Dubai airportನಲ್ಲಿ ತಡೆಹಿಡಿಯಲ್ಪಟ್ಟ ಧವನ್ ಪತ್ನಿ, ಮಕ್ಕಳು
Team Udayavani, Dec 29, 2017, 4:34 PM IST
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಓಪನರ್ ಶಿಖರ್ ಧವನ್ ಅವರ ಪತ್ನಿ ಮತ್ತು ಮಕ್ಕಳನ್ನು ಕೇಪ್ ಟೌನ್ಗೆ ಹೋಗುವ ವಿಮಾನಕ್ಕೆ ಲಿಂಕ್ ಕಲ್ಪಿಸುವ ವಿಮಾನವನ್ನು ದುಬೈನಲ್ಲಿ ಎಮಿರೇಟ್ ಏರ್ ಲೈನ್ಸ್ನವರು ಏರಲು ಬಿಡದೆ ತಡೆ ಹಿಡಿದ ಘಟನೆ ವರದಿಯಾಗಿದೆ.
ಶಿಖರ್ ಧವನ್ ಅವರ ಕುಟುಂಬಕ್ಕೆ ಮಕ್ಕಳ ಬರ್ತ್ ಸರ್ಟಿಫಿಕೇಟ್ ತೋರಿಸುವಂತೆ ಎಮಿರೇಟ್ ಏರ್ ಲೈನ್ಸ್ನವರು ಹಠ ಹಿಡಿದರು. ಆ ಸರ್ಟಿಫಿಕೇಟ್ ಅವರ ಬಳಿ ಇರಲಿಲ್ಲ. ಹಾಗಾಗಿ ಕೇಪ್ ಟೌನ್ಗೆ ಹೋಗುವ ವಿಮಾನಕ್ಕೆ ಲಿಂಕ್ ಕಲ್ಪಿಸುವ ವಿಮಾನವನ್ನು ಏರಲು ಅವರಿಗೆ ಸಾಧ್ಯವಾಗಲಿಲ್ಲ.
ದಿಲ್ಲಿಯಿಂದ ಸರ್ಟಿಫಿಕೇಟ್ಗಳು ಬರುವ ತನಕವೂ ಅವರು ದುಬೈ ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ಒದಗಿತು. ಇದೀಗ ಸರ್ಟಿಫಿಕೇಟ್ ಬಂದಿರುವ ಹಿನ್ನೆಲೆಯಲ್ಲಿ ಈಗಿನ್ನು ಧವನ್ ಅವರ ಪತ್ನಿ ಏಶಾ ಮತ್ತು ಮಕ್ಕಳು ಮುಂದಿನ ವಿಮಾನವನ್ನು ಏರಲಿದ್ದಾರೆ.
ಎಮಿರೇಟ್ಸ್ ಏರ್ ಲೈನ್ಸ್ ನ ಈ ಪರಿಯ ವೃತ್ತಿಪರತೆಗೆ ತಕ್ಕುದಲ್ಲದ ನಡತೆಯನ್ನು ಧವನ್ ತಮ್ಮ ಟ್ವಿಟರ್ ಬರಹದಲ್ಲಿ ಖಂಡಿಸಿದರು.
ದಕ್ಷಿಣ ಆಫ್ರಿಕ ವಿರುದ್ಧದ ಭಾರತ ಕ್ರಿಕೆಟ್ ಸರಣಿ ಜನವರಿ 5ರಿಂದ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಅಲ್ಲಿಗೆ ಹೋಗಿರುವ ಭಾರತೀಯ ತಂಡ ನಿನ್ನೆ ಗುರುವಾರ ರಾತ್ರಿ ಕೇಪ್ ಟೌನ್ ಹೊಟೇಲ್ನಲ್ಲಿ ಉಳಿದುಕೊಂಡಿದೆ. ಅಂದ ಹಾಗೆ ನವ ವಿವಾಹಿತ, ನಾಯಕ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜತೆಗೆ ಕೇಪ್ ಟೌನ್ ಹೊಟೇಲಲ್ಲೇ ವಾಸ್ತವ್ಯವಿದ್ದಾರೆ.
ಭಾರತದ ದಕ್ಷಿಣ ಆಫ್ರಿಕ ವಿರುದ್ಧ ಮೂರು ಟೆಸ್ಟ್ ಪಂದ್ಯಗಳು, ಆರು ಏಕದಿನ ಪಂದ್ಯಗಳು ಮತ್ತು ಮೂರು ಟಿ-20 ಪಂದ್ಯಗಳನ್ನು ಒಟ್ಟು 56 ದಿನಗಳ ಪ್ರವಾಸ ಕಾಲಯದಲ್ಲಿ ಆಡಲಿದೆ. ಇದಕ್ಕೆ ಮುನ್ನ ತರಬೇತಿ ಶಿಬಿರವೊಂದು ಅಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
MUST WATCH
ಹೊಸ ಸೇರ್ಪಡೆ
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.