ಫ್ಲೆಕ್ಸ್‌ಗಳಿಂದ ಪ್ರಚಾರ ಪಡೆಯೋರಿಂದ ಅಭಿವೃದ್ಧಿ ಸಾಧ್ಯವೇ
Team Udayavani, Dec 27, 2017, 5:05 PM IST
ಮೂಗೂರು (ತಿ.ನರಸೀಪುರ): 25 ಕೇವಲ ಪತ್ರಿಕೆ, ಫ್ಲೆಕ್ಸ್‌ಗಳಲ್ಲಿ ಪ್ರಚಾರ ಪಡೆದು ತನಗೆ ತಾನೇ ಹಿರಿಯ ಮುಖಂಡ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿ ಕ್ಷೇತ್ರವನ್ನಾಗಲಿ, ಕ್ಷೇತ್ರದ ಜನರನ್ನಾಗಲಿ ಅಭಿವೃದ್ಧಿಪಡಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಮುಖಂಡ ಮೂಗೂರು ಗ್ರಾಮದ ಎಂ.ಡಿ.ಬಸವರಾಜು ಜೆಡಿಎಸ್ ಮುಖಂಡ ಎಸ್.ಶಂಕರ್ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ತಿ.ನರಸೀಪುರ ಕ್ಷೇತ್ರವನ್ನು ಸಿಂಗಾಪೂರ್ ಮಾಡುವುದಾಗಿ ಹೇಳಿದಂತೆ ಲೋಕೋಪಯೋಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪರವರು ಮೂಗೂರು ಗ್ರಾಮಕ್ಕೆ ನೂರಾರು ಕೋಟಿ ರೂ.,ಗಳ ಹಣವನ್ನು ನೀಡಿ ಸಮಗ್ರ ಅಭಿವೃದ್ಧಿಪಡಿಸಿದ್ದಾರೆ. ಆದರೆ, ಇವರ ಏಳಿಗೆ ಸಹಿಸಲಾಗದ ಕೆಲ ಮುಖಂಡರು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಲುವಾಗಿ ಸಚಿವರು, ಸಚಿವರ ಪುತ್ರನ ಮೇಲೆ ಇಲ್ಲ ಸಲ್ಲದ ಟೀಕೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕ್ಷೇತ್ರದ ಶಾಸಕರ ವಿರುದ್ಧ ಮಾತನಾಡುವ ಮುಖಂಡರಿಗೆ ಹಣದ ಬಲವಿದ್ದರೇ ಅವರು ಈ ಹಣವನ್ನು ಕ್ಷೇತ್ರದ ಬಡ ಜನರ ಉದ್ಧಾರಕ್ಕೆ ಬಳಸಲಿ, ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ನೀಡಲಿ. ಅದು ಬಿಟ್ಟು ವೈಯಕ್ತಿಕ ವರ್ಚಸ್ಸಿಗೆ ಕೆಲ ಗ್ರಾಮದ ಜನರನ್ನು ಕರೆತಂದು ಸನ್ಮಾನ ಮಾಡಿಸಿಕೊಳ್ಳುವುದು ಇವರ ಕೀಳು ಮಟ್ಟದ ರಾಜಕಾರಣವನ್ನು ಬಿಂಬಿಸುತ್ತದೆ ಎಂದು ಕಿಡಿಕಾಡಿದರು.
ವರ್ಷದಿಂದ ವರ್ಷಕ್ಕೆ ಪಕ್ಷ ಬದಲಿಸುವ ವ್ಯಕ್ತಿಗೆ ಇವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಗುಡುಗಿದರು. ಮುಂದಿನ ದಿನಗಳಲ್ಲಿ ಇದೇ ರೀತಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದರೆ ಅವರ ವಿರುದ್ಧವೇ ಪ್ರತಿಭಟನೆ ನಡೆಸುವುದಾಗಿ ಗ್ರಾಪಂ ಮಾಜಿ ಸದಸ್ಯ ಎಂ.ರಾಜು, ಎಂ.ಎಂ.ಬಸವಣ್ಣ ಎಚ್ಚರಿಕೆ ನೀಡಿದರು.
ಕೃಷ್ಣಸ್ವಾಮಿ, ಮಹದೇವಸ್ವಾಮಿ, ಎಂ.ಪಿ.ನಿಂಗಪ್ಪ, ಎಂ.ಎನ್.ಸೋಮಣ್ಣ, ನಂಜುಂಡಯ್ಯ, ಗ್ರಾಪಂ ಸದಸ್ಯರಾದ ಶಿವಮುರ್ತಿ, ಮಾದೇಶ್, ದಿಲೀಪ್‌ಕುಮಾರ್, ಡೇರಿ ನಾಗೇಂದ್ರ, ಆಟೋ ನಂಜುಂಡ, ನಿಂಗರಾಜು, ಎಸ್.ಮಹದೇವಸ್ವಾಮಿ, ಸತೀಶ್‌ಗೌಡ, ನಾಗಣ್ಣ, ಚಿನ್ನಸ್ವಾಮಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.