ವಿಟ್ಲ: ಹಳೆ ಬಸ್ ನಿಲ್ದಾಣಕ್ಕೆ ಡಾಮರು ಕಾಮಗಾರಿ
Team Udayavani, Dec 29, 2017, 3:18 PM IST
ವಿಟ್ಲ : ವಿಟ್ಲ ಹಳೆ ಬಸ್ ನಿಲ್ದಾಣಕ್ಕೆ ಗುರುವಾರ ವಿಟ್ಲ ಪ.ಪಂ.ಅನುದಾನದಲ್ಲಿ ಡಾಮರು ಕಾಮಗಾರಿ ನಡೆಸಲಾಯಿತು. ವಿಟ್ಲ ಪ.ಪಂ.ನ ಮಳೆಹಾನಿ ಯೋಜನೆಯಲ್ಲಿ ಬಿಡುಗಡೆಗೊಂಡ 4.93 ಲ.ರೂ. ಅನುದಾನದಲ್ಲಿ ಡಾಮರು ಹಾಕಲಾಗಿದೆ. ಐದು ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಮಳೆಯಿಂದಾಗಿ ನಿಲ್ದಾಣದಲ್ಲಿ ಹೊಂಡಗಳು ನಿರ್ಮಾಣವಾಗಿದ್ದರಿಂದ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದರು.
ಪ.ಪಂ. ಅಧ್ಯಕ್ಷ ಅರುಣ್ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ್ ಶೆಶೆಣೈ, ಸದಸ್ಯರಾದ ಶ್ರೀಕೃಷ್ಣ, ಜಯಂತ ಹಾಗೂ ಮುಖ್ಯಾಧಿಕಾರಿ ಮಾಲಿನಿ ಅವರು ಪರಿಶೀಲಿಸಿದರು. ಬಸ್, ರಿಕ್ಷಾ, ಟೂರಿಸ್ಟ್ ಕಾರುಗಳು ಇದೇ ನಿಲ್ದಾಣದಲ್ಲಿ ತಂಗುತ್ತಿದ್ದು, ಗುರುವಾರ ಕಾಮಗಾರಿ ನಡೆಯುತ್ತಿರುವಾಗ ಅವುಗಳನ್ನು ಅನಿವಾರ್ಯವಾಗಿ ನಿರ್ಬಂಧಿಸಲಾಗಿತ್ತು. ಪರಿಣಾಮ ವಾಹನಗಳ ಜಂಜಾಟ ತೀವ್ರವಾಗಿತ್ತು. ಪೇಟೆಯಲ್ಲಿ ಆಗಾಗ ಬ್ಲಾಕ್ ಆಗುತ್ತಿತ್ತು. ಮಧ್ಯಾಹ್ನ ಚಂದ್ರನಾಥ ಸ್ವಾಮಿ ಬಸದಿ ಬಳಿ ಲಾರಿಯೊಂದು ಯದ್ವಾತದ್ವಾ ನುಗ್ಗಿ ಬಂದು, ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಈ ಸಂದರ್ಭ ಬಸ್ಏಜೆಂಟರು, ಕೆಲಯುವಕರು, ಗೃಹರಕ್ಷಕ ದಳದವರೊಂದಿಗೆ ಸಹಕರಿಸಿ, ಟ್ರಾಫಿಕ್ ಜಂಜಾಟವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಮುಖ್ಯಾಧಿಕಾರಿ ಮಾಲಿನಿ ಮತ್ತಿತರರು ವಿಟ್ಲ ಬಸ್ ನಿಲ್ದಾಣದ ಡಾಮರು ಕಾಮಗಾರಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.