ಮಕ್ಕಳಿಗೆ ಉತ್ತಮ ಸಂಸ್ಕಾರ, ತಿಳಿವಳಿಕೆ ನೀಡಿ
Team Udayavani, Dec 29, 2017, 1:16 PM IST
ಇಂಡಿ: ಇಂದಿನ ಶಿಕ್ಷಣ ವ್ಯವಸ್ಥೆ ಮೊದಲಿನಂತಿಲ್ಲ. ಯಾರನ್ನು ಹೇಗೆ ಮಾತನಾಡಿಸಬೇಕು, ಹೇಗೆ ಗೌರವಿಸಬೇಕು ಎಂಬ ಪರಿಜ್ಞಾನ ಈಗಿನ ಜನತೆಗಿಲ್ಲ ಎಂದು ಬೀದರಿನ ಸಿದ್ಧಾರೂಢಮಠದ ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಬಬಲಾದ ಗ್ರಾಮದ ಪರಮ ಪೂಜ್ಯ ಸಿದ್ದಾರೂಢ ಮಹಾಸ್ವಾಮಿಗಳ ಮಹಾಮಂದಿರ ನಿರ್ಮಾಣದ ಶಂಕುಸ್ಥಾಪನೆ ಹಾಗೂ ಬೃಹತ್ ಕುಂಭೋತ್ಸವ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಮೊದಲಿನ ಶಿಕ್ಷಣ ಪದ್ಧತಿ ಜೀವನವನ್ನು ಕೊನೆಗೊಳ್ಳುವವರೆಗೂ ಮನಮುಟ್ಟುವಂತೆ ಮಾಡುತ್ತಿತ್ತು. ಉತ್ತಮ ಸಂಸ್ಕಾರ, ಸ್ವಧರ್ಮ ನಿಷ್ಠೆಗಳ ಬಗ್ಗೆ ತಿಳಿವಳಿಕೆ ನೀಡಿ ಅಧರ್ಮ ಕೆಲಸವಾಗದಂತೆ ಅಂದಿನ ಗುರುಗಳು ಶಿಕ್ಷಣ ನೀಡುತ್ತಿದ್ದರು ಎಂದರು.
ನಾವು ಅನೇಕ ಪ್ರಾಂತಗಳನ್ನು ಸುತ್ತಾಡಿದ್ದೇವೆ. ಆದರೆ, ಸಿದ್ಧಾರೂಢರನ್ನು ವರ್ಣಿಸಲು ಪದಗಳೇ ಇಲ್ಲ. ದೇಶದ 14
ಭಾಷೆಗಳನ್ನು ಆಡುವ ಅದ್ಭುತ ವಾಣಿ ಅವರಲ್ಲಿತ್ತು. 31 ರಾಜ್ಯಗಳ ರಾಜರು ಇವರ ಶಿಷ್ಯರಾಗಿದ್ದರು. ಸ್ವಾಮಿ ವಿವೇಕಾನಂದರ ಗುರು ಪರಮ ಹಂಸರು ತೀರಿದ ನಂತರ ಸಿದ್ಧಾರೂಡರನ್ನು ಗುರು ಎಂದು ವೀವೆಕಾನಂದರು ಬಣ್ಣಿಸಿದ್ದಾರೆ ಎಂದು ಹೇಳಿದರು.
ಭಾರತ ಶ್ರೀಮಂತ ರಾಷ್ಟ್ರ, ಆದರೆ, ಆ ರಾಷ್ಟ್ರದಲ್ಲಿ ದರಿದ್ರರಿದ್ದಾರೆ. ಇಲ್ಲಿ ಅಧ್ಯಾತ್ಮಿಕ ನೈಸರ್ಗಿಕ ಸಂಪತ್ತು ಇದ್ದರೂ ಸಹಿತ ಅವುಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಕನಿಷ್ಠ ತಿಳಿವಳಿಕೆ ಇಲ್ಲ ಎಂದು ಉನ್ನತ ನ್ಯಾಯಾಲಯದ ನಿವೃತ್ತಿ ನ್ಯಾಯಾಧಿಧೀಶರೊಬ್ಬರು ಹೇಳಿದ್ದಾರೆ ಎಂದರು.
ಅಧಿಕಾರ ಮತ್ತು ಐಶ್ವರ್ಯ ಮನುಷ್ಯನಿಗೆ ಹಾಳು ಮಾಡುತ್ತದೆ. ಅಧಿಕಾರ ಇದ್ದವರಿಗೆ ವಿನಯ ಇರಬೇಕು. ಪರಮಾತ್ಮನೆ ಒಬ್ಬನೆ ಅಧಿಕಾರಿ. ಸಮಸ್ತ ದೃಷ್ಠಿಯಿಂದ ನೋಡಬೇಕು. ಸಿದ್ಧಾರೂಢರಿಗೆ ಯಾವುದೇ ಜಾತಿ ಇಲ್ಲ. ಮಾನವ ಜಾತಿ ಒಂದೇ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರ ಬಸವಂತ್ರಾಯಗೌಡ ವಿ. ಪಾಟೀಲ, ಶಾಸಕರು ಈ ಮಂದಿರದ ಸಹಾಯಾರ್ಥವಾಗಿ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಭೀಮಾ ತೀರದ ಭಾಗದಲ್ಲಿ ಭಕ್ತಿಯ ಕೇಂದ್ರಗಳಾಗಿ ಬೆಳೆಯಲಿ. ಈ ಮಂದಿರ ಒಂದು ಅಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮಲಿ. ಆರ್ಥಿಕವಾಗಿ ಸದೃಢರಾದರೂ ಮಾನಸಿಕವಾಗಿ ಖನ್ನತೆಗೆ ಒಳಗಾಗಿದ್ದೇವೆ. ಇಂತಹ ಮಠ ಮಾನ್ಯಗಳಿಂದ ಈ ಭಾಗದ ಜನರು ಸಂಸ್ಕಾರವಂತರಾಗಿ ಬಾಳಲಿ ಎಂದು ಹೇಳಿದರು.
ಎಂ.ಆರ್ ಪಾಟೀಲ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ಮಂಜುನಾಥ ವಂದಾಲ, ಸಂಗಮೇಶ ತಾಳಿಕೋಟಿ ಮಾತನಾಡಿದರು. ಅಳೂರ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮಿಜಿ, ಇಂಡಿ ಸಿದ್ಧಾರೂಢ ಮಠದ ಸ್ವರೂಪಾನಂದ ಸ್ವಾಮೀಜಿ, ಸಾತಲಗಾಂವದ ಮದ್ದಾನಿ ಮಹಾರಾಜರು, ಅಭಿನವ ಶಿವಪುತ್ರ ಸ್ವಾಮೀಜಿ, ನೇತ್ರಾವತಿ ಅಮ್ಮನವರು, ಅಥರ್ಗಾದ ವಚನ ಶ್ರೀ ಮಾತಾಜಿ, ಹೊರ್ತಿಯ ಪೂಜಾರಿ ಸಾನ್ನಿಧ್ಯವಹಿಸಿದ್ದರು.
ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಅಣ್ಣಪ್ಪ ಖೈನೂರ, ಸಾಂಬಾಜಿರಾವ ಮಿಸಾಳೆ, ರವಿಕಾಂತ ಬಗಲಿ, ಕಾಸುಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ಲಲಿತಾಬಾಯಿ ಪೂಜಾರಿ,ಬಿ.ಎಂ ಕೋರೆ, ತಾ.ಪಂ ಅಧ್ಯಕ್ಷ ರುಕ್ಮುದ್ದಿನ ತದ್ದೇವಾಡಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.