ನೆಲ್ಯಾಡಿಗೆ 9ನೇ ಸ್ಥಾನ: ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗೌರವ


Team Udayavani, Dec 27, 2017, 3:43 PM IST

27-Dec-16.jpg

ನೆಲ್ಯಾಡಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಹಲವು ಮಾನದಂಡಗಳನ್ನು ಬಳಸಿ ಗುರುತಿಸಿದ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, ಪುತ್ತೂರು ತಾಲೂಕಿನ ನೆಲ್ಯಾಡಿ 9ನೇ ಸ್ಥಾನದಲ್ಲಿದೆ.

2011ರ ಗಣತಿಯಂತೆ 5504 ಜನಸಂಖ್ಯೆ ಹೊಂದಿರುವ ನೆಲ್ಯಾಡಿ ಗ್ರಾಮವು ತಾಲೂಕು ರಚನೆ ಹೋರಾಟದಲ್ಲಿ ಬಹಳ ಹಿಂದೆಯೇ ಗುರುತಿಸಿಕೊಂಡಿದೆ. ಆದರೆ, ಕಡಬಕ್ಕೆ ತಾ| ಭಾಗ್ಯ ಒದಗಿತು. ಎರಡು ದಶಕಗಳ ಹಿಂದೆ ನೆಲ್ಯಾಡಿಯಲ್ಲಿದ್ದುದು ಬೆರಳೆಣಿಕೆ ಕಟ್ಟಡಗಳು. ಕೇರಳದಿಂದ ಬಂದವರು ಈ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ. ಇದರ ಜತೆಗೆ ಶಿಕ್ಷಣ ಕ್ರಾಂತಿಯನ್ನೂ ಕಂಡಿದೆ.

ಅಭಿವೃದ್ಧಿಗೆ ಒತ್ತು
ಮೂಲಸೌಕರ್ಯ, ಮಹಿಳಾ ಸಬಲೀಕರಣ, ಆರ್ಥಿಕ ಅಭಿವೃದ್ಧಿ, ಆರೋಗ್ಯ, ಬಯಲು ಬಹಿರ್ದೆಸೆಮುಕ್ತ ಗ್ರಾಮ ಪುರಸ್ಕಾರ, ನಿರ್ಮಲ ಗ್ರಾಮ ಪುರಸ್ಕಾರ, ಎಲ್ಲ ಮನೆಗಳಿಗೂ ವಿದ್ಯುತ್‌, ಕುಡಿಯುವ ನೀರು, 1331 ಶೌಚಾಲಯಗಳು, 2 ಜನತಾ ಕಾಲನಿಗಳು, ಜನಪ್ರತಿನಿಧಿಗಳ ಸಂಘಟಿತ ಹೋರಾಟದಲ್ಲಿ ಮಂಜೂರಾದ ವಿ.ವಿ. ಘಟಕ, ವಸತಿ ಯೋಜನೆ, ನಿವೇಶನ ಹಂಚಿಕೆ, ಅನುದಾನ ಸದ್ಬಳಕೆ, ಸಾಹಿತ್ಯ ಸಮ್ಮೇಳನ, ಯುವಜನ ಮೇಳ, ಕೃಷಿ ಮೇಳ, ಗಾಂಧಿ ಮೈದಾನ, ಸಂತೆ ಮಾರುಕಟ್ಟೆ, ಧರ್ಮಸ್ಥಳ ಯೋಜನೆ ಸೇರಿ 120ಕ್ಕೂ ಹೆಚ್ಚು ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳು, ಪ್ರಗತಿಬಂಧು ತಂಡಗಳು, ನವೋದಯ, ಕಿಡ್ಸ್‌ ಸಂಸ್ಥೆ ಘಟಕಗಳು, ಲಯನ್ಸ್‌ – ಜೇಸೀಸ್‌ ಕ್ಲಬ್‌ ಗಳು, ಅಂಗನವಾಡಿ, ಸ. ಶಾಲೆಗಳಲ್ಲಿ ಶೌಚಾಲಯ ಹೊಂದಿರುವ ಈ ಗ್ರಾಮದಲ್ಲಿ ಶೇ. 80 ರಷ್ಟು ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾ.ಉ.ಸಂಘಗಳು, ರಬ್ಬರ್‌ ಖರೀದಿ ಸ. ಸಂಘಗಳು, ಕ್ಯಾಂಪ್ಕೋ ಇತ್ಯಾದಿ ವ್ಯವಹಾರಗಳೂ ನೆಲ್ಯಾಡಿಯ ಅಭಿವೃದ್ಧಿಗೆ ಕೈಜೋಡಿಸಿವೆ.

