ಮೇಯರ್‌ ಫೋನ್‌ ಇನ್‌

Team Udayavani, Dec 28, 2017, 10:41 AM IST

28-Dec–3.jpg

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಭಾಗಗಳ ಒಳರಸ್ತೆಗಳನ್ನು ದುರಸ್ತಿಗೊಳಿಸುವ ಇರಾದೆಯಿದ್ದು, ಶೀಘ್ರದಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಆದ್ಯತೆಯ ನೆಲೆಯಲ್ಲಿ ಈ ಕಾಮಗಾರಿಯನ್ನು ಮಾಡುವಂತೆ ಮೇಯರ್‌ ಕವಿತಾ ಸನಿಲ್‌ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಮೇಯರ್‌ ಕಚೇರಿಯಲ್ಲಿ ನಡೆದ ‘ಮೇಯರ್‌ ಫೋನ್‌ ಇನ್‌’ನಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಅವರು, ಒಳರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಅಧಿಕಾರಿಗಳು ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಭರವಸೆ ನೀಡಿದರು. 

ಆನೆಗುಂಡಿಯ ಭಾಸ್ಕರ್‌ ಅವರು ಕರೆ ಮಾಡಿ, ಬಿಜೈ ಆನೆಗುಂಡಿ ನಾಲ್ಕನೇ ಅಡ್ಡರಸ್ತೆ ಹೊಂಡ ತುಂಬಿಕೊಂಡು ಸಂಚಾರ ಕಷ್ಟವಾಗಿದೆ ಎಂದು ದೂರಿದರು. ಅಳಪೆ ಪಡೀಲ್‌ನ ಸುಲೈಮಾನ್‌ ಅವರು ಕರೆಮಾಡಿ, ಇಲ್ಲಿನ ರೈಲ್ವೇ ಟ್ರ್ಯಾಕ್ ಸಮೀಪದ ರಸ್ತೆ ಸಂಚಾರಕ್ಕೆ ಸಂಚಕಾರವಾಗಿದೆ ಎಂದು ನೋವು ತೋಡಿಕೊಂಡರು. ಲ್ಯಾಂಡ್‌ಲಿಂಕ್ಸ್‌ನಿಂದ ಅರುಣ್‌ ಕರೆಮಾಡಿ, ಲ್ಯಾಂಡ್‌ಲಿಂಕ್ಸ್‌ನಿಂದ ಹೆಲಿಪ್ಯಾಡ್‌ಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿ ಮಾಡಿಕೊಡುವಂತೆ ಆಗ್ರಹಿಸಿದರು. ಪೆರ್ಲಗುರಿಯಿಂದ ಸಾರ್ವಜನಿಕರೊಬ್ಬರು ಕರೆಮಾಡಿ, ಪೆರ್ಲಗುರಿ ವ್ಯಾಪ್ತಿಯ ರಸ್ತೆ ಸಮಸ್ಯೆ ಬಗ್ಗೆ ಪ್ರಸ್ತಾವಿಸಿದರು.

