ಮುಂಬಯಿ ಅಗ್ನಿ ದುರಂತಕ್ಕೆ ವಲಸಿಗರೇ ಕಾರಣ: ಸಂಸದೆ ಹೇಮಾ ವಿವಾದ
Team Udayavani, Dec 29, 2017, 3:51 PM IST
ಮುಂಬಯಿ : ಮಹಾನಗರದ ಲೋವರ್ ಪರೇಲ್‌ನ ಕಮಲಾ ಮಿಲ್ಸ್ ಆವರಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ನಗರದ ಜನಸಂಖ್ಯೆ ಹೆಚ್ಚುತ್ತಿರುವುದು ಮತ್ತು ಭಾರೀ ಸಂಖ್ಯೆಯಲ್ಲಿ ವಲಸಿಗರು ಈ ನಗರದತ್ತ ಹರಿದು ಬರುತ್ತಿರುವುದೇ ಕಾರಣ ಎಂದು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಹಿರಿಯ ಹಿಂದಿ ಚಿತ್ರ ನಟಿ ಹೇಮಾಮಾಲಿನಿ ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಹದಿನಾಲ್ಕು ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಮುಂಬಯಿಯ ಕಮಲಾ ಮಿಲ್ಸ್ ಅಗ್ನಿ ದುರಂತಕ್ಕೆ ವಲಸಿಗರೇ ಕಾರಣ ಎಂದು ದೂರಿರುವ 65ರ ಹರೆಯದ ಮಥುರಾ ಕ್ಷೇತ್ರದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು, “ಮುಂಬಯಿ ನಗರಾಡಳಿತೆಯು ಎಲ್ಲ ವಲಸಿರಗರಿಗೆ ಇಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿದೆ; ಆದರೆ ಈ ಮಹಾನಗರದಲ್ಲಿ ಒಂದೇ ಸಮನೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಅನುಲಕ್ಷಿಸಿ ನಗರಾಡಳಿತೆಯು ವಲಸಿಗರ ಸಂಖ್ಯೆಯನ್ನು ನಿರ್ಬಂಧಿಸಬೇಕಾಗಿತ್ತು’ ಎಂದು ಹೇಳಿದ್ದಾರೆ.
“ಪ್ರತೀ ನಗರಕ್ಕೂ ಜನಸಂಖ್ಯೆಯ ವಿಚಾರದಲ್ಲಿ ಒಂದು ಮಿತಿ ಎಂಬುದು ಇರಲೇಬೇಕು. ಆ ಮಿತಿ ಮೀರಿದ ಸಂದರ್ಭದಲ್ಲಿ ವಲಸಿಗರಿಗೆ ಬೇರೆ ನಗರಕ್ಕೆ ಹೋಗುವಂತೆ ಹೇಳಬೇಕು’ ಎಂದು ಹೇಮಾ ಪ್ರತಿಕ್ರಿಯಿಸಿದರು.
ಮಹಾರಾಷ್ಟ್ರ ಬಿಜೆಪಿ ನಾಯಕಿ ಶಾಯಿನಾ ಎನ್ ಸಿ ಅವರು “ಈ ರೀತಿಯ ವಾದ ತುಂಬಾ ಸರಳೀಕೃತವಾದದ್ದು; ಆದರೆ ನಗರಾಡಳಿತೆಯು ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿ ಕಮಲಾ ಮಿಲ್ಸ್ ಆವರಣದೊಳಗಿನ ಅನಧಿಕೃತ, ಕಾನೂನು ಬಾಹಿರ ಪಬ್‌ಗ ಒಪ್ಪಿಗೆ ಕೊಟ್ಟವರನ್ನು ಈ ದುರಂತಕ್ಕೆ ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.