ವಿಟ್ಲ ಪ.ಪಂ.: ಸಮಾಲೋಚನೆ ಸಭೆ 

Team Udayavani, Dec 27, 2017, 2:22 PM IST

27-Dec-12.jpg

ವಿಟ್ಲ: ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಇನ್ನಷ್ಟು ಆಗಬೇಕಾಗಿದೆ. ಎಲ್ಲ ಕಾಮಗಾರಿಗಳೂ ಒಂದೇ ವರ್ಷದಲ್ಲಿ ಪೂರ್ತಿಯಾಗುವುದಿಲ್ಲ. ರಸ್ತೆ, ನೀರು, ವಿದ್ಯುತ್‌ ಯೋಜನೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಸ್ತ ನಾಗರಿಕರು ಚರ್ಚಿಸಿದಾಗ ಬಜೆಟ್‌ ಹೊಂದಾಣಿಕೆಗೆ ಅನುಕೂಲವಾಗುತ್ತದೆ ಎಂದು ಪ.ಪಂ. ಅಧ್ಯಕ್ಷ ಅರುಣ್‌ ಎಂ.ವಿಟ್ಲ ಹೇಳಿದರು. ಅವರು ಮಂಗಳವಾರ ವಿಟ್ಲ ಪಟ್ಟಣ ಪಂಚಾಯತ್‌ ಸಭಾಭವನದಲ್ಲಿ ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಪ್ರಗತಿಪರ ಕೃಷಿಕ ಒಕ್ಕೆತ್ತೂರು ಸೀತಾರಾಮ ಶೆಟ್ಟಿ ವಿಟ್ಲ ಪೇಟೆಯ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿ ಇದೆ. ಆದರೆ ಅದಿನ್ನೂ ಆಗಲಿಲ್ಲ ಎಂದರು. ಆ ಬಗ್ಗೆ ಮೆಸ್ಕಾಂ ಎಸ್ಟಿಮೇಟನ್ನು
ಲೋ. ಇಲಾಖೆಗೆ ಕಳುಹಿಸಿದೆ. ಇಲಾಖೆ ಅನುದಾನ ಬಿಡುಗಡೆ ಮಾಡಿದ ಕೂಡಲೇ ಸ್ಥಳಾಂತರಿಸುತ್ತೇವೆ ಎಂಬ ಉತ್ತರ ಬಂದಿದೆ ಎಂದು ಅಧ್ಯಕ್ಷರು ತಿಳಿಸಿದರು.

ಗ್ರಾ.ಪಂ. ಮಾಜಿ ಸದಸ್ಯ ವೀರಪ್ಪ ಗೌಡ ರಾಯರಬೆಟ್ಟು ಅವರು ಮಾಡ, ಬೊಡ್ಡೋಣಿ ಮತ್ತಿತರ ಕಡೆಗಳಲ್ಲಿ ರಸ್ತೆಯ ಆವಶ್ಯಕತೆಯಿದೆ ಎಂದರು. ಅನಂತಪ್ರಸಾದ್‌ ವಿಟ್ಲ ಅವರು ಸಮಗ್ರ ಕುಡಿಯುವ ನೀರಿನ ಯೋಜನೆ, ನಾಲ್ಕು ರಸ್ತೆಗಳಲ್ಲಿ ಸ್ವಾಗತ ನಾಮಫಲಕದ ಅಗತ್ಯತೆ ಬಗ್ಗೆ ತಿಳಿಸಿದರು. ವಿಟ್ಠಲ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಿರಣ್‌ ಕುಮಾರ್‌ ಅವರು ಬ್ರಹ್ಮಾವರ ಕೂಜಪ್ಪಾಡಿ ರಸ್ತೆ ಅಭಿವೃದ್ಧಿ, ಶಾಲಾ ರಸ್ತೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಫುಟ್‌ಪಾತ್‌ ನಿರ್ಮಾಣವಾಗಬೇಕು ಎಂಬ ಬೇಡಿಕೆ ಮುಂದಿಟ್ಟರು. ಪ.ಪಂ. ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ ಅವರು ಸಂತೆಯನ್ನು ಹೊಸ ಜಾಗಕ್ಕೆ ಸ್ಥಳಾಂತರಿಸಬೇಕು ಎಂದರು.

ವಿಟ್ಲದಲ್ಲಿ ಉದ್ಯಾನವನ, ಈಜು ಕೊಳ, ಬೊಬ್ಬೆಕೇರಿ ಕಟ್ಟೆಯಿಂದ ದೇವಸ್ಥಾನ, ಸಮುದಾಯ ಆಸ್ಪತ್ರೆಯ ಮಾರ್ಗ, ದೇವಸ್ಯ ಮಾರ್ಗ, ಪ್ರಮುಖ ರಸ್ತೆಯ ಬೃಹತ್‌ ಹೊಂಡಗಳಿಗೆ ಮುಕ್ತಿ, ಇಂಟರ್‌ಲಾಕ್‌ ಮೂಲಕ ರಸ್ತೆ ಅಭಿವೃದ್ಧಿ,
ವಾಹನ ಪಾರ್ಕಿಂಗ್‌ಗೆ ಸೂಕ್ತ ಜಾಗ ಗುರುತಿಸುವಿಕೆ, ಹಳೆ ಬಸ್‌ ನಿಲ್ದಾಣ ಡಾಮರು ಮೊದಲಾದ ಬೇಡಿಕೆಗಳನ್ನು
ಮಂಡಿಸಲಾಯಿತು.

