ಜಾರ್ಖಂಡ್‌ನಲ್ಲಿ ಲವ್-ಜಿಹಾದ್: ಹಿಂದೂ ಮಹಿಳೆಯ ರೇಪ್, ಕೊಲೆ
Team Udayavani, Dec 29, 2017, 11:59 AM IST
ರಾಂಚಿ : ಮುಸ್ಲಿಂ ಪುರುಷನನ್ನು ವಿವಾಹದ ಹಿಂದೂ ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಆಕೆಯ ಮಾವ ಮತ್ತು ಆತನ ಸಹೋದರ ಜತೆಗೂಡಿ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಆಕೆಯನ್ನು ಕೊಂದು ಹಾಕಿದ ಆಘಾತಕಾರಿ ಮತ್ತು ಅಮಾನವೀಯ ಘಟನೆ ಜಾರ್ಖಂಡ್‌ನ ರಾಮಗಢ ಜಿಲ್ಲೆಯಿಂದ ವರದಿಯಾಗಿದೆ.
ಹಿಂದೂ ಮಹಿಳೆಯನ್ನು ರೇಪ್ ಮಾಡಿ ಕೊಂದ ಘಟನೆಯು ತಿಂಗಳ ಹಿಂದೆ ನಡೆದಿತ್ತು. ಕಳೆದ ನವೆಂಬರ್ 6ರಿಂದ ನಾಪತ್ತೆಯಾಗಿದ್ದ ಈ ಮಹಿಳೆಯ ಶವವು ಹಗ್ಗದಿಂದ ಕೈ ಕಾಲು ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಗರ್ನಾ ನದೀ ಕಿನಾರೆಯಲ್ಲಿ ಕಂಡು ಬಂದಾಗಲೇ ಆಕೆಯ ಅತ್ಯಾಚಾರ, ಕೊಲೆ ಬಯಲಾಯಿತು. ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದು ಬಳಿಕ ಆಕೆಯನ್ನು ಕೊಂದಿರುವ ಸಂಗತಿ ಸಾಬೀತಾಯಿತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕ್ಷಿಪ್ರಗತಿಯಿಂದ ಕಾರ್ಯೋನ್ಮುಖರಾದ ಪೊಲೀಸರು ಮೊತ್ತ ಮೊದಲಾಗಿ ಆಕೆಯ ಮುಸ್ಲಿಂ ಪತಿ ಆದಿಲ್‌ನನ್ನು ಬಂಧಿಸಿದರು. ತನಿಖೆಯ ವೇಳೆ ಈತ ಹಲವು ಆಘಾತಕಾರಿ ಸಂಗತಿಗಳ ಬಗ್ಗೆ ಬಾಯಿ ಬಿಟ್ಟಾಗಲೇ ಮಹಿಳೆ ಅನುಭವಿಸಿದ್ದ ನರಕ ಯಾತನೆಗಳು ಬೆಳಕಿಗೆ ಬಂದವು.
ಪೊಲೀಸರ ಪ್ರಕಾರ ಅತ್ಯಾಚಾರ, ಕೊಲೇಗೀಡಾದ ಹಿಂದೂ ಮಹಿಳೆಯು ತನ್ನ ಹಾಗೂ ತನ್ನ ಪ್ರಿಯಕರ ಆದಿಲ್ ನ ಹೆತ್ತವರ ವಿರೋಧವನ್ನು ಲೆಕ್ಕಿಸದೆ ಕಳೆದ ತಿಂಗಳಲ್ಲಿ ಆದಿಲ್‌ನನ್ನು ಮದುವೆಯಾಗಿದ್ದಳು. ಮದುವೆಯ ಬಳಿಕ ನೂತನ ದಂಪತಿ ಬೊಕಾರೋದಲ್ಲಿನ ಆದಿಲ್‌ನ ಚಿಕ್ಕಪ್ಪನ ಮನೆಗೆ ಹೋಗಿದ್ದರು. ಆಗ ಆ ಚಿಕ್ಕಪ್ಪ ಆದಿಲ್‌ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿ ಬೊಕಾರೋಗೆ ಆತನನ್ನು ಬರಮಾಡಿಸಿಕೊಂಡಿದ್ದ.
ಆದಿಲ್ ನ ಚಿಕ್ಕಪ್ಪ ಮತ್ತು ತಂದೆ ಸೇರಿ ಹುಡುಗಿಯನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಬಲವಂತ ಪಡಿಸಿದರು. ಆದಕ್ಕೆ ಒಪ್ಪದಿದ್ದ ಆಕೆಯನ್ನುಆದಿಲ್ ಸಹಿತವಾಗಿ, ಮುಂದಿನ ಜೀವನ ನಡೆಸಲು, ರಾಂಚಿಗೆ ಕಳುಹಿಸಿಕೊಡಲು ತೀರ್ಮಾನಿಸಿದರು. ಅಂತೆಯೇ ಅವರನ್ನು ಕಾರಿನಲ್ಲಿ ಒಯ್ದ ತಂದೆ – ಚಿಕ್ಕಪ್ಪ ಮಾರ್ಗ ಬದಲಾಯಿಸಿ ನಿರ್ಜನ ಅರಣ್ಯ ಪ್ರದೇಶಕ್ಕೆ ಒಯ್ದರು. ಅಲ್ಲಿ ಅವರು ಮೊದಲು ಆದಿಲ್ ಮೇಲೆ ಹಲ್ಲೆ ನಡೆಸಿ ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಆತನ ಸಮ್ಮುಖದಲ್ಲೇ ಹುಡುಗಿಯ ಮೇಲೆ ಸರದಿ ಪ್ರಕಾರ ಗ್ಯಾಂಗ್ ರೇಪ್ ನಡೆಸಿ, ಬಳಿಕ ಆಕೆಯನ್ನು ಕೊಂದು ಅರಣ್ಯದಲ್ಲಿ ಗಿಡಗಂಟಿಗಳ ನಡುವೆ ಶವವನ್ನು ಬಿಸುಟು ಹೋದರು.
ಈ ಇಡಿಯ ಪ್ರಕರಣ ಪೊಲೀಸ್ ತನಿಖೆಯಲ್ಲಿ ಬಹಿರಂಗವಾದಾಗ ಅನೇಕ ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಭಾರೀ ಪ್ರತಿಭಟನೆ ನಡೆಸಿದವು. ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಅತ್ಯಾಚಾರ, ಕೊಲೆ ಆರೋಪಿಗಳಾಗಿರುವ ಆದಿಲ್‌ನ ಅಪ್ಪ – ಚಿಕ್ಕಪ್ಪನನ್ನು ಪೊಲೀಸರು ಇನ್ನಷ್ಟೆ ಬಂಧಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.