ಹಲವು ಸಂದೇಶ ಸಾರಿದ ಹೈದರಾಬಾದ್‌ ವಿಜಯ


Team Udayavani, Dec 29, 2017, 11:25 AM IST

29-13.jpg

ಉಡುಪಿಯ ರಾಜಾಂಗಣದಲ್ಲಿ ಪ್ರದರ್ಶನವಾದ “ಹೈದರಾಬಾದ್‌ ವಿಜಯ’ ತಾಳಮದ್ದಳೆಯು ಹಲವು ಕಾರಣಗಳಿಂದಾಗಿ ಮನಸ್ಸಿಗೆ ಹಿತವಾಗಿದೆ. ಹಿರಿಯ ಪತ್ರಕರ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂ.ವಿ. ಹೆಗ್ಡೆ ಅವರು ಬರೆದಿದ್ದ ಸ್ವಾತಂತ್ರ್ಯ ಹೋರಾಟ ಕೇಂದ್ರಿತ ಎರಡು ಯಕ್ಷಗಾನ ಪ್ರಸಂಗಗಳಲ್ಲಿ ಒಂದಾಗಿರುವ “ಹೈದರಾಬಾದ್‌ ವಿಜಯ’ (ರಜಕಾರಾಸುರ ಸಂಹಾರ)ವು ಪಟ್ಲ ಸತೀಶ್‌ ಶೆಟ್ಟಿ ಭಾಗವತಿಕೆಯಲ್ಲಿ ಮೂಡಿಬಂತು. ಈ ಕೃತಿಯನ್ನು ಜೋಪಾನವಾಗಿ ಸಂಗ್ರಹಿಸಿಟ್ಟು, ಕಾರ್ಯಕ್ರಮದ ರೂವಾರಿಯಾಗಿದ್ದ ಸುಧಾಕರ ಆಚಾರ್ಯ ಅವರಿಗೆ ತಲುಪಿಸಿದ ತೆಕ್ಕಟ್ಟೆ ವೆಂಕಟೇಶ್‌ ವೈದ್ಯ ಅವರನ್ನು ಗೌರವಿಸಲಾಯಿತು. ಕೃತಿಯನ್ನು ಒದಗಿಸಿದ್ದ ಮಂಗಳೂರಿನ ಕೃಷ್ಣಪ್ಪ ಕರ್ಕೇರ ಅವರು ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.

ಇಲ್ಲಿ ಓರ್ವ ನಾಯಕನಾದವನು ಹೇಗಿರಬೇಕು? ಕೈಕಳಗಿನವರನ್ನು ಮತ್ತು ಜನರನ್ನು ಒಲಿಸಿಕೊಳ್ಳಲು ಭೀತಿಯೊಂದೇ ಸಾಧನವೇ? ಪಾಕಿಸ್ಥಾನದ ಇಂದಿನ ಕುಟಿಲ ನೀತಿ ಹಿಂದೆಯೂ ಇದೇ ರೀತಿ ಇತ್ತಾ? ಮುಸ್ಲಿಮರಲ್ಲಿರುವ ಭಾರತಪರ ದೇಶಭಕ್ತಿಯಿಂದಲೇ ಹೈದರಾಬಾದ್‌ ನಿಜಾಮನಿಗೆ ಸುಲಭವಾಗಿ ಸೋಲಾಯಿತೇ ಮುಂತಾದ ಪ್ರಶ್ನೆಗಳಿಗೂ ಉತ್ತರ ನೀಡುವಲ್ಲಿ ಕಲಾವಿದರು ಸಮರ್ಥರಾದರು. 

