ಸ್ಟಿರಿಯೊಟ್ಯಾಕ್ಟಿಕ್‌ ರೇಡಿಯೊ ಶಸ್ತ್ರಚಿಕಿತ್ಸೆ


Team Udayavani, Dec 31, 2017, 6:00 AM IST

srs-imaging.jpg

ಹಿಂದಿನ ವಾರದಿಂದ - ಹೀಗಾಗಿ, ಚಿಕಿತ್ಸೆಯನ್ನು ವಿಭಾಗಿಸಿ ನೀಡುವುದರಿಂದ ಅಧಿಕ ಡೋಸೇಜ್‌ನ ವಿಕಿರಣ ಚಿಕಿತ್ಸೆಯನ್ನು ಸ್ವೀಕಾರಾರ್ಹ ಸುರಕ್ಷೆಯ ಮಟ್ಟವನ್ನು ಕಾಯ್ದುಕೊಂಡೇ ಒದಗಿಸಲು ಅನುವು ಮಾಡಿಕೊಡುತ್ತದೆ. ಈ ಚಿಕಿತ್ಸಾ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ವಿಭಾಗಿತ ಸ್ಟೀರಿಯೊಟ್ಯಾಕ್ಟಿಕ್‌ ರೇಡಿಯೊಥೆರಪಿ (ಫ್ರಾಕ್ಷನ್‌ಡ್‌ ಸ್ಟೀರಿಯೋಟ್ಯಾಕ್ಟಿಕ್‌ ರೇಡಿಯೊಥೆರಪಿ-ಎಸ್‌ಆರ್‌ಟಿ) ಎಂಬುದಾಗಿ ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ಗುರಿಕೇಂದ್ರಿತ ವಿಕಿರಣ ಚಿಕಿತ್ಸೆಯನ್ನು ಎರಡರಿಂದ ಐದು ಚಿಕಿತ್ಸಾವಧಿಗಳಲ್ಲಿ ನೀಡುವುದನ್ನು ಹೇಳುತ್ತದೆ. 

ಎಸ್‌ಆರ್‌ಎಸ್‌ ಮತ್ತು ಎಸ್‌ಆರ್‌ಟಿ ಇವೆರಡೂ ದೇಹಕ್ಕೆ ಗಾಯವನ್ನುಂಟು ಮಾಡಿ ನಡೆಸುವ ಶಸ್ತ್ರಚಿಕಿತ್ಸೆಯ ಪ್ರಮುಖ ಪರ್ಯಾಯ ವಿಧಾನಗಳು. ವಿಶೇಷವಾಗಿ ಇವು ಶಸ್ತ್ರಚಿಕಿತ್ಸೆಗೆ ಒಳಗಾಗಲಾರದ ಮತ್ತು ಕೆಳಕಂಡ ಗಡ್ಡೆಗಳು ಮತ್ತು ಅಸಹಜ ಬೆಳವಣಿಗೆಗಳ ಚಿಕಿತ್ಸೆಯಲ್ಲಿ ಅನುಕೂಲಕರ:
– ತಲುಪಲು ಕಷ್ಟಕರವಾದ
– ಜೀವನಾಧಾರ ಅಂಗಾಂಗಗಳು ಮತ್ತು ದೈಹಿಕ 
ಪ್ರದೇಶಗಳಿಗೆ ಅತಿನಿಕಟವಾಗಿರುವಂಥವು
– ದೇಹದೊಳಗೆ ಚಲನೆಗೆ ಗುರಿಯಾಗುವಂಥವು

