ಗದ್ದಲದಲ್ಲೇ ಮುಗಿದ ಮನಪಾ ಸಾಮಾನ್ಯ ಸಭೆ


Team Udayavani, Dec 31, 2017, 9:25 AM IST

31-Dec-1.jpg

ಲಾಲ್‌ಬಾಗ್‌ : ಎಡಿಬಿ ಯೋಜನೆಯ ಮೊದಲ ಹಂತದ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ, ಸುರತ್ಕಲ್‌ ವ್ಯಾಪ್ತಿಯ ರಸ್ತೆ ರಿಪೇರಿ, ಒಳಚರಂಡಿ ಕಾಮಗಾರಿ ಅವ್ಯವಸ್ಥೆ ವಿಚಾರಗಳ ಕುರಿತು ಗದ್ದಲದಲ್ಲಿಯೇ ಶನಿವಾರ ನಡೆದ ಮಂಗಳೂರು ಮಹಾ ನಗರ ಪಾಲಿಕೆ ಸಾಮಾನ್ಯ ಸಭೆ ಮುಗಿದು ಹೋಯಿತು. ಯಾವುದೇ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿಲ್ಲ.

ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಾಲಿಕೆ ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು ವಿಷಯ ಪ್ರಸ್ತಾಪಿಸಿ, ಸುರತ್ಕಲ್‌ ವಿಭಾಗದಲ್ಲಿ ರಸ್ತೆ ರಿಪೇರಿ, ಕುಡಿಯುವ ನೀರಿಗೆ ಸಂಬಂಧಿಸಿದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಪಾಲಿಕೆ ಸಭೆಯಲ್ಲಿ ಗಮನ ಸೆಳೆಯಲಾಗಿದ್ದರೂ, ಪ್ರತಿಕ್ರಿಯೆ ಇಲ್ಲದಾಗಿದೆ. ಎಡಿಬಿ ಒಂದನೇ ಹಂತದ ಕುಡ್ಸೆಂಪು ಯೋಜನೆಯಲ್ಲಿ ನಿರ್ಮಾಣವಾದ 3 ವೆಟ್‌ವೆಲ್‌ಗ‌ಳು ಪ್ರಸ್ತುತ ಕಾರ್ಯಾಚರಿಸುತ್ತಿಲ್ಲ. ಸುರತ್ಕಲ್‌ನಲ್ಲಿ ಎಸ್‌ಟಿಪಿ ಪ್ಲಾಂಟ್‌ನಿಂದ ಶುದ್ಧೀಕರಿಸದ ನೀರನ್ನು ನೇರವಾಗಿ ಖಂಡಿಗೆ ಹೊಳೆಗೆ ಬಿಡಲಾಗುತ್ತಿದೆ. 80 ಮೀಟರ್‌ ಉದ್ದಕ್ಕೆ ನೀರು ಹರಿದು ಹೋಗುತ್ತದೆ. ಇದರಲ್ಲಿ ಆರು ಕಡೆಗಳಲ್ಲಿ ಸೋರಿಕೆಯಿದೆ. ಒಟ್ಟಾರೆ ಈ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಆಪಾದಿಸಿದರು. ಬಜಾಲ್‌ ವೆಟ್‌ ವೆಲ್‌ನಿಂದ ತ್ಯಾಜ್ಯ ನೀರು ಹರಿದು ಹೋಗುತ್ತದೆ ಎಂದು ಬಿಜೆಪಿ ಸುಧೀರ್‌ ಕಣ್ಣೂರು ತಿಳಿಸಿದರು.

ಅವ್ಯವಹಾರ ತನಿಖೆಯಾಗಲಿ
ಎಡಿಬಿ ಯೋಜನೆ ಮೊದಲ ಹಂತದ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪದ ಕುರಿತು ತಜ್ಞ
ಸಮಿತಿ ತನಿಖೆ ನಡೆಸಿ ಎಂದು ಶಾಸಕ ಜೆ. ಆರ್‌. ಲೋಬೊ ಆಗ್ರಹಿಸಿದರು. ಎಬಿಡಿ ಮೊದಲ ಹಂತದ ಯೋಜನೆಯಲ್ಲಿ 2009 ಡಿಸೆಂಬರ್‌ ಅಂತ್ಯದವರೆಗೆ ತಾನು ನಿರ್ದೇಶಕನಾಗಿದ್ದೆ. ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್‌ ಪ್ರದೇಶದಲ್ಲಿ 2011ರಲ್ಲಿ ಒಳಚರಂಡಿ ಕಾಮಗಾರಿ ನಡೆದಿದೆ. ಆ ವೇಳೆ ಕಾಮಗಾರಿಯಲ್ಲಿ ಲೋಪಗಳಾಗಿದ್ದರೆ, ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದವರೇ ಹೊಣೆಯಾಗುತ್ತಾರೆ ಎಂದು ತಿಳಿಸಿದರು.

ಒಳಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಹಳೆ ಮಂಗಳೂರು ಪ್ರದೇಶಕ್ಕೆ ಕಡಿಮೆ ಹಣ ವಿನಿಯೋಗಿಸಿರುವುದರಿಂದ ಕೆಲವು ಸಮಸ್ಯೆಗಳು ತಲೆದೋರಿದೆ. ಬಜಾಲ್‌, ಕಾವೂರಿನಲ್ಲಿಯೂ ಒಳಚರಂಡಿಗೆ ಸಂಬಂಧಿಸಿದ ಪ್ಲಾಂಟ್‌ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವೆಡೆ ಮಿಸ್‌ಲಿಂಕ್‌ ಆಗಿರುವುದನ್ನು ಎಡಿಬಿ ಎರಡನೇ ಹಂತದ ಯೋಜನೆಯಲ್ಲಿ ಸರಿಪಡಿಸಬಹುದು ಎಂದರು.

12 ಕೋಟಿ ರೂ.
ಕಾರ್ಪೋರೇಟರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ಎಡಿಬಿ ಒಂದನೇ ಹಂತದ ಕುಡ್ಸೆಂಪ್‌ ಯೋಜನೆಯಡಿಯಲ್ಲಿ ಸುಮಾರು 19 ಕೋಟಿ ರೂ.ಗಳ ಕಾಮಗಾರಿ ನಡೆದಿತ್ತು. ಆದರೆ ಈ ಕಾಮಗಾರಿಗಳಲ್ಲಿನ ಲೋಪ ಸರಿಪಡಿಸಲು ಅಮೃತ್‌ ಯೋಜನೆಯಡಿ 55 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಪೈಕಿ ಮಂಗಳೂರು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 30 ಕೋಟಿ ರೂ. ಮತ್ತು 25 ಕೋಟಿ ರೂ.ಗಳನ್ನು ಇಡಲಾಗಿದೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಕವಿತಾ ಸನಿಲ್‌, ಪ್ರಸ್ತುತ ಮೀಸಲಿಡಲಾದ 55 ಕೋಟಿ ರೂ.ಗಳಲ್ಲಿ ಏನೇನು ಕೆಲಸಗಳು ನಡೆಯಲಿವೆ ಎಂದು ಪಾಲಿಕೆ ಸಭೆಯಲ್ಲೇ ಚರ್ಚಿಸಲಾಗಿದೆ ಎಂದರು. ಶಾಸಕ ಜೆ. ಆರ್‌. ಲೋಬೋ ಪ್ರತಿಕ್ರಿಯಿಸಿ, ಅಮೃತ್‌ ಯೋಜನೆಯಡಿ 55 ಕೋಟಿ ರೂ.ನಲ್ಲಿ ಕೇವಲ 10-12 ಕೋಟಿ ರೂ.ಗಳನ್ನು ಮಾತ್ರ ವಿನಿಯೋಗಿಸಲಾಗುತ್ತಿದೆ. ಉಳಿದ ಹಣವನ್ನು ರಸ್ತೆ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ. ಅಮೃತ್‌ ಯೋಜನೆಯಲ್ಲಿ ಕೇಂದ್ರ ಸರಕಾರ ಶೇ. 50 ನಿಧಿ ಒದಗಿಸಿದರೆ, ರಾಜ್ಯ ಸರಕಾರ ಶೇ. 20 ಮತ್ತು ಮನಪಾ ಶೇ. 30 ಹಣ ಭರಿಸುತ್ತದೆ ಎಂದರು. ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಎಡಿಬಿ ಒಂದನೇ ಹಂತದ ಯೋಜನೆ ಕುರಿತು ಶಾಸಕರು ಸಮಗ್ರವಾಗಿ ತಿಳಿಸಿದ್ದಾರೆ. ತನಿಖೆ ನಡೆಸಬೇಕೆಂಬ ಶಾಸಕರ ಆಗ್ರಹವನ್ನು ತಾನು ಸ್ವಾಗತಿಸುತ್ತೇನೆ ಎಂದರು.

