ಮಾರಿದ ಮಗು ವಾಪಸ್‌ ಕೇಳಿ ಸಿಕ್ಕಿ ಬಿದ್ದ ಮಹಾತಾಯಿ!

Team Udayavani, Dec 29, 2017, 6:20 AM IST

MAGU.jpg

ದಾವಣಗೆರೆ: ಮೂರು ದಿನದ ಹಸುಗೂಸನ್ನು ಮಾರಾಟ ಮಾಡಿ, ಇನ್ನೂ ಹೆಚ್ಚು ಹಣ ಸಿಗುವುದೆಂಬ ದುರಾಸೆಯಿಂದ ಮಾರಾಟ ಮಾಡಿದ ಕರುಳಬಳ್ಳಿಯನ್ನು ವಾಪಸ್‌ ಕೇಳಲು ಹೋದ ತಾಯಿ ಸಿಕ್ಕಿ ಬಿದ್ದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆ ಆವರಗೆರೆ ಗ್ರಾಮದಲ್ಲಿ ನಡೆದಿದೆ.

ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡುವ ಶಬೀನಾ ಬಾನು ಹೆತ್ತ ಮಗುವನ್ನೇ ಮಾರಾಟ ಮಾಡಿದ ಆರೋಪಿ. ಡಿ.22ರಂದು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಶಬೀನಾ ಬಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೊದಲೇ ಮಗು ಮಾರಾಟದ ಬಗ್ಗೆ ಆಕೆ ಕೆಲಸ ಮಾಡುತ್ತಿದ್ದ ಮಂಡಕ್ಕಿ ಭಟ್ಟಿ ಮಾಲೀಕನೊಂದಿಗೆ ಮಾತುಕತೆ ನಡೆದಿದೆ. ಮಗು ಹುಟ್ಟಿದ ಮೂರು ದಿನಗಳ ನಂತರ ಮಂಡಕ್ಕಿ ಭಟ್ಟಿ ಮಾಲೀಕ ಮುಕ್ತಿಯಾರ್‌ಗೆ 20 ಸಾವಿರ ರೂ. ಗೆ ಮಾರಾಟ ಮಾಡಿದ್ದಾಳೆ. ಆಕೆ ಕೆಲಸ ಮಾಡುವ ಜಾಗದಲ್ಲಿ ಕೆಲವರು “ಮಗುವನ್ನು 2.50 ಲಕ್ಷ ರೂ. ಮಾರಾಟ ಮಾಡಬಹುದು.

ನೀನು ಕಡಿಮೆ ಹಣಕ್ಕೆ ಮಾರಿದ್ದೀಯಾ’ ಎಂದಿದ್ದಾರೆ. 6 ದಿನ ಆದ ನಂತರ ಶಬೀನಾ “ಮಗು ವಾಪಸ್‌ ಕೊಡಿ, ನಿಮ್ಮ ದುಡ್ಡು
ತೆಗೆದುಕೊಳ್ಳಿ’ ಎಂದು ಮುಕ್ತಿಯಾರ್‌ ಬಳಿ ಹೋಗಿದ್ದಾಳೆ.

ಸಿಕ್ಕಿಬಿದ್ದ ಶಬೀನಾ:ಈ ಮಧ್ಯೆ ಮುಕ್ತಿಯಾರ್‌ ಆ ಮಗುವನ್ನು ತನ್ನ ಸಹೋದರ ಧಾರವಾಡದಲ್ಲಿರುವ ಮುಜೀಬುಲ್ಲಾ- ಅμàಜಾ ಬಾನು ದಂಪತಿಗೆ ನೀಡಿದ್ದಾರೆ. ಮಕ್ಕಳಿಲ್ಲದಿದ್ದರಿಂದ ಅವರು ಮಗುವನ್ನು ಕೊಂಡೊಯ್ದಿದ್ದರು. ಮಗು ಕೇಳಲು ಬಂದ ಶಬೀನಾಗೆ ಮುಕ್ತಿಯಾರ್‌ ಮಗು ಧಾರವಾಡದಲ್ಲಿರುವ ವಿಷಯ ತಿಳಿಸಿ ಕಳುಹಿಸಿದ್ದಾರೆ. ಬೇಸರಗೊಂಡ ಶಬೀನಾ ಬಾನು ಮಕ್ಕಳ ಸಹಾಯವಾಣಿಗೆ ದೂರಿತ್ತಿದ್ದಾಳೆ.

