ಲೊಂದು. ಉತ್ತರಪ್ರದೇಶದ ಆಯೋಗ ಈ ಮಾತಿಗೆ ಉದಾಹರಣೆ. 2014ರಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರಕಾರ, ನ್ಯಾಯಾಲಯಗಳಲ್ಲಿ ಬಾಕಿಯಿರುವ ಕೇಸುಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಜೈನಧರ್ಮೀಯರಿಗೆ ಅಲ್ಪಸಂಖ್ಯಾಕರ ಸ್ಥಾನ-ಮಾನ ಕಲ್ಪಿಸಿತು. 

ಇದಕ್ಕೂ ಮುನ್ನ, ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗ ಜೈನರನ್ನು ಮುಸ್ಲಿಂ, ಕ್ರೈಸ್ತ, ಸಿಕ್ಖ್ ಹಾಗೂ ಪಾರ್ಸಿಗಳ ಜತೆಯಲ್ಲೆ ಅಲ್ಪಸಂಖ್ಯಾಕ ಅಥವಾ ಧಾರ್ಮಿಕ ಅಲ್ಪಸಂಖ್ಯಾಕ ಸ್ಥಾನಮಾನವನ್ನು ನಿರ್ದಿಷ್ಟ ರಾಜ್ಯವೊಂದರಲ್ಲಿನ ಜನಸಂಖ್ಯೆ ಅಂಕಿ-ಅಂಶದ ಆಧಾರದಲ್ಲಿ ನಿರ್ಧರಿಸಬೇಕೇ ಹೊರತು, ಒಟ್ಟಾರೆಯಾಗಿ ಇಡೀ ದೇಶದ ಜನಸಂಖ್ಯೆಯ ಆಧಾರದಲ್ಲಿ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. (ಟಿ.ಎಂ.ಎ. ಪೈ ಪ್ರತಿಷ್ಠಾನ ಹಾಗೂ ಇತರರು ಮತ್ತು ಕರ್ನಾಟಕ ರಾಜ್ಯ ಸರಕಾರದ ನಡುವಿನ ಪ್ರಕರಣ -2002). ಲಿಂಗಾಯತರು ಹಿಂದೂಗಳೇ ಅಥವಾ ಅಲ್ಲವೆ ಎಂಬುದನ್ನು ನಿರ್ಧರಿಸುವ ಮೊದಲು, ಅವರನ್ನು ಕರ್ನಾಟಕ ಅಥವಾ ಇತರ ಯಾವುದೇ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾಕರೆಂದು
ವರ್ಗೀಕರಿಸಬೇಕಾಗುತ್ತದೆ. ಸಂವಿಧಾನದ ವಿವಿಧ ವಿಧಿಗಳಡಿ ಯಲ್ಲಿ ಅಲ್ಪಸಂಖ್ಯಾಕರ ಬಗ್ಗೆ ಉಲ್ಲೇಖವಿದೆಯಾದರೂ, “ಅಲ್ಪ  ಸಂಖ್ಯಾಕ’ ಎಂಬ ಪದಕ್ಕೆ ಇದಮಿತ್ಥಂ ಎಂಬಂಥ ವ್ಯಾಖ್ಯೆಯೊಂದು ಸಂವಿಧಾನದಲ್ಲಿ ಇಲ್ಲ. ಕೇವಲ ಆಂಗ್ಲೋ ಇಂಡಿಯನ್ನರನ್ನಷ್ಟೇ, 366ನೆಯ ವಿಧಿಯಡಿಯಲ್ಲಿ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ದೇಶದಲ್ಲಿರುವ ನಿಜವಾದ ಅಲ್ಪಸಂಖ್ಯಾಕ ಸಮುದಾಯಗಳೆಂದರೆ ಆಂಗ್ಲೋ ಇಂಡಿಯನ್ನರು, ಪಾರ್ಸಿಗಳು ಹಾಗೂ ಯಹೂದಿಗಳದು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಟಾಪ್ ನ್ಯೂಸ್

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.