“ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯ’
Team Udayavani, Dec 28, 2017, 12:46 PM IST
ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇವೆ. ಇದರಲಿ ಮಾದಿಗ ಜನ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ಸಾಮಾಜಿಕವಾಗಿ ಸಿಗಬೇಕಾದ ಮೀಸಲಾತಿಯಿಂದ ವಂಚಿತರಾಗಿದ್ದೇವೆ. ಹೀಗಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ತಾಲೂಕು ಮಾದಾರ ಚನ್ನಯ್ಯ ಮಹಾಸಭೆ ಕಾರ್ಯಾಧ್ಯಕ್ಷ ಸಿ.ರಾಮಕೃಪ್ಣಪ್ಪಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ಜಾರಿ ವಿರುದ್ಧ ಡಿ.29 ರಂದು
ಇತರೆ ಹಿಂದುಳಿದ ವರ್ಗಗಳ ಜಾತಿ ಜನರು ಪ್ರತಿಭಟನೆ ನಡೆಸುತ್ತಿರುವ ಕ್ರಮ ಖಂಡನೀಯ. ನಾವು ಯಾವುದೇ ಇತರೆ
ಜಾತಿ ಮೀಸಲಾತಿ ಕುಸಿದುಕೊಳ್ಳಲು ಮುಂದಾಗಿಲ್ಲ. ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿಕೊಡಿ ಎಂದೇಷ್ಟೇ ಕೇಳುತ್ತಿದ್ದೇವೆ. ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ 7 ವರ್ಷಗಳು ಕಳೆಯುತ್ತ ಬಂದಿದ್ದರೂ ಯಾವುದೇ ಪಕ್ಷದ ಮುಖ್ಯಮಂತ್ರಿಗಳು ಸದಾಶಿವ ಆಯೋಗದ ಶಿಫಾರಸು ಜಾರಿಗೆ ತಂದಿಲ್ಲ. ಕೇವಲ ಭರವಸೆಗಳನ್ನು ನೀಡುತ್ತಲೇ ಕಾಲ ಕಳೆಯಲಾಗುತ್ತಿದೆ. ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸದವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಇಂಥ ಹೇಳಿಕೆಗಳಿಗೆ ಮಾನ್ಯತೆ ಬೇಡ: ಕಡಿಮೆ ಜನಸಂಖ್ಯೆ ಹೊಂದಿರುವ ಬೋವಿ, ಕೊರಚ, ಕೊರಮ, ಲಾಂಬಣಿ, ದೊಕ್ಕಲಿಗ, ಶಿಳ್ಳೆಕ್ಯಾತ, ದೊಹಾರ ದೊಂಬಿದಾಸ, ಹಂದಿಜೋಗಿ ಮತ್ತಿತರೆ ಜಾತಿಗಳು ಅನುಕೂಲಗಳನ್ನು ಬಳಸಿಕೊಂಡು ಮುಂದುವರಿಯುತ್ತಿದ್ದಾರೆ. ಇಂಥವರು ಸದಾಶಿವ ವರದಿ ವಿರುದ್ಧ ಹೇಳಿಕೆಗಳು ಹಾಗೂ ಹೋರಾಟಕ್ಕೆ ಸರ್ಕಾರ ಯಾವುದೇ ರೀತಿ ಮಾನ್ಯತೆ ನೀಡಬಾರದು ಎಂದು ಹೇಳಿದರು.
ಚಳವಳಿ ಮಾಡಿದ್ದು ಮಾದಿಗರು, ಹೊಲೆಯರು: ಮಾದಾರ ಚನ್ನಯ್ಯ ಮಹಾಸಭಾದ ಕೋರ್ ಕಮಿಟಿ ಪ್ರಧಾನ
ಕಾರ್ಯದರ್ಶಿ ನಾಗರಾಜು ಮಾತನಾಡಿ, ದಲಿತ ಚಳವಳಿಗಳ ನಿರ್ಮಾತೃಗಳು ಅಸ್ಪೃಶ್ಯ ಜಾತಿಗಳಾದ ಪರಿಶಿಷ್ಟ ಜಾತಿ ಮಾದಿಗರು ಹಾಗೂ ಹೊಲೆಯರು ತಮ್ನ ಶ್ರಮದಿಂದ ಚಳವಳಿಗಳನ್ನು ಯಶಸ್ವಿಗೊಳಿಸಿರುತ್ತಾರೆ.
