ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ದ್ವಿದಶ ವಾರ್ಷಿಕೋತ್ಸವ
Team Udayavani, Dec 28, 2017, 3:25 PM IST
ಮುಂಬಯಿ: ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಾದ ಜೈನರು ಅಹಿಂಸಾ ಪಾಲಕರು. ಅಹಿಂಸೆಯೇ ಪರಮಧರ್ಮ ಎನ್ನುವ ತತ್ವಾದರ್ಶಕ್ಕೆ ಬದ್ಧರಾಗಿಯೇ ನಾವು ಮುನ್ನಡೆಯಬೇಕು. ಅಂತೆಯೇ ನಮ್ಮ ಸೇವೆಯೂ ಪರೋಪಕಾರಿ, ಪರಿಣಾಮಕಾರಿ, ಪ್ರಾಮಾಣಿಕತೆ ತೋರಿಸುವಂತಿರಬೇಕು. ಭಟ್ಟಾಚಾರ್ಯರ ನಿಷ್ಠಾವಂತರಲ್ಲಿ ಬಹುಸಂಖ್ಯಾವುಳ್ಳ ನಮಗೆ ಬೆದ್ರ ಬಾಹುಮುನಿಗಳಿಂದ ನಮ್ಮ ಸಮಾಜಕ್ಕೆ ಸಾಕಷ್ಟು ಪ್ರೇರಣೆ, ಕೊಡುಗೆ ಪ್ರಾಪ್ತಿಯಾಗಿದೆ. ಶ್ರದ್ಧೆ ನಿಷ್ಠುರತಾ ಸೇವೆಯೇ ಮನುಕುಲಕ್ಕೆ ಮೌಲ್ಯಯುತ ಆಗಿರುತ್ತದೆ. ದ್ವಿದಶ ಸಂಭ್ರಮಿಸಿದ ಈ ಸಂಸ್ಥೆ ಸಮಾಜಮುಖೀಯಾಗಿ ಮುನ್ನಡೆಯಲಿ ಎಂದು ಬರೋಡಾದ ಜಿಎಸ್‌ಟಿ ವಿಭಾಗೀಯ ಮೇಲ್ವಿಚಾರಕ ಮಹಾವೀರ್ ಬಿ. ಜೈನ್ ಅವರು ನುಡಿದರು.
ಡಿ. 25ರಂದು ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ನಿರ್ಮಿಸಲಾದ ದಿ| ಆದಿರಾಜ ಜೈನಿ ವೇದಿಕೆಯಲ್ಲಿ ನಡೆದ ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ಸಂಸ್ಥೆಯ ದ್ವಿದಶ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಯೋಜನೆಗಳು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ. ಮುನಿರಾಜ್ ಜೈನ್ ಅಜಿಲ ಅವರು ಮಾತನಾಡಿ, ಜೈನರು ಸ್ವಸ್ಥ ಸಮಾಜ ಸೃಷ್ಟಿಸುವ ಹೊಸ ದೃಷ್ಟಿಯುಳ್ಳವರು. ಆದ್ದರಿಂದ ನಮ್ಮಲ್ಲಿನ ಸಂಪನ್ಮೂಲವನ್ನು ಪ್ರಭುತ್ವಕ್ಕೆ ಪುಷ್ಟಿಯಾಗಿಸಬೇಕು. ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿದ ಜೈನರು ಸಂಸ್ಥೆಯ ಮೂಲಕ ಸಂಘಟಿತರಾಗಿ ಸಮಾಜವನ್ನು ಮುನ್ನಡೆಸಬೇಕು ಎಂದು ನುಡಿದರು.
ಗೌರವ ಅತಿಥಿಗಳಾಗಿ ಪ್ರಸಿದ್ಧ ಪುರೋಹಿತ ಡಾ| ಎಂ. ಜೆ. ಪ್ರವೀಣ್ ಭಟ್ ಮತ್ತು ದಿನೇಶ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ದಿನೇಶ್ ಕೆ. ಕರ್ಗಲ್ ಹಾಗೂ ಸಂಘದ ಉಪಾಧ್ಯಕ್ಷ ಉದಯ ಅಥಿಕಾರಿ, ಕೋಶಾಧಿಕಾರಿ ಪಿ. ಅನಂತರಾಜ, ಜೊತೆ ಕಾರ್ಯದರ್ಶಿ ಮಹಾವೀರ್ ಎಸ್. ಜೈನ್, ಜೊತೆ ಕೋಶಾಧಿಕಾರಿ ಸಂಪತ್‌ಕುಮಾರ್ ಎಸ್. ಜೈನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪದ್ಮರಾಜ್ ಹೆಗ್ಡೆ, ಮನೀಷ್ ಹೆಗ್ಡೆ, ರಾಜೇಂದ್ರ ಹೆಗ್ಡೆ, ಎಂ. ಮಹಾವೀರ್ ಜೈನ್, ಭರತ್‌ರಾಜ್ ಜೈನ್, ವಿಕ್ರಾಂತ್ ಜೈನ್, ಆಂತರಿಕ ಲೆಕ್ಕ ಪರಿಶೋಧಕ ಜಿನೇಶ್ ಜೈನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಜಯಮಾಲ ಕೋರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭೂಮಂಡಲದಲ್ಲಿ ತಾಯಿಗೆ ಪ್ರಥ್ವಿ ಸ್ಥಾನವಿದೆ. ಆದುದರಿಂದ ಎಲ್ಲರಿಗೂ ಪೂಜನೀಯರೆ. ಇತಿಹಾಸದಂತೆ ಜೈನರು ಅರಸು ಮನೆತನದವರು ಮಾತ್ರವಲ್ಲ ಜೈನ ಸಮಾಜ ತುಳಸಿ ಇದ್ದಂತೆ. ಸಾಹಿತ್ಯ ರಂಗಕ್ಕೂ ಜೈನರ ಕೊಡುಗೆ ಅಪಾರವಾದದ್ದು. ತಮ್ಮ ಸಂಘಕ್ಕೆ ಯಾವುದೇ ಸಹಕಾರಕ್ಕಾಗಿ ನಾನು ಸದಾ ಸಿದ್ಧನಿದ್ದೇನೆ ಎಂದು ಪುರೋಹಿತ ಪ್ರವೀಣ್ ಭಟ್ ಅವರು ಆಶೀರ್ವದಿಸಿದರು.