ಬೆಳ್ಳಾರೆ 16, ಸಂಪಾಜೆ 19
ಬೆಳ್ಳಾರೆ ಡಿ. 26: ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಳ್ಳಾರೆ ಗ್ರಾ.ಪಂ.ಗೆ 16ನೇ ರ್‍ಯಾಂಕ್‌, ಸಂಪಾಜೆಗೆ 19ನೇ ರ್‍ಯಾಂಕ್‌ ದೊರೆತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳ ಅಡಿಯಲ್ಲಿ 41,617 ಗ್ರಾಮ ಪಂಚಾಯತ್‌ಗಳ ಮಾಹಿತಿಯನ್ನು ಸಂಗ್ರಹಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ. ರ‍್ಯಾಂಕಿಂಗ್‌ಗೆ ಒಟ್ಟು 100 ಅಂಕಗಳಿಗೆ 6 ಮಾನದಂಡಗಳನ್ನು ನಿಗದಿ ಮಾಡಿ ವಿವಿಧ ವಿಭಾಗಳಿಗೆ ಗರಿಷ್ಠ ಅಂಕ ನೀಡಲಾಗಿತ್ತು. ಪ್ರಾಥಮಿಕ ಮಾನದಂಡಗಳಿಗೆ ಗರಿಷ್ಠ 4 ಅಂಕ, ಪ್ರಮುಖ ಮೂಲಸೌಕರ್ಯಕ್ಕೆ ಗರಿಷ್ಠ 64 ಅಂಕ, ಆರ್ಥಿಕ ಅಭಿವೃದ್ಧಿ ಮತ್ತು ಜೀವನಾಧಾರಕ್ಕೆ ಗರಿಷ್ಠ 4 ಅಂಕ, ಆರೋಗ್ಯ, ಪೌಷ್ಟಿಕಾಂಶ ಮತ್ತು ನೈರ್ಮಲ್ಯಕ್ಕೆ 18 ಅಂಕ, ಮಹಿಳಾ ಸಬಲೀಕರಣಕ್ಕೆ 7 ಅಂಕ, ಆರ್ಥಿಕ ಒಳಗೊಳ್ಳುವಿಕೆಗೆ ಗರಿಷ್ಠ ಮೂರು ಅಂಕ ಹೀಗೆ ಒಟ್ಟಾರೆ 100 ಅಂಕಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ.

ಶಿಕ್ಷಣ ಸಂಸ್ಥೆಗಳ ಪಾತ್ರ
ನೆಲ್ಯಾಡಿ ಅತ್ಯುತ್ತಮ ಗ್ರಾಮವಾಗಿ ಆಯ್ಕೆಯಾಗಿದ್ದು, ಇಲ್ಲಿಯ ಜನರ ಸೌಹಾರ್ದ ಬದುಕಿಗೆ ಮತ್ತು ಪ್ರಗತಿಗೆ ಸಂದ ಗೌರವ. ಸಂತ ಜಾರ್ಜ್‌ ವಿದ್ಯಾ ಸಂಸ್ಥೆ 40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಗ್ರಾಮ ಬಹಳಷ್ಟು ಬೆಳೆದಿದೆ. ರಸ್ತೆಗಳು, ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್‌ ಸೌಕರ್ಯಗಳಲ್ಲಿ ಸುಧಾರಣೆ ಕಂಡಿದೆ. ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೇ ಜನಪ್ರತಿನಿಧಿಗಳಾಗಿ ಜನಸೇವೆ ಮಾಡುತ್ತಿದ್ದಾರೆ.
ಅಬ್ರಹಾಂ ವರ್ಗೀಸ್‌, ಸಂಚಾಲಕರು.
ಸಂತ ಜಾರ್ಜ್‌ ವಿದ್ಯಾಸಂಸ್ಥೆ, ನೆಲ್ಯಾಡಿ

