ಮಧ್ಯಪ್ರಾಚ್ಯದಿಂದ ದೇಶಕ್ಕಿಲ್ಲ ಶುಭಸುದ್ದಿ?
Team Udayavani, Dec 28, 2017, 6:05 AM IST
ನವದೆಹಲಿ: ಹೊಸ ವರ್ಷದಲ್ಲಿ ಪಶ್ಚಿಮ ಏಷ್ಯಾ ಮತ್ತು ಅರಬ್ ಜಗತ್ತಿನಲ್ಲಿ ಉಂಟಾಗಬಹುದಾದ ಬೆಳವಣಿಗಳು ಅಲ್ಲಿರುವ ಭಾರತೀಯರು ಮತ್ತು ಇಂಧನ ಅವಶ್ಯಕತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ವಿಶೇಷವಾಗಿ ಕೇರಳ, ಕರಾವಳಿ ಕರ್ನಾಟಕದಿಂದ ಗಲ್ಫ್ ದೇಶಗಳಿಗೆ ತೆರಳಿ ಉದ್ಯೋಗ ಮೂಲಕ ನೆಲೆ ನೆಲ್ಲಲು ಬಯಸುವವರಿಗೂ ಕರಿ ನೆರಳಾಗುವ ಸಾಧ್ಯತೆಗಳಿವೆ.
ಇಸ್ರೇಲ್ ರಾಜಧಾನಿ ಜೆರುಸಲೇಂ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಘೋಷಣೆ ಸದ್ಯ ವಿಶ್ವಸಂಸ್ಥೆಯಲ್ಲಿ ಬಿದ್ದು ಹೋದರೂ, ಮುಂದಿನ ದಿನಗಳಲ್ಲಿ ಅವರು ಅದನ್ನು ಪ್ರಸ್ತಾಪಿಸದೆ ಇರಲಾರರು. ಜತೆಗೆ ರಿಯಾದ್ ಮತ್ತು ಸೌದಿ ಅರೇಬಿಯಾ ನಡುವಿನ ಕಗ್ಗಂಟು ಕೂಡ ಉದ್ಯೋಗ ಮತ್ತು ಇತರ ಅಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಗ್ಗೆ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕೂಡ ಆಂತರಿಕವಾಗಿ ಉದ್ಯೋಗ ನೀಡಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹಲವು ಸುಧಾರಣೆಗಳನ್ನು ಘೋಷಣೆ ಮಾಡಿದೆ. ಅದಕ್ಕೆ ಅಲ್ಲಿನ ಸಂಪ್ರದಾಯವಾದಿಗಳು ಆಕ್ಷೇಪವೆತ್ತಿದ್ದಾರೆ.
ದುಬೈ ಟ್ರಿಪ್ ಆಗಲಿದೆ ದುಬಾರಿ
ಮತ್ತೂಂದು ಗಮನಾರ್ಹ ಅಂಶವೆಂದರೆ 2018ರಿಂದ ದುಬೈ ಪ್ರವಾಸ ಕೈಗೊಂಡರೆ ಅದು ದುಬಾರಿಯಾಗಲಿದೆ. ಏಕೆಂದರೆ ಜನವರಿ 1ರಿಂದ ಅಲ್ಲಿ ಶೇ.5ರಷ್ಟು ಪ್ರಮಾಣದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಜಾರಿಯಾಗಲಿದೆ. ಹೀಗಾಗಿ ಅಲ್ಲಿನ ದೊರೆಯುವ ಎಲ್ಲ ವಸ್ತುಗಳು ಮತ್ತು ಸೇವೆಗಳು ದುಬಾರಿಯಾಗಲಿವೆ. ದುಬೈನ ಪ್ರವಾಸೋದ್ಯಮ ಇಲಾಖೆ ಪ್ರಕಾರ ಭಾರತದಿಂದಲೇ ಸುಮಾರು 1.8 ಕೋಟಿ ಮಂದಿ ಅಲ್ಲಿಗೆ ಭೇಟಿ ನೀಡಿ, ಖರೀದಿ, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಹೋಟೆಲ್, ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಶುಲ್ಕ, ವಿವಿಧ ವಸ್ತುಗಳ ಬೆಲೆಯ ಮೇಲೆ ತೆರಿಗೆ ವಿಧಿಸಲಾಗುತ್ತಿರುವುದರಿಂದ ಭಾರತೀಯರು ತಮ್ಮ ನಿಗದಿತ ಪ್ರವಾಸದ ವೆಚ್ಚಕ್ಕಿಂತ ಶೇ.6ರಿಂದ ಶೇ.8ರಷ್ಟು ಹೆಚ್ಚಿನ ಮೊತ್ತ ವಿನಿಯೋಗ ಮಾಡಬೇಕಾಗುತ್ತದೆ. ಕಚ್ಚಾ ತೈಲದ ಮೇಲಿನ ಬೆಲೆ ಕಡಿಮೆಯಾಗುತ್ತಿರುವುದರಿಂದ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಆದಾಯಕ್ಕಾಗಿ ಇತರ ಮೂಲಗಳನ್ನು ಕಂಡುಕೊಳ್ಳಬೇಕಾದ್ದರಿಂದ ವ್ಯಾಟ್ ಅನ್ನು ಜಾರಿಗೆ ತರಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.