ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದೇನೆ ಅಷ್ಟೆ : ಪರ್ರಿಕರ್
Team Udayavani, Dec 29, 2017, 6:50 AM IST
ಪಣಜಿ: “ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಿಜೆಪಿ ನಾಯಕ ಯಡಿಯೂರಪ್ಪ ಅವರು ನನಗೆ ಪತ್ರ ಬರೆದ ನಂತರವೇ ನಾನು ಅದಕ್ಕೆ ಪ್ರತ್ಯುತ್ತರಿಸಿ ಚರ್ಚೆಗೆ ಸಿದಟಛಿವಿರುವುದಾಗಿ ಸ್ಪಷ್ಟಪಡಿಸಿದ್ದೆ. ಇದರಲ್ಲಿ ಯಾವುದೇ ತಪ್ಪು ಇಲ್ಲ. ಕಾಯ್ದೆ ದೃಷ್ಟಿಯಿಂದಲೂ ಈ ಪತ್ರ ಯೋಗ್ಯವಾಗಿಯೇ ಇದೆ. ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನಾನು ಗೋವಾದ ಹಿತ ಕಾಪಾಡಿಕೊಂಡು ಬಂದಿದ್ದೇನೆ. ಮುಂದೆಯೂ ಕಾಪಾಡುತ್ತೇನೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಮಂತ್ರಿಮಂಡಳ ಬೈಠಕ್ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಮಹದಾಯಿ ನದಿ ನೀರನ್ನು ನಾನು ಕರ್ನಾಟಕಕ್ಕೆ ಕೊಟ್ಟಿಲ್ಲ. ಕೇವಲ ಚರ್ಚೆ ನಡೆಸಲು ಸಿದಟಛಿವಿರುವುದಾಗಿ ಸಮ್ಮತಿ ಸೂಚಿಸಿದ್ದೇನೆ ಅಷ್ಟೆ. ನಾನು ಯಾರ ಒತ್ತಡದಿಂದಲೂ ಪತ್ರ ಬರೆದಿಲ್ಲ. ಯಡಿಯೂರಪ್ಪ ಕೂಡಾ ಯಾರ ಒತ್ತಡದಿಂದಲೂ ನನಗೆ ಪತ್ರ ಬರೆದಿಲ್ಲ. ನಾನು ಪತ್ರ ಬರೆಯುವಾಗಲೂ ಮಹದಾಯಿ ವಿಷಯದಲ್ಲಿ ಗೋವಾದ ಹಿತವನ್ನು ಅರಿತುಕೊಂಡೇ ಪತ್ರ ಬರೆದಿದ್ದೇನೆ. ನ್ಯಾಯಾ ಧಿಕರಣದಲ್ಲಿಯೂ ಮಹದಾಯಿ ಹೋರಾಟ ಮುಂದುವರೆಯಲಿದೆ ಎಂದರು.
ನಾನು ಕರ್ನಾಟಕಕ್ಕೆ ಬರೆದ ಪತ್ರದಿಂದಾಗಿ ನ್ಯಾಯಾಧಿಕರಣದಲ್ಲಿ ಗೋವಾಕ್ಕೆ ತೊಂದರೆಯುಂಟಾಗಲಿದೆ ಎಂಬುದು ಒಂದು ಅಪಪ್ರಚಾರ. ಕಾಯ್ದೆಯ ದೃಷ್ಟಿಯಿಂದ ನಾನು ಬರೆದ ಪತ್ರ ಅತ್ಯಂತ ಯೋಗ್ಯವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.