ಹಿಂದೂ ಯುವ ಸೇನೆಯ ಬೆಳ್ಳಿ ಹಬ್ಬ
Team Udayavani, Dec 29, 2017, 11:18 AM IST
ಮಹಾನಗರ: ವಿವಿಧ ಹಿಂದೂ ಸಂಘಟನೆಗಳು ಹಿಂದೂಧರ್ಮದ ಏಳಿಗೆಗಾಗಿ ನಿರಂತರ ಸೇವಾ ನಿರತರಾಗಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದು ‘ಅಮ್ಮನೆಡೆಗೆ ನಮ್ಮ ನಡೆ ಕಾರ್ಯಕ್ರಮದ ರೂವಾರಿ ಸಂದೀಪ್ ಶೆಟ್ಟಿ ಮರವೂರು ಅವರು ಹೇಳಿದರು. ಕಾವೂರು ಬಳಿಯ ಶಾಂತಿ ನಗರ- ಅಂಬಿಕಾನಗರದ ಹಿಂದೂಯುವ ಸೇನೆಯ ಶ್ರೀ ಶಕ್ತಿ ಶಾಖೆಯ ಬೆಳ್ಳಿ ಹಬ್ಬ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ ಉಪನ್ಯಾಸ ನೀಡಿದ ಪುರುಷೋತ್ತಮ ಕೊಟ್ಟಾರಿ ಮಾತನಾಡಿ, ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಹುಟ್ಟಿದ ನಾವೆಲ್ಲ ನಮ್ಮ ಜನ್ಮ ಸಾರ್ಥಕವಾಗುವಂತಹ ಸೇವಾಮನೋಷಭಾವ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜಮುಖಿ ಸೇವೆ
ಅಧ್ಯಕ್ಷತೆ ವಹಿಸಿದ್ದ ಹಿಂದೂಯುವ ಸೇನೆಯ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ಮಾತನಾಡಿ, ಕಳೆದ 25 ವರ್ಷಗಳಿಂದ ನಿರಂತರ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಶ್ರೀಶಕ್ತಿ ಶಾಖೆಯಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಬಿಜೆಪಿ ಮುಖಂಡ ಡಾ| ಭರತ್ ಶೆಟ್ಟಿ, ಪದಾಧಿಕಾರಿಗಳಾದ ಯಶೋಧರ ಚೌಟ, ಕೊರಗಪ್ಪ ಶೆಟ್ಟಿ, ಉಮೇಶ್ ಪೂಜಾರಿ, ವಿಶ್ವ ಹಿಂದೂ ಪರಿಷತ್‌ನ ಪುರುಷೋತ್ತಮ ಸುವರ್ಣ, ಸ್ಥಳೀಯ ಕಾರ್ಪೊರೇಟರ್ ಮಧುಕಿರಣ್, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಧರ್ಣಪ್ಪ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ಸಮ್ಮಾನ
ಈ ಸಂದರ್ಭ ಸಾಧಕರಾದ ಡಾ| ಸತೀಶ್‌ಕಲ್ಲಿಮಾರ್, ಚಂದ್ರಶೇಖರ್ ಹಾಗೂ ವಿಶ್ವನಾಥ ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ವೇತನ ವಿತರಿಸಲಾಯಿತು. ಹಿಂದೂಯುವ ಸೇನೆಯ ಅಧ್ಯಕ್ಷ ಶಶಿಧರ್ ಕರ್ಕೇರ, ಪದಾಧಿಕಾರಿ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀರಾಮ ಭಜನ ಮಂದಿರದ ಕಾರ್ಯದರ್ಶಿ ದಿನಕರ ಕೆ. ಸನಿಲ್ ಹಾಗೂ ಮಹಿಳಾ ಕಾರ್ಯದರ್ಶಿ ಶೀಲಾ ಪಿ. ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಮಾಧವಕಾಂತನ ಬೆಟ್ಟು ವರದಿ ವಾಚಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ನಿರೂಪಿಸಿದರು. ಮಾಧವ ಕಾಂತನಬೆಟ್ಟು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