ಸಮಾರಂಭದಲ್ಲಿ ಮಹಾನಗರದಲ್ಲಿನ ಪ್ರಸಿದ್ಧ ಶಿಕ್ಷಕರೂ, ಸಂಸ್ಥೆಯ ಹಿರಿಯ ಮುತ್ಸದ್ದಿಗಳಾದ ಜಯರಾಜ ಜೈನ್, ಎಂ. ಸನತ್ ಕುಮಾರ್ ಜೈನ್, ಕು| ನಿವೇದಿತಾ ಜೈನ್ ಮತ್ತು ಮಾ| ಶ್ರೇಯಂಸ್ ಆರ್. ಜೈನ್ ಅವರನ್ನು ಅತಿಥಿಗಳು ಗೌರವಿಸಿದರು. ಸಮಾಜದ ಸುಮಾರು 14 ಜೇಷ್ಠ ನಾಗರಿಕರಿಗೆ, 13 ಮಂದಿ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕೊಲ್ಯಾರು ರಾಜು ಶೆಟ್ಟಿ, ರವಿ ಹೆರ್ಮುಂಡೆ, ಭಾಗವತರಾದ ಧೀರಜ್ ರೈ, ಹರೀಶ್ ಶೆಟ್ಟಿ, ಹಿರಿಯ ಕಲಾವಿದ ಅನಂತರಾಜ್, ರತ್ನಾಕರ ಅಧಿಕಾರಿ, ನೇಮಿರಾಜ್ ಜೈನ್ ಡೊಂಬಿವಲಿ, ವತ್ಸಲಾ ಅಧಿಕಾರಿ, ಸುಕುಮಾರ ಜೈನ್ ಅಂಧೇರಿ, ನಲ್ಲೂರು ಧನಂಜಯ ಅಧಿಕಾರಿ, ವೈವಾಹಿಕ ಜೀವನದ ರಜತೋತ್ಸವ ಪೂರೈಸಿದ ಭರತ್‌ಕುಮಾರ್ ವೈದ್ಯ ಮತ್ತು ವಾಣಿ ವೈದ್ಯ ಹಾಗೂ ಪವಕುಮಾರ್ ಜೈನ್ ಮತ್ತು ವಿಮಲಾ ಜೈನ್ ದಂಪತಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಬೆಳಗ್ಗೆ ನಮೋಕರ್ ಮಂತ್ರ ಮತ್ತು ಪ್ರಾರ್ಥನೆಯೊಂದಿಗೆ ವಾರ್ಷಿಕೋತ್ಸವ ಆರಂಭಗೊಂಡಿತು. ಬಳಿಕ ಸಂಘದ ಸದಸ್ಯರು ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಂಘದ ಕಲಾ ವಿಭಾಗದ ಶ್ರೀ ವೀರ ಯಕ್ಷಕಲಾ ಬಳಗದ ಕಲಾವಿದರಿಂದ “ಜಿನ ಭಕ್ತೆ ಆಗ್ನಿಲೆ’ ಯಕ್ಷಗಾನ ಪ್ರದರ್ಶನಗೊಂಡಿತು. ವಾರ್ಷಿಕ ಉತ್ಸವದಲ್ಲಿ ಡಾ| ಶರ್ಮಿಳಾ ಎಂ. ಜೈನ್ ಬರೋಡಾ ಸೇರಿದಂತೆ ಸಂಘದ ಸದಸ್ಯರು, ಶ್ರಾವಕ ಶ್ರಾವಕಿಯರು ಪಾಲ್ಗೊಂಡು ಸಹಕರಿಸಿದರು.
ಜೊತೆ ಕಾರ್ಯದರ್ಶಿಗಳಾದ ರಘುವೀರ್ ಹೆಗ್ಡೆ ಸ್ವಾಗತಿಸಿದರು. ಮಲ್ಲಿಕಾ ಜಯರಾಜ್, ಮಂಜುಳಾ ಜೈನ್ ಮತ್ತು ವಿನೋದಾ ಹೆಗ್ಡೆ ಬಳಗದವರು ಸ್ವಾಗತಗೀತೆಗೈದರು. ಲೋಕನಾಥ್ ಎಸ್. ಜೈನ್ ಮತ್ತು ವಾಣಿ ವೈದ್ಯ ಅತಿಥಿಗಳನ್ನು ಪರಿಚಯಿಸಿದರು. ಮಲ್ಲಿಕಾ ಜೈನ್ ಕ್ರೀಡಾ ವಿಜೇತ ಹಾಗೂ ಪುರಸ್ಕೃತರ ಯಾದಿ ವಾಚಿಸಿದರು. ಸುಜಯಾ ಎಲ್. ಜೈನ್ ಪ್ರಾರ್ಥನೆಗೈದು, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.