ದ.ಕ್ಯಾಲಿಫೋರ್ನಿಯದಲ್ಲಿ ಶೂಟೌಟ್: 2 ಸಾವು; ಹಲವರಿಗೆ ಗಾಯ
Team Udayavani, Dec 30, 2017, 11:27 AM IST
ಲಾಂಗ್ ಬೀಚ್, ಅಮೆರಿಕ: ದಕ್ಷಿಣ ಕ್ಯಾಲಿಫೋರ್ನಿಯದ ಔದ್ಯಮಿಕ ತಾಣವೊಂದರಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು ಇತರ ಹಲವರು ಗುಂಡೇಟಿನಿಂದಾಗಿ ಗಾಯಗೊಂಡಿದ್ದಾರೆಂದು ಲಾಂಗ್ ಬೀಚ್ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಶನಿವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2.25ರ ಹೊತ್ತಿಗೆ ನಡೆಯಿತೆಂದು ತಿಳಿಸಿರುವ ಪೊಲೀಸರು ಸದ್ಯಕ್ಕೆ ಯಾವುದೇ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ.
ಶೂಟರ್ ಹಾರಿಸಿದ ಗುಂಡಿಗೆ ಎಷ್ಟು ಮಂದಿ ಗಾಯಗೊಂಡರು; ಎಷ್ಟು ಮಂದಿಯ ಸ್ಥಿತಿ ಹೇಗಿದೆ ಎಂಬಿತ್ಯಾದಿ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದರು.
ಗುರುತು ಹಾಕಲ್ಪಡದ ಕಟ್ಟಡದಿಂದ ಜನರು ಹೊರಗೋಡಿ ಬರುತ್ತಿರುವ ಜನರು ಒಳಗೆ ಶೂಟಿಂಗ್ ನಡೆಯುತ್ತಿರುವುದಾಗಿ ಬೊಬ್ಬಿಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.
ಎರಡು ಮಹಡಿಗಳ ಈ ಕಟ್ಟಡದಲ್ಲಿ ಹಲವು ಕಾನೂನು ಸೇವಾ ಕಚೇರಿಗಳಿವೆ; ಆದರೆ ಇಲ್ಲಿ ಯಾವ ರೀತಿಯ ವ್ಯಾಪಾರ-ವಹಿವಾಟು ನಡೆಯುತ್ತಿದೆ ಎಂಬುದನ್ನು ಪೊಲೀಸರು ತಿಳಿಸಿಲ್ಲ.
ಡಜನ್‌ಗಟ್ಟಲೆ ಪೊಲೀಸ್ ಅಧಿಕಾರಿಗಳು, SWAT ತಂಡದ ಸದಸ್ಯರೊಡಗೂಡಿ ಇಡಿಯ ಕಟ್ಟಡವನ್ನು ಸುತ್ತುವರಿದಿದ್ದಾರೆ. ಆದರೆ ಶೂಟಿಂಗ್ ಘಟನೆ ಈಗ ಮುಗಿದು ಹೋಗಿದೆ ಎಂದವರು ತಿಳಿಸಿದ್ದಾರೆ.
ಲಾಸ್ ಏಂಜಲ್ಸ್‌ನಿಂದ ಸುಮಾರು 20 ಮೈಲು ದಕ್ಷಿಣಕ್ಕಿರುವ ಲಾಂಗ್ ಬೀಚ್ ಪಟ್ಟಣವು ಸುಮಾರು 4,60,000 ಜನಸಂಖ್ಯೆಯನ್ನು ಹೊಂದಿದೆ. ಇದು ಲಾಸ್ ಏಂಜಲ್ಸ್ ಕೌಂಟಿಯ ದಕ್ಷಿಣ ತುದಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.