ಸುಮಾರು ಎರಡರಿಂದ ಎರಡೂವರೆ ತಾಸು ಕಾಲ ತಾಳಮದ್ದಳೆ ಜರಗಿದ್ದು, ಸಮಯಾಭಾವದಿಂದ ಮೂಲ ಕೃತಿಯಲ್ಲಿದ್ದ ಕೆಲವು ಪದ್ಯಗಳನ್ನು ಕೈಬಿಡಲಾಗಿದೆ ಎಂದು ತಿಳಿಸಲಾಗಿತ್ತಾದರೂ, ಇಲ್ಲಿ ಕಥೆಗೆ ಭಂಗ ಉಂಟಾಗಲಿಲ್ಲ. ವಂದೇ ಮಾತರಂ ಹಾಡಿನೊಂದಿಗೆ ತಾಳಮದ್ದಳೆ ಆರಂಭವಾಗಿದ್ದು, ಬಳಿಕ ಹಲವು ಪದ್ಯಗಳು ಪಟ್ಲರ ಕಂಠದಿಂದ ಹೊರಬಂದಿದ್ದು, ಅವುಗಳಲ್ಲಿ “ಕಲಿಸಿಹನು ಗುರು ಶಾಂತಿಮಂತ್ರವ, ಕಲಹ ಬೇಡೆನುತ’ ಹಾಡಿಗೆ ಪ್ರೇಕ್ಷಕರ ಚಪ್ಪಾಳೆ ಅರ್ಹವಾಗಿಯೇ ಸಿಕ್ಕಿತು. ಬಳಿಕ “ಬೆದರುವ ಕಾರಣವಿಲ್ಲ, ಕದನವೆ ನಡೆದರೂ ನಮಗಿಲ್ಲ ಅಶುಭ’ ಹಾಡೂ ಮೆಚ್ಚುಗೆಯಾಯಿತು. “ಸೈನಿಕ ಮಕ್ಕಳಿರಾ ಗೆದ್ದು ಬನ್ನಿ’ ಹಾಗೂ “ನಿಜಾಮನ ಕುಸಿದನು ಭಾರತಕೆ ಶರಣೆನುತ’ ಮುಂತಾದ ಹಾಡುಗಳು ಹೆಚ್ಚು ಶ್ಲಾಘನೆಗೆ ಒಳಗಾದವು. ಹೆಚ್ಚಿನ ಹಾಡುಗಳು ಗಾತ್ರದಲ್ಲಿ ಕಿರಿದಾಗಿದ್ದರೂ, ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಸಫ‌ಲವಾಯಿತು. 

ವಲ್ಲಭಭಾಯಿ ಪಟೇಲ್‌ ಪಾತ್ರಧಾರಿಯಾಗಿದ್ದ ಪ್ರಶಾಂತ್‌ ಬೇಳೂರು ದಿಟ್ಟತನ, ಗಾಂಭೀರ್ಯ ಮತ್ತು ನಿರರ್ಗಳ ಮಾತುಗಾರಿಕೆ ಯಿಂದ ಗಮನ ಸೆಳೆದರು. ನೆಹರೂ ಪಾತ್ರಧಾರಿ ನಾರಾಯಣ ಹೆಗಡೆ ಹಾಗೂ ರಾಜಾಜಿ ಪಾತ್ರಧಾರಿ ಎಂ.ಎಲ್‌. ಸಾಮಗ ಮಾತಿನ ಮಂಟಪಕ್ಕೆ ಸೂಕ್ತ ಆಧಾರವಾದರು. ರಜಾಕಾರ ಸೇನೆಯ ಮುಖ್ಯಸ್ಥ ಸಯ್ಯದ್‌ ಖಾಸಿಂ ರಜ್ಮಿ ಪಾತ್ರ ಮಾಡಿದ್ದ ಸದಾಶಿವ ಆಳ್ವ ತಲಪಾಡಿ ವಿಡಂಬನಾತ್ಮಕ ಮಾತುಗಳ ಮೂಲಕ ಇಡೀ ಕೂಟಕ್ಕೆ ಹೊಸ ಕಳೆ ತುಂಬಿದರು. ನಿಜಾಮನ ಪ್ರಧಾನಿ ಲಾಯಕ್‌ ಅಲಿ ಪಾತ್ರ ಮಾಡಿದ್ದ ಶ್ರೀರಮಣ ಆಚಾರ್ಯ ಗಮನ ಸೆಳೆದರು. ನಿಜಾಮ ಪಾತ್ರಧಾರಿ ಅಪ್ಪು ನಾಯಕ್‌ ಆತ್ರಾಡಿ, ಅಸಮರ್ಥ ಹಾಗೂ ಅಸಹಾಯಕ ನಾಯಕನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರು. ಜತೆಗೆ ನಾಯಕನಾದವನು ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದಿದ್ದರೆ, ತನ್ನ ಸುತ್ತ ಇರುವವರ ಮೇಲೆ ಅತಿಯಾದ ನಂಬಿಕೆ ಹೊಂದಿದ್ದರೆ ಯಾವ ಪರಿಸ್ಥಿತಿ ಎದುರಾದೀತು ಎಂಬುದನ್ನು ಮನಸ್ಪರ್ಶಿಯಾಗಿ ಪ್ರೇಕ್ಷಕರಿಗೆ ನೀಡುವಲ್ಲಿ ಸಫ‌ಲರಾದರು.