ಆದರೆ ಇದರಿಂದ ಬಂದ ಲಾಭವನ್ನು ಸ್ಪರ್ಶ ಜಾತಿಗಳು ಮತ್ತು ಜನ ಸಂಖ್ಯೆಯಲ್ಲಿ ತೀರ ಕಡಿಮೇ ಇರುವ ಬೋವಿ, ಲಾಂಬಾಣಿ ಮತ್ತಿತರ ಸಣ್ಣಪುಟ್ಟ ಜಾತಿಗಳು ಪಡೆಯುತಿದ್ದಾರೆ. ಪರಿಶಿಷ್ಟರ ಪಟ್ಟಿಯಲ್ಲಿ ಸ್ಪರ್ಶ ಜಾತಿಗಳನ್ನು ಸೇರಿಸುತ್ತಾ ಬರಲಾಗುತ್ತಿದೆ. ಆದರೆ ಮೀಸಲಾತಿಯ ಪ್ರಮಾಣ ಮಾತ್ರ ಹೆಚ್ಚಿಸಿಲ್ಲ. ಇವರ ಶೇ 22.7ರಲ್ಲಿಯೇ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಬಹು ಸಂಖ್ಯಾತ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ನಿವಾಸ್ ಚಲೋ ಖಂಡನೀಯ: ತಾಲೂಕು ಸಂಚಾಲಕ ರಾಜಘಟ್ಟ ಕಾಂತರಾಜು ಮಾತನಾಡಿ,
ಸರ್ಕಾರವೇ ನೇಮಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಯನ್ನು ಖಂಡಿಸಿ ಛಲವಾದಿ
ನಾರಾಯಣ ಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸ್ ಚಲೋ ನಡೆಸುತ್ತಿರುವುದು ಖಂಡನೀಯ.
ವರದಿಯನ್ನು ಜಾರಿಮಾಡಲು ಶಿಫಾರಸು ಮಾಡಿದ ನಂತರ ಸಾಧಕ ಬಾಧಕ ಚರ್ಚಿಸಬೇಕು. ನಮ್ಮದು ಸಾಮಾಜಿಕ
ನ್ಯಾಯಯುತವಾದ ಹೋರಾಟ. ಡಿ.31 ರಂದು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ. ಆನಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾದಾರ ಚನ್ನಯ್ಯ ಮಹಾಸಭೆ ತಾಲೂಕು ಅಧ್ಯಕ್ಷರ ಆದಿತ್ಯ ನಾಗೇಶ್, ಸಲಹಾ ಸಮಿತಿ ಉಪಾಧ್ಯಕ್ಷ ಆರ್. ಸಿ.ರಾಮಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಆಂಜನಮೂರ್ತಿ, ಕೋರ್ ಕಮಿಟಿ ಪ್ರಧಾನ
ಕಾರ್ಯದರ್ಶಿ ಬಚ್ಚಹಳ್ಳಿ ನಾಗರಾಜು, ಮುನಿಸುಬ್ಬಯ್ಯ, ದೊಡ್ಡತುಮಕೂರು ವೆಂಕಟೇಶ, ಪ್ರಧಾನ ಕಾರ್ಯದರ್ಶಿ
ಟಿ.ಡಿ.ಮುನಿಯಪ್ಪ, ನಿರ್ದೇಶಕ ಮಾರಪ್ಪ, ನಗರ ಕಾರ್ಯಾಧ್ಯಕ್ಷ ತಳವಾರ್ ನಾಗರಾಜು, ಪ್ರಧಾನ ಕಾರ್ಯದರ್ಶಿ ಬಿ.ಸದಾನಂದ, ಕಮಿಟಿ ಸದಸ್ಯರಾದ ರಾಮಾಂಜಿನಪ್ಪ, ಕುಂಬಾರಪೇಟೆ ಕೆ.ನಾರಾಯಣ, ತಾಲೂಕು
ಪಂಚಾಯಿತಿ ಸದಸ್ಯ ವೆಂಕಟರಮಣಪ್ಪಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.