ವಾಮಂಜೂರಿನಿಂದ ದಿವ್ಯಾ ಅವರು ಕರೆಮಾಡಿ, ಮನೆಯ ಮುಂಭಾಗದ ಚರಂಡಿ ಸ್ಲ್ಯಾಬ್  ಮುಚ್ಚದೆ ವಾಸನೆ ಹಾಗೂ
ಸೊಳ್ಳೆ ಕಾಟ ಉಂಟಾಗಿದೆ ಎಂದರು. ಕುಲಶೇಖರದಿಂದ ವಿಜಯ್‌ ಕರೆಮಾಡಿ, ಇಲ್ಲಿನ ದಾರಿದೀಪ ಕಳೆದ ಹಲವು ದಿನದಿಂದ ಮರುಜೋಡಣೆ ಮಾಡದೆ ಕತ್ತಲೆಯೇ ನಿರ್ಮಾಣವಾಗಿದೆ ಎಂದರು. ಮಹಮ್ಮದ್‌ ಜಮೀರ್‌ ಕರೆಮಾಡಿ, ಹೈಲ್ಯಾಂಡ್‌ ಆಸ್ಪತ್ರೆ ಸಮೀಪ ಬೇರೆ ರಾಜ್ಯದ ಕಾರುಗಳು ಅನಧಿಕೃತವಾಗಿ ಪಾರ್ಕಿಂಗ್‌ ನಡೆಸಲಾಗುತ್ತಿದೆ ಎಂದು ದೂರಿದರು. ಜಿ.ಕೆ. ಭಟ್‌ ಕರೆಮಾಡಿ, ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಮಿತಿ ಮೀರಿದೆ. ಕೆಲವು ಭಾಗದ ಬಿಲ್ಡಿಂಗ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸಲಾಗುತ್ತಿದೆ ಎಂದರು. ಮೇಯರ್‌ ಪ್ರತಿಕ್ರಿಯಿಸಿ ಈ ಬಗ್ಗೆ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಣ್ಣೂರಿನಿಂದ ಮಹಮ್ಮದ್‌ ಶೆರೀಫ್‌ ಕರೆಮಾಡಿ, ಇಲ್ಲಿನ ಕುಂಡಾಲಗುಡ್ಡೆ ವ್ಯಾಪ್ತಿಯ ಕೆಲವು ಮನೆಗಳಿಗೆ ಹೋಗಲು ದಾರಿಯೇ ಇಲ್ಲ. ಮಂಗಳೂರು ಪಾಲಿಕೆಯಿಂದ ಇಲ್ಲಿಗೆ 1 ರೂ. ಕೂಡ ಖರ್ಚು ಮಾಡಿಲ್ಲ ಎಂದರು. ಮೇಯರ್‌ ಪ್ರತಿಕ್ರಿಯಿಸಿ, ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾವೂರಿನಿಲ್ಲಿ 5 ರಸ್ತೆ ಸೇರುವ ಜಾಗದಲ್ಲಿ ಬಹಳಷ್ಟು ಸಮಸ್ಯೆ ಇದೆ. ಹೀಗಾಗಿ ಇಲ್ಲಿ ರಾತ್ರಿ ಪೊಲೀಸರ ನೇಮಕಕ್ಕೆ ಸೂಚಿಸಬೇಕು ಹಾಗೂ ಕಾವೂರು ವ್ಯಾಪ್ತಿಯಲ್ಲಿ ಹೊಸ ಪೈಪು ಅಳವಡಿಕೆ ನಡೆಸಬೇಕು ಎಂದು ಮಹಿಳೆಯೊಬ್ಬರು ಕರೆ ಮಾಡಿ ಆಗ್ರಹಿಸಿದರು.

ಅಧಿಕಾರಿಗೆ ನೊಟೀಸ್‌: ಸೂಚನೆ
ಬಲ್ಮಠದ ಸ್ವಾಗತ ಹೊಟೇಲ್‌ ಮುಂಭಾಗ ರಸ್ತೆಯ ಡಿವೈಡರ್‌ ಲೈಟ್‌ ರಾತ್ರಿ ಉರಿಯುತ್ತಿಲ್ಲ ಎಂದು ಕಳೆದ ಒಂದು ತಿಂಗಳ ಹಿಂದೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಸಮಸ್ಯೆ ಪರಿಹಾರ ಆಗಿಲ್ಲ ಎಂದು ಸಾರ್ವಜನಿಕರೊಬ್ಬರು ದೂರಿದರು. ನಿರ್ಲಕ್ಷ್ಯವಹಿಸಿರುವ ಸಂಬಂಧಪಟ್ಟ ಅಧಿಕಾರಿಯ ವಿರುದ್ದ ನೊಟೀಸ್‌ ನೀಡುವಂತೆ ಮೇಯರ್‌ ಆಯುಕ್ತರಿಗೆ ಸೂಚಿಸಿದರು. ಉಪ ಮೇಯರ್‌ ರಜನೀಶ್‌, ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ರೌಫ್, ಸಳಿತಾ ಮಿಸ್ಕಿತ್‌, ಆಯುಕ್ತ ಮಹಮ್ಮದ್‌ ನಝೀರ್‌ ಉಪಸ್ಥಿತಿರಿದ್ದರು.

