ಮಂಗಳೂರು ಧರ್ಮಪ್ರಾಂತದ ಪ್ರಧಾನ ಗುರು
Team Udayavani, Dec 28, 2017, 2:15 PM IST
ಬಜಪೆ: ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಗುರುಗಳಾದ ಮು| ಡೆನ್ನಿಸ್ ಮೊರಾಸ್ ಪ್ರಭು ಅವರ ಗುರುದೀಕ್ಷೆಯ ಸ್ವರ್ಣ ಮಹೋತ್ಸವವನ್ನು ಅವರ ಹುಟ್ಟೂರು ಬಜಪೆಯಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ಬಜಪೆ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಬಲಿಪೂಜೆ ನಡೆಯಿತು. ಪ್ರಧಾನ ಯಾಜಕರಾಗಿ ಮು| ಡೆನ್ನಿಸ್ ಮೊರಾಸ್ ಪ್ರಭು ಬಲಿಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಆರ್ಚ್ ಬಿಷಪ್ ರೆ| ಡಾ| ಬರ್ನಾರ್ಡ್ ಮೊರಾಸ್, ಮಂಗಳೂರು ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಉಡುಪಿ ಬಿಷಪ್ ರೆ| ಡಾ| ಜೆರಾಲ್ಡ್ ಲೋಬೋ, ಗುಲ್ಬರ್ಗ ಬಿಷಪ್ ರೆ| ಡಾ| ರೋಬರ್ಟ್ ಮಿರಾಂದ, ಬಳ್ಳಾರಿ ಬಿಷಪ್ ರೆ| ಡಾ| ಹೆನ್ರಿ ಡಿ’ಸೋಜಾ,
ಸಿ.ಎಸ್.ಐ.ನ ನಿವೃತ್ತ ಬಿಷಪ್ ರೆ| ಡಾ| ಸಿ.ಎಲ್. ಫುರ್ಟಾಡೋ, ಬೆಳ್ತಂಗಡಿ ಬಿಷಪ್ ರೆ| ಡಾ| ಲಾರೆನ್ಸ್ ಹಾಗೂ ನೂರಕ್ಕೂ ಅಧಿಕ ಧರ್ಮಗುರುಗಳು, ಧರ್ಮ ಭಗಿನಿಯರು ಬಲಿಪೂಜೆಯಲ್ಲಿ ಭಾಗಿಯಾಗಿದ್ದರು. ಬಳಿಕ ಸೈಂಟ್ ಜೋಸೆಫ್ ಚರ್ಚ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ವರ್ಣ ಮಹೋತ್ಸವ ಸಂಭ್ರಮ ನಡೆಯಿತು.
ಸ್ವರ್ಣ ಮಹೋತ್ಸವದ ಕೇಕ್ ಅನ್ನು ಮು| ಡೆನ್ನಿಸ್ ಮೊರಾಸ್ ಪ್ರಭು ಕತ್ತರಿಸಿದರು. ಬಳಿಕ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮೊರಾಸ್ ಕುಟುಂಬ, ಊರಿನ ಹಾಗೂ ಪರ ಊರಿನ ಗಣ್ಯರು ಭಾಗಿಯಾಗಿದ್ದರು. ಜೋನ್ ಮೊರಾಸ್ ಸ್ವಾಗತಿಸಿದರು.ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಆಡಳಿತಾಧಿಕಾರಿ ಫಾ| ಆ್ಯಂಟನಿ ಮೊಂತೆರೋ ಅವರು ಮು| ಡೆನ್ನಿಸ್ ಮೊರಾಸ್ ಪ್ರಭು ಅವರ ಗುರುದೀಕ್ಷೆಯ ಸ್ವರ್ಣ ಮಹೋತ್ಸವದ ಅಭಿನಂದನ ನುಡಿಗಳನ್ನು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.