ಅಧ್ಯಕ್ಷರು, ಇದೆಲ್ಲದಕ್ಕೂ ಅನುದಾನ ಮಂಜೂರುಗೊಳಿಸಲು ಪ್ರಯತ್ನಿಸಲಾಗುವುದು. ಶೀಘ್ರದಲ್ಲೇ ಹಳೇ ಬಸ್‌ ನಿಲ್ದಾಣ ಡಾಮರು ಕಾಮಗಾರಿ ಆರಂಭವಾಗಲಿದೆ ಎಂದರು. ಚಂದಳಿಕೆ ರಸ್ತೆ, ಅಡ್ಡದ ಬೀದಿ ಬೈಪಾಸ್‌ ರಸ್ತೆ ಮೊದಲಾದ ಕಾಮಗಾರಿಗಳು ನಗರೋತ್ಥಾನ ಯೋಜನೆಯಲ್ಲಿ ಜ.7ರ ಬಳಿಕ ಆರಂಭವಾಗಲಿವೆ ಎಂದರು.

ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ ಮಾತನಾಡಿ, ಪ.ಪಂ.ನಲ್ಲಿ ತೆರಿಗೆದಾರರಿಗೆ ಯಾವುದೇ ತಾರತಮ್ಯ ಮಾಡಿಲ್ಲ. ವಾಣಿಜ್ಯ ಮಳಿಗೆಗಳ ವಿಸ್ತೀರ್ಣ ಕಡಿಮೆ ಇರುವುದರಿಂದ ಅವರ ಮೊತ್ತ ಕಡಿಮೆಯಾಗಿದೆ. ಮನೆಗಳ ವಿಸ್ತೀರ್ಣ ಜಾಸ್ತಿಯಾಗಿದ್ದಲ್ಲಿ ಅವರಿಗೆ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಕಸ ವಿಲೇವಾರಿಯಲ್ಲಿ ಪ್ರತಿ ಮನೆಯಿಂದ ವಸೂಲಿ ಮಾಡುತ್ತಿದ್ದ ವಾರ್ಷಿಕ 600 ರೂ.ಗಳನ್ನು ಕಡಿತಗೊಳಿಸಿ, ಹಂಚಿನ ಮನೆಗೆ ವಾರ್ಷಿಕ 120 ಮತ್ತು ತಾರಸಿ ಮನೆಗಳಿಗೆ 180 ರೂ. ಗಳನ್ನು ನಿಗದಿಪಡಿಸಲಾಗಿದೆ. ಇದೆಲ್ಲವೂ ಪ.ಪಂ. ವ್ಯಾಪ್ತಿಯ ನಾಗರಿಕರಿಗೆ ಅನುಕೂಲಕರವಾಗಿಯೇ ಇದೆ. ಆದುದರಿಂದ ಯಾವುದೇ ರೀತಿಯಲ್ಲಿ ತೆರಿಗೆ ದರವು ಅವೈಜ್ಞಾನಿಕವಲ್ಲ. ಮೂರು ವರ್ಷದಲ್ಲಿ ಈ ತೆರಿಗೆ ದರವನ್ನು ಪರಿಷ್ಕರಿಸಲಾಗುತ್ತದೆ ಎಂದರು. ವಿಪಕ್ಷ ನಾಯಕ ಅಶೋಕ್‌ ಕುಮಾರ್‌ ಶೆಟ್ಟಿ, ಪ.ಪಂ.ಸದಸ್ಯರು, ಮುಖ್ಯಾಧಿಕಾರಿ ಮಾಲಿನಿ, ಸಿಬಂದಿ ರತ್ನಾ ಮೊದಲಾದವರು ಉಪಸ್ಥಿತರಿದ್ದರು. ಪೂವಪ್ಪ ಬೊಳಂತಿ ಮೊಗರು ಸ್ವಾಗತಿಸಿದರು.

ಬೀಳುವ ಹಂತದಲ್ಲಿ ಅಂಗನವಾಡಿ ಕೇಂದ್ರ
ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ ಮಾತನಾಡಿ, ವಿಟ್ಲ ಪ.ಪಂ.ನಲ್ಲಿ 23 ಅಂಗನವಾಡಿಗಳಿವೆ. ಅದರಲ್ಲಿ ನಾಲ್ಕು
ಅಂಗನವಾಡಿಗಳು ಬೀಳುವ ಹಂತದಲ್ಲಿವೆ. ಗ್ರಾ.ಪಂ. ವ್ಯಾಪ್ತಿಯಲ್ಲಿದ್ದಾಗ ತಾ.ಪಂ., ಜಿ.ಪಂ.ಗಳ ಅನುದಾನ ನೀಡ
ಲಾಗುತ್ತಿತ್ತು. ದುರಸ್ತಿಗೂ ಅನುದಾನ ಬರುತ್ತಿತ್ತು. ಪ.ಪಂ. ವ್ಯಾಪ್ತಿಯಲ್ಲಿರುವ ಅಂಗನವಾಡಿಗಳಿಗೆ ಬೇರೆ ಅನುದಾನ
ಗಳೂ ಬರುವುದಿಲ್ಲ, ಪ.ಪಂ. ಕೂಡ ಅನುದಾನ ನೀಡುವುದಿಲ್ಲ. ಇದಕ್ಕೇನು ಮಾಡಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸಿ ಪ.ಪಂ.ನಲ್ಲಿ ಅಂಗನವಾಡಿಗಳಿಗೆ ಅನುದಾನ ನೀಡಲಾಗುವುದಿಲ್ಲ. ಆದರೆ ಈ ಬಗ್ಗೆ ತಜ್ಞರಲ್ಲಿ ಚರ್ಚಿಸಿ, ಮುಂದಿನ ತೀರ್ಮಾನ ಪ್ರಕಟಿಸುತ್ತೇವೆ ಎಂದರು.

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.