ಎಸ್‌ಆರ್‌ಎಸ್‌ನ್ನು ಈ ಕೆಳಗಿನ ಗಡ್ಡೆ ಮತ್ತು ಅಸಹಜ ಬೆಳವಣಿಗೆಗಳಿಗೆ ಚಿಕಿತ್ಸೆ  ನೀಡಲು ಅನುಸರಿಸುತ್ತಾರೆ:
– ಕೆಳಕಂಡವುಗಳನ್ನು ಒಳಗೊಂಡು ಅನೇಕ ವಿಧದ ಮಿದುಳಿನ ಗಡ್ಡೆಗಳು
– ಸೌಮ್ಯ ಮತ್ತು ಉಗ್ರವಾದ ಗಡ್ಡೆಗಳು 
– ಪ್ರಾಥಮಿಕ ಮತ್ತು ಸ್ಥಾನಾಂತರಗೊಳ್ಳುವ ಗಡ್ಡೆಗಳು
– ಏಕ ಮತ್ತು ಬಹು ಗಡ್ಡೆಗಳು
– ಶಸ್ತ್ರಚಿಕಿತ್ಸೆಯ ಬಳಿಕ ಉಳಿದುಕೊಂಡ ಗಡ್ಡೆಯ ಜೀವಕೋಶಗಳು
– ತಲೆಬುರುಡೆಯೊಳಗಿನ, ಮಿದುಳಿನ ಸುತ್ತಲಿನ ಮತ್ತು 
  ತಲೆಬುರುಡೆಯ ತಳಭಾಗದ ಗಡ್ಡೆಗಳು
– ಮಿದುಳಿನಲ್ಲಿ ರಕ್ತದ ಸಹಜ ಹರಿಯುವಿಕೆಗೆ ಅಡಚಣೆ ಉಂಟು ಮಾಡುವ ಮತ್ತು ಕೆಲವೊಮ್ಮೆ ರಕ್ತಸ್ರಾವಕ್ಕೆ ಕಾರಣವಾಗುವ ಸಿಕ್ಕುಗಟ್ಟಿದ ರಕ್ತನಾಳಗಳು – ಅಪಧಮನಿಗೆ ಸಂಬಂಧಿಸಿದ ಅಸಹಜತೆಗಳು ಅಥವಾ ಆರ್ಟರಿಯೊವೆನಸ್‌ ಮಾಲ್‌ಫ‌ಂಕ್ಷನ್ಸ್‌ (ಎವಿಎಂ)
– ಟ್ರೈಗೆಮಿನಲ್‌ ನ್ಯೂರಾಲ್ಜಿಯಾ (ಮುಖದಲ್ಲಿನ ನರಕ್ಕೆ ಸಂಬಂಧಿಸಿದ ತೊಂದರೆ), ನಡುಕದಂತಹ ಇತರ ನರಸಂಬಂಧಿ ಸಮಸ್ಯೆಗಳು. 

ಎಸ್‌ಬಿಆರ್‌ಟಿಯನ್ನು ಪ್ರಸ್ತುತ ದೇಹದಲ್ಲಿ ಉಂಟಾಗುವ ಮತ್ತು ಸಾಮಾನ್ಯ ರೋಗಸ್ಥಾನಗಳಲ್ಲಿ ಉಂಟಾಗುವ ಸಾಮಾನ್ಯ ಸೌಮ್ಯ ಹಾಗೂ ಉಗ್ರ ಸ್ವರೂಪದ ಸಣ್ಣ ಗಾತ್ರದಿಂದ ತೊಡಗಿ ಮಧ್ಯಮ ಗಾತ್ರದ ಗಡ್ಡೆಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗುತ್ತಿದೆ ಮತ್ತು/ ಅಥವಾ ಅಂತಹ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಎಸ್‌ಬಿಆರ್‌ಟಿಯನ್ನು ಉಪಯೋಗಿಸುವ ದೇಹಭಾಗಗಳೆಂದರೆ
– ಶ್ವಾಸಕೋಶ
– ಪಿತ್ತಜನಕಾಂಗ
– ಹೊಟ್ಟೆ – ಜಠರ
– ಬೆನ್ನುಹುರಿ
– ಪ್ರಾಸ್ಟ್ರೇಟ್‌
– ತಲೆ ಮತ್ತು ಕುತ್ತಿಗೆ

