ವಿಶೇಷ ಕಾರ್ಯಕಾರಿ ಅಧಿಕಾರಿಯಾಗಿ ಗಣೇಶ್ ಎಂ.ಶೆಟ್ಟಿ
Team Udayavani, Dec 29, 2017, 4:34 PM IST
ಮುಂಬಯಿ: ವಿಕ್ರೋಲಿ ಪರಿಸರದಲ್ಲಿ ಸಮಾಜ ಸೇವಕರಾಗಿ ಪ್ರಸಿದ್ಧರಾಗಿರುವ ಗಣೇಶ್ ಎಂ. ಶೆಟ್ಟಿ ಅವರನ್ನು ಮಹಾರಾಷ್ಟ್ರ ಸರಕಾರವು ಸ್ಪೆಷಲ್ ಎಕ್ಸಿಕ್ಯೂಟಿವ್ ಆಫೀಸರ್ (ಎಸ್‌ಇಒ) ಆಗಿ ನೇಮಿಸಿದೆ.
2017, ಡಿ. 8 ರಿಂದ 2022 ಡಿ. 7 ರ ವರೆಗೆ ಎಸ್‌ಇಒ ಆಗಿ ಆಯ್ಕೆ ಮಾಡಲಾ ಗಿದ್ದು, ಈ ಬಗ್ಗೆ ಮುಂಬಯಿ ಜಿಲ್ಲಾಧಿಕಾರಿ ಪ್ರಮಾಣ ಪತ್ರವನ್ನು ಗಣೇಶ್ ಶೆಟ್ಟಿ ಅವರಿಗೆ ಪ್ರದಾನಿಸಿ ಶುಭ ಹಾರೈಸಿದ್ದಾರೆ. ಸಮಾಜಮುಖೀ ಕಾರ್ಯಕ್ರಮ ಗಳೊಂದಿಗೆ ತುಳು-ಕನ್ನಡಿಗರು ಸೇರಿದಂತೆ ಮರಾಠಿ ಭಾಷಿಗರೊಂದಿಗೆ ಸಂಬಂಧ ಹೊಂದಿರುವ ಶೆಟ್ಟಿ ಅವರು, ವಿಕ್ರೋಲಿ ಪರಿಸರದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷರಾಗಿರುವ ಗಣೇಶ್ ಎಂ. ಶೆಟ್ಟಿ ಅವರು ವಿಕ್ರೋಲಿ ಕನ್ನಡ ಸಂಘದ ಉಪಸಮಿತಿಗಳ ಪದಾಧಿಕಾರಿಯಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಚಾರ್ಲಿ ನ್ಪೋರ್ಟ್ಸ್ ಕ್ಲಬ್ ವಿಕ್ರೋಲಿ ಇದರ ಅಧ್ಯಕ್ಷರಾಗಿ, ಶ್ರೀ ಅಯ್ಯಪ್ಪ ಸೇವಾ ಮಂಡಲ ವಿಕ್ರೋಲಿ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಂದಲ್ಲ ಒಂದು ರೀತಿಯ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಇವರು ವಿಕ್ರೋಲಿಯ ತುಳು-ಕನ್ನಡಿಗರ ಆಪತ್ಭಾಂಧವರೂ ಹೌಂದು. ವಿಕ್ರೋಲಿ ಪೂರ್ವದ ಠಾಕೂರ್ ನಗರ-ಕನ್ನಮ್‌ವಾರ್ ನಗರವನ್ನು ಸಂಪರ್ಕಿಸುವ ಹೈವೇ ಕೆಳಗಿನ ಅಂಡರ್‌ಗ್ರೌಂಡ್ ಕಾಲು ರಸ್ತೆ ನಿರ್ಮಾಣಕ್ಕಾಗಿ, ವಿಕ್ರೋಲಿ ಪೂರ್ವ-ಪಶ್ಚಿಮ ಸಂಪರ್ಕಕ್ಕಾಗಿ ಫ್ಲೆ$ç ಓವರ್ ನಿರ್ಮಾಣ ಇನ್ನಿತರ ಯೋಜನೆಗಳಿಗೆ ಆಂದೋಲನ ವನ್ನೇ ಮಾಡಿ ಯಶಸ್ಸನ್ನು ಕಂಡಿದ್ದಾರೆ.
ಪ್ರಸ್ತುತ ಕಾಂಜೂರ್‌ಮಾರ್ಗ ಡಪ್ಪಿಂಗ್‌ಗ್ರೌಂಡ್ ಎತ್ತಂಗಡಿ ವಿಷಯದ ಬಗ್ಗೆ ಬೃಹತ್ ಆಂಧೋಲನವನ್ನು ಕೈಗೊಂಡು ಹಗಲಿರುಗಳು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ವಿಕ್ರೋಲಿ ಪೂರ್ವ ರೈಲ್ವೇ ನಿಲ್ದಾಣ ಸಮೀಪದ ನೀರು ತುಂಬಿದ ಹುಲ್ಲಿನ ಮೈದಾನದಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದರ ವಿರುದ್ಧ ಹೋರಾಡಿ ಯಶಸ್ಸನ್ನು ಪಡೆದಿದ್ದರು. ಯಾವುದೇ ಪ್ರಚಾರವನ್ನು ಬಯಸದ ಗಣೇಶ್ ಶೆಟ್ಟಿ ಅವರು ಕಷ್ಟ ಎಂದು ಬಂದವರಿಗೆ ತನ್ನಿಂದಾಗುವ ಸಹಾಯವನ್ನು ಮಾಡುವವರು.
ಇತ್ತೀಚೆಗೆ ಎಲ್ಫಿನ್‌ಸ್ಟನ್‌ರೋಡ್ ದುರಂತದಲ್ಲಿ ಮೃತರಾದ ಇಬ್ಬರು ಕನ್ನಡಿಗ ಮಹಿಳೆಯರ ಚಿನ್ನಾಭರಣವನ್ನು ದೋಚುತ್ತಿದ್ದ ಚಿತ್ರಗಳನ್ನು ಸಂಗ್ರಹಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ, ರೈಲ್ವೇ ಸಚಿವರು, ಮುಂಬಯಿ ಪೊಲೀಸ್ ಕಮಿಷನರ್, ಸಂಬಂಧಿತ ಅಧಿಕಾರಿಗಳಿಗೆ ಹಾಗೂ ವಿಶೇಷವೆಂದರೆ ಪ್ರಧಾನ ಮಂತ್ರಿಯ ಕಚೇರಿಯವರೆಗೆ ತಲುಪಿಸಿ ಎಲ್ಲರ ಗಮನ ಸೆಳೆದು, 24 ಗಂಟೆಗಳೊಳಗೆ ಚಿನ್ನಾಭರಣವನ್ನು ಮೃತರ ಸಂಬಂಧಿಕರಿಗೆ ತಲುಪಿಸುವಲ್ಲಿ ಸಹಕರಿಸಿದ್ದರು. ಗಣೇಶ್ ಶೆಟ್ಟಿ ಅವರ ಸಮಾಜ ಸೇವೆಯನ್ನು ಗಮನಿಸಿ ಮಹಾರಾಷ್ಟ್ರ ಸರಕಾರವು ಅವರನ್ನು ವಿಶೇಷ ಕಾರ್ಯಕಾರಿ ಅಧಿಕಾರಿಯನ್ನಾಗಿ ನೇಮಿಸಿರುವುದು ಹೆಮ್ಮೆಯ ವಿಷಯವಾಗಿದೆ. ಅವರನ್ನು ವಿಕ್ರೋಲಿ ಬಂಟ್ಸ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.