ಮುಂಬಯಿ ಮಾಜಿ ಕ್ರಿಕೆಟಿಗ ಅನ್ರೋಲಿವಾಲಾ ನಿಧನ
Team Udayavani, Dec 30, 2017, 6:55 AM IST
ಮುಂಬಯಿ: ಮುಂಬಯಿಯ ಮಾಜಿ ಕ್ರಿಕೆಟಿಗ ಹೋಶಾಂಗ್ ದಾದಿಬಾ (ಹೋಶಿ) ಅನ್ರೋಲಿವಾಲಾ ಶುಕ್ರವಾರ ನಿಧನರಾದರು. ಅವರಿಗೆ 86 ವರ್ಷವಾಗಿತ್ತು.
ಅನ್ರೋಲಿವಾಲಾ 1956-1964ರ ಅವಧಿಯಲ್ಲಿ ಮುಂಬಯಿ ಪರ 44 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಇದರಲ್ಲಿ 38 ರಣಜಿ ಪಂದ್ಯಗಳಾಗಿದ್ದವು. ಬಲಗೈ ಬ್ಯಾಟ್ಸ್‌ಮನ್ ಹಾಗೂ ಲೆಗ್ ಸ್ಪಿನ್ನರ್ ಆಗಿದ್ದ ಅನ್ರೋಲಿವಾಲಾ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 1,782 ರನ್ ಹಾಗೂ 14 ವಿಕೆಟ್ ಸಂಪಾದಿಸಿದ್ದರು. ಇದರಲ್ಲಿ 1,410 ರನ್ ರಣಜಿಯಲ್ಲಿ ಬಂದಿತ್ತು.
1958-59ರ ರಣಜಿ ಫೈನಲ್ ಅನ್ರೋಲಿವಾಲಾ ಪಾಲಿಗೆ ಸ್ಮರಣೀಯ. ಅಂದಿನ ಬಂಗಾಲ ವಿರುದ್ಧದ ಪಂದ್ಯದಲ್ಲಿ ಅವರು 139 ರನ್ ಬಾರಿಸಿದ್ದರು. ಮುಂಬಯಿ ಪರ 2 ಇರಾನಿ ಟ್ರೋಫಿ ಪಂದ್ಯಗಳಲ್ಲೂ “ಹೋಶಿ’ ಆಡಿದ್ದರು.
“ಹೋಶಿ ಓರ್ವ ಪರಿಪೂರ್ಣ ಕ್ರಿಕೆಟಿಗ. ಆವರು ಬೇರೆ ಯಾವುದೇ ರಾಜ್ಯದ ಪರ ಆಡಿದ್ದರೂ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಂಪಾದಿಸುತ್ತಿದ್ದರು’ ಎಂದು ಅವರ ನಾಯಕರಾಗಿದ್ದ ಮಾಧವ ಅಪ್ಟೆ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Karkala: ಸೆಲ್ಫಿ ಕಾರ್ನರ್ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.