ಎಸ್‌ಆರ್‌ಎಸ್‌ ಇತರ ಸ್ವರೂಪದ ವಿಕಿರಣ ಚಿಕಿತ್ಸೆಗಳಂತೆಯೇ ಕೆಲಸ ಮಾಡುತ್ತದೆ. ಅದು ತಾನೇ ಗಡ್ಡೆಯನ್ನು ತೆಗೆದುಹಾಕುವುದಿಲ್ಲ ಬದಲಾಗಿ, ಗಡ್ಡೆಯ ಜೀವಕೋಶಗಳ ಡಿಎನ್‌ಎಗೆ ಹಾನಿ ಉಂಟು ಮಾಡುತ್ತದೆ. ಇದರ ಪರಿಣಾಮವಾಗಿ, ಈ ಜೀವಕೋಶಗಳು ಪುನರುತ್ಪಾದನೆಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಚಿಕಿತ್ಸೆಯ ಬಳಿಕ ಸಾಮಾನ್ಯವಾಗಿ ಸೌಮ್ಯ ಸ್ವರೂಪದ ಗಡ್ಡೆಗಳು 18 ತಿಂಗಳುಗಳಿಂದ ಎರಡು ವರ್ಷಗಳ ಅವಧಿಯಲ್ಲಿ ಮುರುಟಿ ಹೋಗುತ್ತವೆ. ಉಗ್ರ ಸ್ವರೂಪದ ಮತ್ತು ಮೆಟಾಸ್ಟಾಟಿಕ್‌ ಗಡ್ಡೆಗಳು ಇನ್ನಷ್ಟು ಕ್ಷಿಪ್ರವಾಗಿ, ಒಂದೆರಡು ತಿಂಗಳುಗಳ ಅವಧಿಯಲ್ಲಿ ಮುರುಟಿಹೋಗುತ್ತವೆ. ಎಸ್‌ಆರ್‌ಎಸ್‌ನಿಂದ ಚಿಕಿತ್ಸೆ ನೀಡಿದಾಗ, ಚಿಕಿತ್ಸೆಯ ಬಳಿಕ ಆರ್ಟರಿಯೊವೆನಸ್‌ ಮಾಲ್‌ಫಾರ್ಮೇಶನ್‌ಗಳು (ಅಪಧಮನಿಯಲ್ಲಿ ಅಸಹಜ ಬೆಳವಣಿಗೆಗಳು-ಎವಿಎಂ) ದಪ್ಪಗಾಗಲು ಆರಂಭಿಸಬಹುದು ಮತ್ತು ಕೆಲವು ವರ್ಷಗಳ ಅವಧಿಯಲ್ಲಿ ನಿಧಾನವಾಗಿ ಸಂಪೂರ್ಣ ಮುಚ್ಚಿಕೊಳ್ಳಬಹುದು. ಅನೇಕ ಗಡ್ಡೆಗಳು ಯಾವುದೇ ಪ್ರತಿಕ್ರಿಯೆ ಇಲ್ಲದೆ ಸ್ಥಿರವಾಗಿ ಉಳಿಯಬಹುದು. ಅಕೌಸ್ಟಿಕ್‌ ನ್ಯುರೊಮಾದಂತಹ ಕೆಲವು ಗಡ್ಡೆಗಳಲ್ಲಿ ಎಸ್‌ಆರ್‌ಎಸ್‌ ಚಿಕಿತ್ಸೆಯ ಬಳಿಕ ತಾತ್ಕಾಲಿಕವಾದ ಗಾತ್ರ ಹೆಚ್ಚಳ ಕಂಡುಬರಬಹುದು. ಇದು ಎಸ್‌ಆರ್‌ಎಸ್‌ ಚಿಕಿತ್ಸೆಗೆ ಗಡ್ಡೆಯ ಜೀವಕೋಶಗಳು ತೋರುವ ಉರಿಯೂತ ಪ್ರತಿಕ್ರಿಯೆಯಿಂದ ಉಂಟಾಗುವುದಾಗಿದ್ದು, ಕ್ರಮೇಣ ಒಂದೋ ಸಹಜ ಸ್ಥಿತಿಗೆ ಬರುತ್ತದೆ ಅಥವಾ ಸುಳ್ಳು ಪ್ರಗತಿ (ಸುಡೊ ಪ್ರೊಗ್ರೆಶನ್‌) ಎಂದು ಕರೆಯಲ್ಪಡುವ ಮರು ಬೆಳವಣಿಗೆಯನ್ನು ಕಾಣಬಹುದು. 

