ಹೊಸ ವರ್ಷಕ್ಕೆ ಜಗ್ಗೇಶ್ ಹೊಸ ಚಿತ್ರ
Team Udayavani, Dec 28, 2017, 11:49 AM IST
ಜಗ್ಗೇಶ್ ಅಭಿನಯದ “8 ಎಂಎಂ’ ಚಿತ್ರದ ಚಿತ್ರೀಕರಣ ಮುಗಿದಿದೆ. ಹೊಸ ವರ್ಷದಲ್ಲಿ ಆ ಚಿತ್ರ ಬಿಡುಗಡೆಯಾಗಲಿದೆ. ಈಗ ಜಗ್ಗೇಶ್ ಅವರಿಂದ ಹೊಸ ಸುದ್ದಿಯೊಂದು ಬಹಿರಂಗಗೊಂಡಿದೆ. ಅದು ಮತ್ತೂಂದು ಹೊಸ ಚಿತ್ರ ಮಾಡುವ ಸುದ್ದಿ. ಜಗ್ಗೇಶ್ “8 ಎಂಎಂ’ ಚಿತ್ರದ ಬಳಿಕ ಯಾವ ಚಿತ್ರ ಒಪ್ಪಿಕೊಳ್ಳುತ್ತಾರೆ, ಯಾರ ನಿರ್ದೇಶನದಲ್ಲಿ ನಟಿಸುತ್ತಾರೆ ಎಂಬ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಅವರೇ ಒಂದು ಉತ್ತರ ಕೊಟ್ಟಿದ್ದಾರೆ. ಆದರೆ, ಆ ಉತ್ತರದಲ್ಲಿ ಎಲ್ಲವೂ ಸ್ಪಷ್ಟವಾಗಿಲ್ಲ ಅನ್ನೋದು ಮಾತ್ರ ದಿಟ.
ಹೌದು, ಜಗ್ಗೇಶ್ ಹೀಗೊಂದು ಟ್ವೀಟ್ ಮಾಡಿದ್ದಾರೆ. ಅವರೊಂದು ಹೊಸ ಚಿತ್ರ ಮಾಡುತ್ತಿರುವ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಮಾಡಿರುವ ಟ್ವೀಟ್ ಏನು ಗೊತ್ತಾ? “2018 ಕ್ಕೆ ಕನ್ನಡದ ಇನ್ನೊಬ್ಬ ಅದ್ಭುತ ನಟ ನನ್ನ ಆತ್ಮೀಯನ ಜೊತೆ ಭರ್ಜರಿ combo ದಕ್ಷಿಣ
ಭಾರತದಲ್ಲಿ ಖ್ಯಾತನಾಮ ನಿರ್ದೇಶಕ, ಲಕ್ಕಿ ಪ್ರೊಡ್ಯುಸರ್ ಜೊತೆ ನಿನ್ನೆ ಕೆಲಸ ಮಾಡಲು ಮಾತುಕೊಟ್ಟೆ… ನನ್ನ ಮನಸ್ಸಿಗೆ ಇಷ್ಟವಾಗಿ ಜನರಿಗೆ ಖುಷಿಯಾದರೆ ನಾನು ಕೊನೆ ಉಸಿರಿನವರೆಗೂ ನಟಿಸುವೆ…ಧನ್ಯವಾದ’ ಹೀಗೆಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಹಾಗಾದರೆ, ಜಗ್ಗೇಶ್ ಯಾವ ನಟರೊಂದಿಗೆ ನಟಿಸುತ್ತಿದ್ದಾರೆ. ಅದು ಮಲ್ಟಿಸ್ಟಾರ್ ಸಿನಿಮಾ ಇರಬಹುದಾ? ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ್ಯಾರು, ಲಕ್ಕಿ ನಿರ್ಮಾಪಕರು ಯಾರಿರಬಹುದು ಎಂಬ ಪ್ರಶ್ನೆಯೊಂದಿಗೆ ಮಾತು ಮುಗಿಸಿದ್ದಾರೆ. ಆದರೆ, ಎಲ್ಲದ್ದಕ್ಕೂ ಉತ್ತರ ಹೊಸ ವರ್ಷ ಅನ್ನೋದು ನಿಜ. ಅದೇನೆ ಇರಲಿ, ಜಗ್ಗೇಶ್ ಈಗ ಹೊಸ ತರಹದ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅವರನ್ನು ಹುಡುಕಿ ಬರುತ್ತಿರುವ ಪಾತ್ರಗಳು ಕೂಡ ಅವರಿಗೆ ತಕ್ಕದ್ದಾಗಿವೆ. ಅವರ ಸಿನಿಮಾ ಕೆರಿಯರ್‌ನಲ್ಲಿ “8 ಎಂಎಂ’ ಒಂದು ಹೊಸತರಹದ ಪಾತ್ರ. ಈಗಾಗಲೇ ಚಿತ್ರ ಪೂರ್ಣಗೊಂಡಿದ್ದು, ರಿಲೀಸ್‌ಗೆ ಅಣಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.