ಕೆರೆ ಮುಚ್ಚದಂತೆ ಮಹಿಳೆಯ ಕರೆ..!
ಸುಜಾತಾ ಹೆಗ್ಡೆ ಅವರು ಕರೆಮಾಡಿ, ಕೊಟ್ಟಾರ ಸುಬ್ರಹ್ಮಣ್ಯಪುರ ಸಮೀಪದಲ್ಲಿ ಕೆರೆಯೊಂದಿದ್ದು ಅದನ್ನು ಮುಚ್ಚುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಜತೆಗೆ ಆ ಕೆರೆಗೆ ಡ್ರೈನೇಜ್‌ ನೀರು ಬಿಡಲಾಗುತ್ತಿದೆ. ದಯವಿಟ್ಟು ಆ ಕೆರೆಯನ್ನು ಮುಚ್ಚಬಾರದು ಹಾಗೂ ಆ ಕೆರೆಯನ್ನು ಸರಿಪಡಿಸುವ ಮೂಲಕ ಹತ್ತಿರದ ಸ್ಥಳಗಳಿಗೆ ನೀರಿನ ಆಸರೆಯನ್ನು ಪಾಲಿಕೆ ಮಾಡಬೇಕು ಎಂದು ಆಗ್ರಹಿಸಿದರು. ಮೇಯರ್‌ ಮಾತನಾಡಿ, ಯಾವುದೇ ಕಾರಣಕ್ಕೂ ಕೆರೆ ಮುಚ್ಚುವುದಿಲ್ಲ. ಸಂಬಂಧಿತ ಕೆರೆಯು ಖಾಸಗಿಯವರಿಗೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪಾಲಿಕೆ ಗಮನಹರಿಸಲಿದೆ ಎಂದರು.

ರಾವ್‌ ಆ್ಯಂಡ್‌ ರಾವ್‌: ವಾರದೊಳಗೆ ಸಮಸ್ಯೆ ಇತ್ಯರ್ಥ
ರಾವ್‌ ಆ್ಯಂಡ್‌ ರಾವ್‌ ಸ್ಟೇಟ್‌ಬ್ಯಾಂಕ್‌ನ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಲ್ಲಿರುವ ಬೃಹತ್‌ ಹೊಂಡವನ್ನು ಇನ್ನೂ ಮುಚ್ಚುವ ಬಗ್ಗೆ ಪಾಲಿಕೆ ಯಾವುದೇ ಗಮನ ಹರಿಸಿಲ್ಲ ಎಂದು ಬಂದರ್‌ನಿಂದ ಅಬ್ದುಲ್‌ ಅವರು ಕರೆಮಾಡಿ ದೂರಿದರು. ಮೇಯರ್‌ ಪ್ರತಿಕ್ರಿಯಿಸಿ, ನಾನು ಕೂಡ ಸ್ಥಳ ಪರಿಶೀಲನೆ ಮಾಡಿದ್ದೇನೆ. ಆದರೆ, ಅದರೊಳಗೆ ಹಲವು ಕೇಬಲ್‌ಗ‌ಳು ಹೋಗಿರುವುದರಿಂದ ಇದನ್ನು ಬಂದ್‌ ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಇಲ್ಲಿರುವ ಕೇಬಲ್‌ಗ‌ಳನ್ನು ಮೊದಲು ಬೇರೆ ಕಡೆಗೆ ಶಿಪ್ಟ್ ಮಾಡಿ ಆ ಬಳಿಕ ಇದನ್ನು ಬಂದ್‌ ಮಾಡಲಾಗುವುದು. ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು. 

ಟಾಪ್ ನ್ಯೂಸ್

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

Tulu Cinema: ತುಳುನಾಡಿನ ಗ್ರಾಮೀಣ ಕಥಾನಕ ತೆರೆದಿಟ್ಟ “ದಸ್ಕತ್‌’

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.