ಲೀನಿಯರ್‌  ಆ್ಯಕ್ಸಲರೇಟರ್‌
(ಎಲ್‌ಐಎನ್‌ಎಸಿ-ಲಿನಾಕ್‌) 

ಎಸ್‌ಆರ್‌ಎಸ್‌ ಅನ್ನು ಸಾಮಾನ್ಯವಾಗಿ ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಹೆಡ್‌ ಫ್ರೆàಮ್‌ ಪ್ಲೇಸ್‌ಮೆಂಟ್‌, ಇಮೇಜಿಂಗ್‌, ಕಂಪ್ಯೂಟರೀಕೃತ ಡೋಸ್‌ ಪ್ಲಾನಿಂಗ್‌ ಮತ್ತು ರೇಡಿಯೇಶನ್‌ ನೀಡಿಕೆ – ಇವೇ ಆ ನಾಲ್ಕು ಹಂತಗಳು. ಲಿನಾಕ್‌, ಚಿಕಿತ್ಸಾ ಪ್ರಕ್ರಿಯೆಯ ಅವಧಿಯಲ್ಲಿ ನಿಶ್ಚಲವಾಗಿ ಇರುತ್ತದೆ, ಲಿನಾಕ್‌ ಯಂತ್ರದ ಒಂದು ಭಾಗ (ಗ್ಯಾಂಟ್ರಿ ಎಂದು ಕರೆಯುತ್ತಾರೆ) ರೋಗಿಯ ಸುತ್ತ ತಿರುಗುತ್ತಾ ವಿವಿಧ ಕೋನಗಳಿಂದ ವಿಕಿರಣದ ದಂಡಗಳನ್ನು ಹಾಯಿಸುತ್ತದೆ. ಲಿನಾಕ್‌ ಆಧರಿತ ಎಸ್‌ಆರ್‌ಎಸ್‌ ಚಿಕಿತ್ಸೆಗಳಲ್ಲಿ ಫ್ರೆàಮ್‌ ಪ್ಲೇಸ್‌ಮೆಂಟ್‌ಗೆ ಮುನ್ನ ಎಂಆರ್‌ಐ ಚಿತ್ರವನ್ನು ಪಡೆಯುವುದು ಪೂರ್ವತಯಾರಿ ಪ್ರಕ್ರಿಯೆಯ ಒಂದು ರೂಢಿಗತ ಭಾಗವಾಗಿದೆ. ಚಿಕಿತ್ಸಾ ಸ್ಥಳದಲ್ಲಿ ಇರಿಸಿದ ಫ್ರೆàಮ್‌ನ ಸಿಟಿ ಸ್ಕ್ಯಾನ್‌ ಚಿತ್ರಿಕೆಯನ್ನು ಕೂಡ ಪಡೆಯಲಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಫ್ರೆàಮ್‌ಲೆಸ್‌ ಎಸ್‌ಆರ್‌ಎಸ್‌ ಚಿಕಿತ್ಸೆಯೂ ಲಭ್ಯವಿದೆ. 
 
ಎಸ್‌ಬಿಆರ್‌ಟಿ
ಎಸ್‌ಬಿಆರ್‌ಟಿಯು ಸಾಮಾನ್ಯವಾಗಿ ಒಂದರಿಂದ ಎರಡು ವಾರಗಳ ಅವಧಿಯಲ್ಲಿ ನೀಡಲ್ಪಡುವ ಒಂದರಿಂದ ಐದು ಚಿಕಿತ್ಸಾ ಅವಧಿಗಳನ್ನು ಹೊಂದಿರುತ್ತದೆ. 

