ಸ್ವಸ್ಥ ಸಮಾಜಕ್ಕೆ ನಾಗರಿಕರು ಪೊಲೀಸರಾಗಲಿ
Team Udayavani, Dec 29, 2017, 1:15 PM IST
ಹುಬ್ಬಳ್ಳಿ: ಸಮಾಜದಲ್ಲಿ ಕಾನೂನು ಗೌರವಿಸಲಾರದವರಿಗೆ ಇಲ್ಲಿ ಸ್ಥಾನವಿಲ್ಲವೆಂಬ ಸಂದೇಶವನ್ನು ತಲುಪಿಸುವ ಕಾರ್ಯವನ್ನು ಸಾರ್ವಜನಿಕರು ಮಾಡಬೇಕಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಹೇಳಿದರು.
ಇಲ್ಲಿನ ಅಶೋಕನಗರದ ಡಾ| ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಹು-ಧಾ ಪೊಲೀಸ್ ಕಮಿಷನರೇಟ್, ಅಶೋಕನಗರ ಪೊಲೀಸ್ ಠಾಣೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ-2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶೇ.99ರಷ್ಟು ಜನರು ಕಾನೂನು ಪರಿಪಾಲಕರಾಗಿದ್ದಾರೆ.
ಆದರೆ ಶೇ.1ರಷ್ಟು ಜನರು ಇದರ ಉಲ್ಲಂಘನೆ ಮಾಡುತ್ತಿರುವುದರಿಂದ ಇದರ ದುಷ್ಪರಿಣಾಮ ಸಮಾಜದ ಮೇಲೆ ಆಗುತ್ತಿದೆ. ಆದ್ದರಿಂದ ಇಂಥವರಿಗೆ ಸಾರ್ವಜನಿಕರ ಹಾಗೂ ಪೊಲೀಸರ ಭಯ ಇರಬೇಕು. ಆ ನಿಟ್ಟಿನಲ್ಲಿ ನಮ್ಮಲ್ಲಿ ಸಾಮಾಜಿಕ ಬದ್ಧತೆ ಬೇಕು. ಕಳ್ಳರಿಗೆ ಶಿಕ್ಷೆ ಆಗಬೇಕು.
ಇಲ್ಲವಾದರೆ ಮತ್ತೆ ಅವರು ಅಡ್ಡದಾರಿ ಹಿಡಿಯುತ್ತಾರೆ ಎಂದರು. ಜನವರಿ ತಿಂಗಳಲ್ಲಿ ಸಂಚಾರ ಸಪ್ತಾಹ ಆಚರಿಸಲಾಗುವುದು. ಈ ವೇಳೆ ಕಡ್ಡಾಯವಾಗಿ ಸಂಚಾರ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗುವುದು. ಹೆಲ್ಮೆಟ್ ಧರಿಸದೆ ಚಾಲನೆ ಮಾಡುವ ದ್ವಿಚಕ್ರ ವಾಹನ ಸವಾರರ ಮೇಲೆ ಕ್ರಮಕೈಗೊಳ್ಳಲಾಗುವುದು.
ಅವಳಿ ನಗರದಲ್ಲಿ ಬಹುತೇಕ ಆಟೋರಿಕ್ಷಾಗಳಿಗೆ ಪರವಾನಗಿ ಇಲ್ಲ. ಆದ್ದರಿಂದ ಆಟೋರಿಕ್ಷಾದಲ್ಲಿ ಚಾಲಕನ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಚಾಲಕನ ಹೆಸರು, ಮೊಬೈಲ್ ಸಂಖ್ಯೆ, ವಾಹನದ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಚಾಲಕರು ಸಮವಸ್ತ್ರ ಧರಿಸಬೇಕು.
ಸ್ವ-ಆತ್ಮರಕ್ಷಣೆಗಾಗಿ ಮಹಿಳೆಯಗೆ ಕರಾಟೆ ಹಾಗೂ ಸಿವಿಲ್ ರೈಫಲ್ ಫೈರಿಂಗ್ ತರಬೇತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಡಿಸಿಪಿ ರೇಣುಕಾ ಸುಕುಮಾರ ಮಾತನಾಡಿ, ಪೊಲೀಸರು ಲಾಠಿ ಹಿಡಿದು ಸಂಚಾರ ನಿರ್ವಹಣೆ ಮಾಡುವ ಕಾಲ ಮುಗಿದಿದೆ.
ಪೊಲೀಸರು ಸಮವಸ್ತ್ರ ಧರಿಸಿದ ನೌಕರರಷ್ಟೆ. ಸಮಾಜ ನೆಮ್ಮದಿಯಾಗಿ, ಸುವ್ಯವಸ್ಥಿತವಾಗಿ ಇರಬೇಕಾದರೆ ಎಲ್ಲರ ಸಹಕಾರ ಮುಖ್ಯ. ಸಂಚಾರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಸಮಾಜ ಸುರಕ್ಷಿತವಾಗಿಡುವಲ್ಲಿ ಪೊಲೀಸರೊಂದಿಗೆ ನಾಗರಿಕರ ಪಾತ್ರವೂ ಅತೀ ಮಹತ್ವದಾಗಿದೆ.
ಸ್ವಯಂ ರಕ್ಷಣೆಗಾಗಿ ಮಹಿಳೆಯರೆಲ್ಲ ಸಿದ್ಧರಾಗಬೇಕು. ಅದಕ್ಕಾಗಿ ತರಬೇತಿ ಪಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಆಯುಕ್ತರು ಅಪರಾಧ ತಡೆ ಮಾಸಾಚರಣೆ ಅಂಗವಾಗಿ 7-8ನೇ ತರಗತಿ ಹಾಗೂ 9-10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ನೀಡಿದರು.
ಬೀಟ್ ಚೆನ್ನಾಗಿ ನಿರ್ವಹಿಸಿದ ಅಶೋಕನಗರ ಠಾಣೆಯ ತಿಂಗಳ ವ್ಯಕ್ತಿಯೆಂದು ಆಯ್ಕೆಯಾದ ಮೂವರು ಸಿಬ್ಬಂದಿಯನ್ನು ಸನ್ಮಾನಿಸಿದರು. 260 ಗ್ರಾಂ ಚಿನ್ನಾಭರಣ ಕಳುವಾಗಿದ್ದನ್ನು ಪತ್ತೆ ಮಾಡಿದ್ದಕ್ಕಾಗಿ ಫಾರೆಸ್ಟ್ ಕಾಲೋನಿಯ ಪರಶುರಾಮ ಧೋಂಗಡಿ ಮತ್ತು ಕುಟುಂಬದವರು ಪೊಲೀಸ್ ಆಯುಕ್ತರನ್ನು ಸನ್ಮಾನಿಸಿದರು. ನಾಗರಿಕರಾದ ಎ.ಡಿ. ಕೊಟ್ನಾಳ, ಸಿದ್ದು ಮೊಗಲಿಶೆಟ್ಟರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಸಿಪಿ ಎಸ್.ಬಿ. ನೇಮಗೌಡ ಅಧ್ಯಕ್ಷತೆ ವಹಿಸಿದ್ದರು. ಎಸಿಪಿಗಳಾದ ಎಚ್.ಕೆ. ಪಠಾಣ, ಎನ್.ಬಿ. ಸಕ್ರಿ ಮೊದಲಾದವರಿದ್ದರು. ಸುಧಾರಾಣಿ ಪ್ರಾರ್ಥಿಸಿದರು. ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.