ಘಟನೆ ತಿಳಿಯುತ್ತಲೇ ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ ಕೆ.ಎಚ್‌. ವಿಜಯಕುಮಾರ್‌ ಸ್ಥಳಕ್ಕಾಗಮಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿ, ತನಿಖೆ ನಡೆಸಲು ಕೇಳಿ ಕೊಂಡಿದ್ದಾರೆ.

ನ್ಯಾಯಾಲಯದ ಮುಂದೆ: ಪ್ರಕರಣದಲ್ಲಿ ನಾನು ಮಕ್ಕಳನ್ನು ನನಗೆ ಪರಿಚಿತರಿದ್ದವರ ಮನೆಯಲ್ಲಿ ಬಿಟ್ಟಿದ್ದೆ. ಮಾರಾಟ ಮಾಡಿಲ್ಲ ಎಂದು ಶಬೀನಾ ಬಾನು ಹೇಳಿದ್ದಾರೆ. ತಂದೆ ಸಿಕಂದರ್‌ ಸಹ ಆರೋಪಿಯಾಗಿರುವುದರಿಂದ ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕೋ ಬೇಡವೋ ಎಂಬುದನ್ನು ನ್ಯಾಯಾಲಯ ನಿರ್ದೇಶಿಸಲಿದೆ ಎಂದು “ಉದಯವಾಣಿ’ಗೆ ವಿಜಯ್‌ಕುಮಾರ್‌ ತಿಳಿಸಿದ್ದಾರೆ. ಮಗು ಮಾರಾಟ ಕೃತ್ಯದಲ್ಲಿ ಕೆಲ ಸಂಘಟನೆಗಳ ಮುಖಂಡರು ಸಹ ಶಾಮೀಲಾಗಿದ್ದಾರೆಂಬ ಆರೋಪ ಕೇಳಿಬಂದಿವೆ. ಈ ಕುರಿತು ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಲಾಗಿದೆ. ಮಗು, ಅದರ ತಂದೆ- 
ತಾಯಿ, ಖರೀದಿಸಿದ ದಂಪತಿ, ಮಧ್ಯವರ್ತಿಯಾದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇದೇ ಮೊದಲಲ್ಲ
ಶಬೀನಾ ಬಾನು- ಸಿಕಂದರ್‌ ದಂಪತಿ ತಮಗೆ ಹುಟ್ಟಿದ ಮೊದಲ ಮಗುವನ್ನೂ ಸಹ ಗೋವಾಕ್ಕೆ ಮಾರಾಟ ಮಾಡಿದ್ದು
ಬೆಳಕಿಗೆ ಬಂದಿದೆ. 9 ವರ್ಷದ ಬಾಲಕಿಯನ್ನು ಗೋವಾದ ಶ್ರೀಮಂತರಿಗೆ ಮಾರಾಟ ಮಾಡಿದ್ದರು. 20 ಸಾವಿರ ರೂ.ಗೆ
ಮಾರಾಟ ಮಾಡಿ, ಕೊನೆಗೆ ಟೀಕೆ ಹಿನ್ನೆಲೆಯಲ್ಲಿ ವಾಪಸ್‌ ಕರೆದುಕೊಂಡು ಬಂದಿದ್ದಳು ಎಂಬುದು ಬೆಳಕಿಗೆ ಬಂದಿದೆ. ಈ
ದಂಪತಿಗೆ ಒಟ್ಟು ನಾಲ್ಕು ಮಕ್ಕಳಿದ್ದಾರೆ. ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ಮಾಡಿ, ಬಂದ ಆದಾಯದಲ್ಲಿ ಜೀವನ ನಡೆಸುವುದು
ಕಷ್ಟವಾಗಿದೆ. ಹೀಗಾಗಿ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

ಟಾಪ್ ನ್ಯೂಸ್

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.