ಸಿಮ್ಯುಲೇಶನ್‌ ಎಂದು ಕರೆಯಲ್ಪಡುವ, ಲೀನಿಯರ್‌ ಆ್ಯಕ್ಸಲರೇಟರ್‌ನಿಂದ ಹಾಯುವ ವಿಕಿರಣ ದಂಡಗಳಿಗೆ ರೋಗಿಯ ದೇಹವನ್ನು ಸರಿಹೊಂದಿಸುವ ವಿಧಾನವನ್ನು ರೇಡಿಯೇಶನ್‌ ಓಂಕಾಲಜಿಸ್ಟ್‌ ಅವರು ನಿರ್ಧರಿಸುತ್ತಾರೆ. ಸಿಮ್ಯುಲೇಶನ್‌ ಮತ್ತು ಚಿಕಿತ್ಸೆಯ ಅವಧಿಯಲ್ಲಿ ರೋಗಿ ನಿಶ್ಚಲವಾಗಿ ಇರಿಸುವುದಕ್ಕಾಗಿ, ರೋಗಿಯನ್ನು ನಿಖರವಾಗಿ ಸರಿಹೊಂದಿಸುವುದಕ್ಕಾಗಿ ನಿಶ್ಚಲೀಕರಣ ಸಲಕರಣೆಗಳನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ನಿಶ್ಚಲೀಕರಣ ಸಲಕರಣೆಯನ್ನು ರೂಪಿಸಿದ ಬಳಿಕ ಚಿಕಿತ್ಸೆಗೆ ಒಳಗಾಗಲಿರುವ ಭಾಗದ ಸಿಟಿ ಸ್ಕ್ಯಾನ್‌ ನಡೆಸಲಾಗುತ್ತದೆ. ರೇಡಿಯೇಶನ್‌ ಓಂಕಾಲಜಿಸ್ಟ್‌ “4ಡಿಸಿಟಿ’ ಎಂಬ ಪ್ರಕ್ರಿಯೆಯನ್ನೂ ನಡೆಸಬಹುದಾಗಿದ್ದು, ಇದರ ಮೂಲಕ ಸಿಟಿ ಸ್ಕ್ಯಾನ್‌  ರೋಗಿ ಉಸಿರಾಡುವಾಗ ಗಡ್ಡೆ ಹೇಗೆ ಹಿಂದೆ ಮುಂದೆ ಚಲಿಸುತ್ತದೆ ಎಂಬ ಮಾಹಿತಿಯನ್ನೂ ಒದಗಿಸುತ್ತದೆ. ಶ್ವಾಸಕೋಶಗಳು ಅಥವಾ ಪಿತ್ತಕೋಶದ ಗಡ್ಡೆಗಳಿಗೆ ಈ ಪ್ರಕ್ರಿಯೆ ನಡೆಸುವುದು ಸಾಮಾನ್ಯ.

ಚಿಕಿತ್ಸಾ ಪ್ರಕ್ರಿಯೆಯ ತೃತೀಯ ಭಾಗ ಯೋಜನೆ ಅಥವಾ ಪ್ಲಾನಿಂಗ್‌. ಇಲ್ಲಿ ರೇಡಿಯೇಶನ್‌ ಓಂಕಾಲಜಿಸ್ಟ್‌ ಅವರು ರೇಡಿಯೇಶನ್‌ ಡೋಸಿಮೆಟ್ರಿಸ್ಟ್‌ ತಂತ್ರಜ್ಞರು ಮತ್ತು ಮೆಡಿಕಲ್‌ ಫಿಸಿಸಿಸ್ಟ್‌ ಜತೆಗೆ ಸಮಾಲೋಚಿಸಿ ಗಡ್ಡೆಗೆ ಅತ್ಯಂತ ಸಮರ್ಪಕವಾಗಿ ಹೊಂದುವ ವಿಕಿರಣ ದಂಡವನ್ನು ಯೋಜನೆಗೊಳಿಸುತ್ತಾರೆ. ಅವರು ಎಂಆರ್‌ಐ ಅಥವಾ ಪಿಇಟಿ/ ಸಿಟಿಯಂತಹ ಇತರ ಇಮೇಜಿಂಗ್‌ ತಂತ್ರಜ್ಞಾನಗಳ ನೆರವನ್ನೂ ಪಡೆಯಬಹುದು. ಸಂದರ್ಭಕ್ಕೆ ಅತ್ಯಂತ ಉತ್ಕೃಷ್ಟವಾಗಿ ಹೊಂದುವ ವಿಕಿರಣ ದಂಡದ ಸಂಯೋಜನೆ ಯಾವುದು ಎಂಬುದನ್ನು ನಿರ್ಧರಿಸಲು ವೈದ್ಯರ ತಂಡವು ವಿಶೇಷ ಸಾಫ್ಟ್ವೇರ್‌ ಉಪಯೋಗಿಸಿ, ನೂರಾರು ವಿವಿಧ ವಿಕಿರಣ ದಂಡ ಸಂಯೋಜನೆಗಳನ್ನು ಪರಿಶೀಲಿಸುತ್ತದೆ. 
ಎಸ್‌ಬಿಆರ್‌ಟಿಯಿಂದ ರೇಡಿಯೇಶನ್‌ ಹಾಯಿಸುವಿಕೆ ಲೀನಿಯರ್‌ ಆ್ಯಕ್ಸಲರೇಟರ್‌ ಮೂಲಕ ನಡೆಯುತ್ತದೆ.

