ಕಪಾಳ ಮೋಕ್ಷ ವಿನಿಮಯಿಸಿಕೊಂಡ ಕೈ ಶಾಸಕಿ, ಕಾನ್‌ಸ್ಟೆಬಲ್, Watch
Team Udayavani, Dec 29, 2017, 3:29 PM IST
ಶಿಮ್ಲಾ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ, ಹಿಮಾಚಲ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ನಿರ್ವಹಣೆ ಕುರಿತ ಪರಾಮರ್ಶನ ಸಭೆಯನ್ನು ಪ್ರವೇಶಿಸಲು ತನಗೆ ಬಿಡದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಕಾಂಗ್ರೆಸ್ ಶಾಸಕಿ ಕಪಾಳ ಮೋಕ್ಷ ಮಾಡಿರುವುದು ಮತ್ತು ಅದಕ್ಕೆ ಪ್ರತಿಯಾಗಿ ಆ ಕಾನ್‌ಸ್ಟೆಬಲ್ ಆಶಾ ಕುಮಾರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದೆ.
ಶಾಸಕಿ ಆಶಾ ಕುಮಾರಿ ಅವರು ಎಐಸಿಸಿ ಯ ಪಂಜಾಬ್ ಪ್ರಭಾರೆ ಮತ್ತು ಈಚಿನ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹುಟ್ಟೂರ ಡಾಲ್‌ಹೌಸಿ ಕ್ಷೇತ್ರದಿಂದ ಜಯ ಗಳಿಸಿದವರು.
ವಿಚಿತ್ರವೆಂದರೆ ಕಾನ್‌ಸ್ಟೆಬಲ್ ಜತೆಗಿನ ಕಪಾಳಮೋಕ್ಷ ವಿನಿಮಯದ ಘಟನೆಯ ಫಲಶ್ರುತಿ ಏನೆಂಬುದು ಮಾತ್ರ ಈ ತನಕ ಗೊತ್ತಾಗಿಲ್ಲ. ಉಭಯತರ ನಡುವೆ ಏನಾದರೂ ರಾಜಿ ನಡೆಯಿತೇ, ದೂರು ದಾಖಲಾದವೇ – ಗೊತ್ತಿಲ್ಲ.
#WATCH Shimla: Congress MLA Asha Kumari assaults woman constable, gets slapped back. She was being allegedly denied entry by Police in Rahul Gandhi's review meeting (amateur video) pic.twitter.com/puvMRnHKss
— ANI (@ANI) December 29, 2017
ಹಿಮಾಲಚ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷ ತೋರಿದ ನಿರ್ವಹಣೆಯನ್ನು ವಿಮರ್ಶಿಸುವ ಸಲುವಾಗಿ ರಾಹುಲ್ ಅವರು ಇಂದು ಶುಕ್ರವಾರ ಶಿಮ್ಲಾಕ್ಕೆ ಬಂದು ಸಭೆ ನಡೆಸಿದ್ದರು. ರಾಹುಲ್ ಪಕ್ಷದ ಶಾಸಕರು, ಅಭ್ಯರ್ಥಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರುಗಳನ್ನು ಭೇಟಿಯಾಗಿ ಚುನಾವಣೆಯಲ್ಲಿ ಪಕ್ಷದಿಂದ ಏನು ಪ್ರಮಾದವಾಯಿತು; ಎಲ್ಲಿ ಲೋಪವಾಯಿತು ಎಂಬುದನ್ನು ಚರ್ಚಿಸಿದರು.
68 ಸದಸ್ಯ ಬಲದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆಯಾದರೆ ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಮಾತ್ರವೇ ಗೆಲ್ಲುವಲ್ಲಿ ಶಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
Scientists: ಕೋಳಿ ಮೊದಲಾ, ಮೊಟ್ಟೆ ಮೊದಲಾ?: ಇಲ್ಲಿದೆ ಉತ್ತರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.