ಸೇನಾಧಿಕಾರಿ ಜನರಲ್‌ ಮಹಾರಾಜ ರಾಜೇಂದ್ರ ಸಿಂಗ್‌ ಪಾತ್ರ ಮಾಡಿದ್ದ ಪಾದೆಕಲ್ಲು ವಿಷ್ಣು ಭಟ್‌ ಮತ್ತು ಮೇ| ಜ| ಜೆಕೆಎನ್‌ ಚೌಧರಿ ಪಾತ್ರಕ್ಕೆ ಜೀವ ತುಂಬಿದ್ದ ಕುಂಬ್ಳೆ ಸುಂದರ ರಾವ್‌ ಸಮರ್ಥವಾಗಿಯೇ ಪ್ರೇಕ್ಷಕರನ್ನು ರಂಜಿಸಿದರು. 
ಪ್ರಸಂಗವು ಹೆಚ್ಚಿನವರಿಗೆ ತಿಳಿದಿರದ ಒಂದು ಕಥೆಯನ್ನು ರಾಷ್ಟ್ರೀಯತೆಯೊಂದಿಗೆ ಬೆರೆಸಿ ಪ್ರೇಕ್ಷಕರನ್ನು ತಲುಪುವಲ್ಲಿ ಸಫ‌ಲ ವಾಯಿತು. ನಾಯಕನಾದವನು ಪ್ರೀತಿಯಿಂದಲೇ ಜನರನ್ನು ಒಲಿಸಲು ಮುಂದಾಗಬೇಕು, ಅದರಲ್ಲಿ ಫ‌ಲ ಸಿಗದಿದ್ದರೆ ಮಾತ್ರ ಭೀತಿ ಸೃಷ್ಟಿಸಬೇಕು. ಪಾಕಿಸ್ಥಾನವು ಆಗಲೂ ಕುಟಿಲ ಭಾರತ ವಿರೋಧಿ ನೀತಿಯ ಮೂಲಕ ನಿಜಾಮರಿಗೆ ಹೇಗೆ ಸಹಕಾರ ನೀಡುತ್ತಿತ್ತು ಎಂಬುದನ್ನೂ ತಿಳಿಸುವುದರ ಜತೆಗೆ, ಹೈದರಾಬಾದ್‌ನ ಮುಸ್ಲಿಮರು ನಿಜಾಮನಿಗೆ ವಿರುದ್ಧವಾಗಿ ಭಾರತ ಪರ ನಿಲುವು ಹೊಂದಿದ್ದರಿಂದ ಕೇವಲ ಐದೇ ದಿನದಲ್ಲಿ ಜಯ ಭಾರತದ ಪಾಲಾಗಿತ್ತು. ಒಂದು ಹೊಸ ಅನುಭವ ನೀಡಿದ ಈ ಕಾರ್ಯಕ್ರಮದ ಆಯೋಜಕರು ಶ್ಲಾಘನೀಯರು.

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.