ಸಾಮಾನ್ಯವಾಗಿ ಆಹಾರ ಸೇವನೆ, ಪಾನೀಯ ಸೇವನೆಯ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಚಿಕಿತ್ಸೆಗೆ ಮುನ್ನ ಕೆಲವು ರೋಗಿಗಳಿಗೆ ಉರಿಯೂತ ನಿರೋಧಕ, ವಾಂತಿ ನಿರೋಧಕ ಅಥವಾ ಆತಂಕ ನಿವಾರಕ ಔಷಧಿಗಳನ್ನು ನೀಡಬೇಕಾಗಬಹುದು. ರೋಗಿಯನ್ನು ನಿಶ್ಚಲೀಕರಣ ಸಲಕರಣೆಯ ಮೇಲೆ ಮಲಗಿಸಲಾಗುತ್ತದೆ. ರೇಡಿಯೇಶನ್‌ ಚಿಕಿತ್ಸೆ ಆರಂಭಕ್ಕೆ ಮುನ್ನ ಗಡ್ಡೆಗೆ ರೇಡಿಯೇಶನ್‌ ದಂಡವನ್ನು ಸರಿಹೊಂದಿಸಲು ಎಕ್ಸ್‌ರೇ ಅಥವಾ ಸಿಟಿ ಸ್ಕ್ಯಾನ್‌ (ಲಿನಾಕ್‌ ತಂತ್ರಜ್ಞಾನಕ್ಕೆ ನಿರ್ದಿಷ್ಟವಾದ ಇಮೇಜ್‌ ಗೈಡೆನ್ಸ್‌ ಆಧರಿಸಿ) ನಡೆಸಲಾಗುತ್ತದೆ. ಈ ಎಕ್ಸ್‌ರೇಗಳನ್ನು ಆಧರಿಸಿ ರೇಡಿಯೇಶನ್‌ ಓಂಕಾಲಜಿಸ್ಟ್‌ ನೀಡುವ ಮಾರ್ಗದರ್ಶನದ ಆಧಾರದಲ್ಲಿ ರೇಡಿಯೇಶನ್‌ ಚಿಕಿತ್ಸಕರು ರೋಗಿಯನ್ನು ಸ್ಥಿತಗೊಳಿಸುತ್ತಾರೆ. ಆ ಬಳಿಕ ರೇಡಿಯೇಶನ್‌ ಚಿಕಿತ್ಸಕರು ಚಿಕಿತ್ಸೆಯನ್ನು ನಡೆಸುತ್ತಾರೆ. ಕೆಲವೊಮ್ಮೆ ಚಿಕಿತ್ಸೆ ನಡೆಯುತ್ತಿರುವಾಗಲೇ ಎಕ್ಸ್‌ರೇ ಅಥವಾ ಸಿಟಿ ಸ್ಕ್ಯಾನನ್ನು ನಡೆಸಿ ಗಡ್ಡೆಯ ಸ್ಥಾನದ ಮೇಲೆ ನಿಗಾ ವಹಿಸಲಾಗುತ್ತದೆ. ಚಿಕಿತ್ಸೆಯು ಒಂದು ತಾಸು ಅಥವಾ ಹೆಚ್ಚು ಅವಧಿಯನ್ನು ತೆಗೆದುಕೊಳ್ಳಬಹುದಾಗಿದೆ. 
ಇಂತಹ ವಿಧದ ಚಿಕಿತ್ಸೆಗಳು ನಮ್ಮ ದೇಶದಲ್ಲಿ ಅತ್ಯಾಧುನಿಕವಾದ ಮತ್ತು ವಿಶೇಷಜ್ಞವಾಗಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.