ವಿದ್ಯುತ್‌ ಸಂಪರ್ಕ ಬೇಕು
ದೇಶದ ಅತ್ಯುತ್ತಮ ಗ್ರಾಮಗಳ ಪೈಕಿ ನೆಲ್ಯಾಡಿಗೆ 9ನೇ ಸ್ಥಾನ ಲಭಿಸಿದೆ. ಪಾರಂಪರಿಕ ಕೃಷಿ ಮಾಡುತ್ತಿದ್ದ ಇಲ್ಲಿನ ರೈತರು ಇತ್ತೀಚೆಗೆ ಹಲವು ವಾಣಿಜ್ಯ ಬೆಳೆಗಳನ್ನೂ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಿದ್ದಾರೆ. ಸೇವಾ ಸಹಕಾರ ಬ್ಯಾಂಕ್‌, ಕ್ಯಾಂಪ್ಕೋ, ರಬ್ಬರ್‌ ಸೊಸೈಟಿ, ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳ ಸಹಕಾರವೂ ಸಾಕಷ್ಟಿದೆ. ಇಲ್ಲಿನ ವಿದ್ಯುತ್‌ ಉಪಕೇಂದ್ರದಿಂದ ಸಾಕಷ್ಟು ಉತ್ತಮ ಗುಣಮಟ್ಟದ ವಿದ್ಯುತ್‌ ದೊರೆತಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಬೆಳೆಯಲು ಸಾಧ್ಯವಿದೆ.
ಜಯಪ್ರಕಾಶ್‌ ಎನ್‌.ಇ.,
  ನೆಕ್ರಾಜೆ, ಕೃಷಿಕರು

‌ಕನಸಿನ ಕೂಸು
ನೆಲ್ಯಾಡಿಯು ಕೃಷಿಯೊಂದಿಗೆ ವಾಣಿಜ್ಯ ಬೆಳೆಗಳನ್ನೂ ಅಳವಡಿಸಿಕೊಂಡಿದ್ದು ಪ್ರಗತಿಗೆ ಕಾರಣವಾಗಿದೆ. ಧರ್ಮಸ್ಥಳದ
ಧರ್ಮಾಧಿಕಾರಿಗಳ ಕನಸಿನ ಕೂಸಾದ ಗ್ರಾಮಾಭಿವೃದ್ಧಿ ಯೋಜನೆ ಪ್ರಯೋಜನ ನೆಲ್ಯಾಡಿಗೆ ದೊರೆತಿದೆ. ಎಲ್ಲ
ಜನಪ್ರತಿನಿಧಿಗಳು ಪಕ್ಷಭೇದ ಮರೆತು ಅಭಿವೃದ್ಧಿಗೆ ಶ್ರಮಿಸಿದ್ದು ಸಾರ್ಥಕವಾಗಿದೆ. 
ಜಯರಾಮ ಶೆಟ್ಟಿ. ಗೌರಿಜಾಲು,
   ಪ್ರಗತಿಪರ ಕೃಷಿಕ

ಜನಪ್ರತಿನಿಧಿಗಳ ಸಹಕಾರ
ಎರಡನೇ ಅವಧಿಗೆ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷನಾಗಿದ್ದೇನೆ. ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಿನ್ನೆಲೆಯಲ್ಲಿ ನೆಲ್ಯಾಡಿ ಗ್ರಾಮವು ದೇಶದ ಅಗ್ರ 10 ಗ್ರಾಮಗಳಲ್ಲಿ ಸ್ಥಾನ ಪಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
ಜಯಾನಂದ ಬಂಟ್ರಿಯಾಲ್‌,
   ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರು

ಗುರುಮೂರ್ತಿ ಎಸ್‌. ಕೊಕ್ಕಡ 

ಟಾಪ್ ನ್ಯೂಸ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

3

Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!

2

Vitla: ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

1

Vitla: ಇಂದಿರಾ ಕ್ಯಾಂಟೀನ್‌ ಊಟ ಇನ್ನೂ ಲೇಟಿದೆ!

3-aranthodu

Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

15-uv-fusion

UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು

13-

Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.