ಪ್ರಧಾನಿ ಸಂದೇಶವನ್ನೂ ಓದದ ಬಿಜೆಪಿ ಸಂಸದರು
Team Udayavani, Dec 29, 2017, 6:15 AM IST
ಹೊಸದಿಲ್ಲಿ: ನಾನು ಪ್ರತಿ ದಿನ ಬಿಜೆಪಿಯ ಎಲ್ಲ ಸಂಸದರಿಗೂ ಶುಭ ಮುಂ ಜಾನೆ ಎಂಬ ಸಂದೇಶ ಕಳುಹಿ ಸುತ್ತೇನೆ. ಅದರೆ ಯಾರೂ ನನಗೆ ಪ್ರತಿಯಾಗಿ ಶುಭ ಕೋರುವುದಿಲ್ಲ. ಕೇವಲ ಐದಾರು ಸಂಸದರಷ್ಟೇ ಪ್ರತಿ ಕ್ರಿಯಿಸುತ್ತಾರೆ…. ಹೀಗೆಂದು ಹೇಳಿದ್ದು ಹೊರಹಾಕಿದ್ದು ಪ್ರಧಾನಿ ನರೇಂದ್ರ ಮೋದಿ.
ಗುರುವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಬಿಜೆಪಿ ಸಂಸದರನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದು ಕೊಂಡರು. ನರೇಂದ್ರ ಮೋದಿ ಅಪ್ಲಿಕೇಶನ್‌ನಲ್ಲಿ ಸಂಸದರು ಸಕ್ರಿಯವಾಗಿರಬೇಕು. ನಾನು ಶುಭೋದಯ ಸಂದೇಶದ ಜತೆಗೆ ಮಹತ್ವದ ಮಾಹಿತಿಯನ್ನೂ ರವಾನಿಸುತ್ತೇನೆ. ಆದರೆ ಇದನ್ನು ಸಂಸದರು ಓದುವುದಿಲ್ಲ ಎಂದಿದ್ದಾರೆ. ಸಂಸದರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರಬೇಕು. ಇದರಿಂದ ಹೆಚ್ಚಿನ ಜನರನ್ನು ಒಂದೇ ಕ್ಷಣದಲ್ಲಿ ತಲುಪಬಹುದೆಂದು ಮೋದಿ ಸಂಸದರಿಗೆ ಸೂಚಿಸಿದ್ದಾರೆ. ಈ ಬಗ್ಗೆ “ಇಂಡಿಯಾ ಟುಡೇ’ ವರದಿ ಮಾಡಿದೆ.
ಈ ಹಿಂದೆ ಗುಜರಾತ್ ಚುನಾವಣೆಯ ವೇಳೆ ನರೇಂದ್ರ ಮೋದಿ ಆ್ಯಪ್ ಅನ್ನು ಸಕ್ರಿಯವಾಗಿ ಬಳಸಿದ್ದು, ಇದರ ವೀಡಿಯೋ ಚಾಟಿಂಗ್ ಸೌಲಭ್ಯದ ಮೂಲಕ ರಾಜ್ಯದ ಮಹಿಳಾ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದರು. ಈ ಅಪ್ಲಿಕೇಶನ್ 2015ರಲ್ಲಿ ಪರಿಚಯಿ ಸಲಾಗಿತ್ತು. ಈ ಅಪ್ಲಿಕೇಶನ್‌ನಲ್ಲಿ ಪ್ರಧಾನಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ಇರುತ್ತದೆ ಮತ್ತು ಪ್ರಧಾನಿ ನೇರವಾಗಿ ವ್ಯಕ್ತಿಗಳಿಗೆ ಸಂದೇಶ ಹಾಗೂ ಇಮೇಲ್‌ಗಳನ್ನು ಕಳುಹಿಸಬಹುದಾಗಿದೆ. ಜನರೂ ಕೂಡ ಇದನ್ನು ಬಳಸಬಹುದಾಗಿದ್ದು, ಮನ್‌ಕಿ ಬಾತ್ ಕಾರ್ಯಕ್ರಮವನ್ನು ಕೇಳಬಹುದು. ಮೋದಿ ಈ ಹಿಂದೆಯೂ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಧಿವೇಶನಕ್ಕೆ ಹಾಜರಾಗದ ಸಂಸದರಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿರಬಹುದು ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.