ಬಡವರಿಗೆ ನಿವೇಶನ ಸಿಕ್ಕಿಲ್ಲ
ಸಿಪಿಐನ ದಯಾನಂದ ಶೆಟ್ಟಿ ಮಾತನಾಡಿ, ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ಯೋಜನೆ ಎಲ್ಲಿಯವರೆ ಬಂದಿದೆ ಎಂಬ ಬಗ್ಗೆಯೂ ವಿವರವಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಮಹಮ್ಮದ್‌ ನಜೀರ್‌, ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 600 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಜಿಪ್ಲಸ್‌ ಮಾದರಿಯಲ್ಲಿ ಮನೆ ನಿರ್ಮಿಸಲು ಡಿಪಿಆರ್‌ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ಕಾವೂರು ಮಾರುಕಟ್ಟೆ ಮಾರ್ಚ್‌ ಅಂತ್ಯಕ್ಕೆ ಸಿದ್ಧ
ಕಾವೂರು ಮಾರುಕಟ್ಟೆ ಕಾಮಗಾರಿ ಮೂರು ಹಂತಗಳಲ್ಲಿ ನಡೆಯಲಿದ್ದು, ಪ್ರಸ್ತುತ 175 ಕೋಟಿ ರೂ. ಬಿಡುಗಡೆ
ಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 175 ಕೋಟಿ ರೂ. ಬಿಡುಗಡೆಯಾಗಲಿದೆ. ಮಾರ್ಚ್‌ ಅಂತ್ಯದೊಳಗೆ ಮಾರುಕಟ್ಟೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಜಿ ಮೇಯರ್‌ ಹರಿನಾಥ್‌ ಅವರ ಪ್ರಶ್ನೆಗೆ ಪಾಲಿಕೆ ಅಧಿಕಾರಿ ಉತ್ತರಿಸಿದರು.

ಪುರಭವನದ ಬಳಿ ಡೈನಿಂಗ್‌ ಹಾಲ್‌ ಉದ್ದೇಶದಿಂದ ಮಿನಿ ಹಾಲ್‌ ನಿರ್ಮಿಸಲಾಗಿದೆ. ಎತ್ತರ ಕಡಿಮೆ ಇರುವುದರಿಂದ
ಸೌಂಡ್‌ ಪ್ರೂಫ್ ಅಳವಡಿಸುವುದು ಅಸಾಧ್ಯವಾಗಿದೆ. ಈ ಸಂಬಂಧ ಹೈದರಾಬಾದ್‌ನ ತಂಡವೊಂದು ಪರಿಶೀಲಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದರು. ಉಪ ಮೇಯರ್‌ ರಜನೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗವೇಣಿ, ಅಬ್ದುಲ್‌ ರವೂಫ್‌, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್‌, ಶಶಿಧರ ಹೆಗ್ಡೆ, ಪಾಲಿಕೆ ಆಯುಕ್ತ ಮಹಮ್ಮದ್‌ ನಜೀರ್‌ ಉಪಸ್ಥಿತರಿದ್ದರು.

ಬೈದಾಡಿಕೊಂಡ ಕಾಂಗ್ರೆಸ್ಸಿಗರು!
ಪಾಲಿಕೆಯ ಸಾಮಾನ್ಯ ಸಭೆ ಮುಗಿದು ಸದಸ್ಯರು ನಿರ್ಗಮಿಸುತ್ತಿದ್ದಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯರಾದ
ರಾಧಾಕೃಷ್ಣ ಹಾಗೂ ಎ. ಸಿ. ವಿನಯರಾಜ್‌ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಸಭಾಂಗಣದಿಂದ ಹೊರ ಹೋಗುತ್ತಿದ್ದ ಎ. ಸಿ. ವಿನಯ್‌ರಾಜ್‌ ಅವರ ಮೇಲೆ ಕೆರಳಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ರಾಧಾಕೃಷ್ಣ, ಪ್ರತಿ ಬಾರಿ ಚುಕ್ಕೆ ಪ್ರಶ್ನೆ ಎನ್ನುತ್ತಾ ಸಮಯ ಹಾಳು ಮಾಡುತ್ತೀರಿ. ಮೂರು ಬಾರಿಯ ಸಭೆಯಲ್ಲಿಯೂ ಇದೇ ರೀತಿ ಆಗಿದೆ. ನೀವೊಬ್ಬರೇ ಮಾತನಾಡಿದರೆ ಸಾಕೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ವಿನಯರಾಜ್‌ ಅವರು, ‘ನನ್ನ ಬಾಯಿ
ಮುಚ್ಚಿಸಲು ನೀವು ಯಾರು?’ ಎಂದು ಪ್ರಶ್ನಿಸಿದರು. ಇಬ್ಬರ ನಡುವಿನ ವಾಕ್ಸಮರವನ್ನು ಇತರ ಸದಸ್ಯರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು.

ಧಿಕ್ಕಾರ ಕೂಗಿದ ಸದಸ್ಯೆ!
ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆಗೆ ಕಾಂಗ್ರೆಸ್‌ ಸದಸ್ಯೆ ಅಪ್ಪಿ ಧಿಕ್ಕಾರ ಕೂಗಿದ ಘಟನೆ ಪಾಲಿಕೆ ಸಭೆಯಲ್ಲಿ
ನಡೆಯಿತು. ಸಂವಿಧಾನವನ್ನು ಬದಲಾಯಿಸಬೇಕೆಂದು ಆಗ್ರಹಿಸಿಹ ಕೇಂದ್ರ ಸಚಿವರು ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್‌ ಹಾಗೂ ದಲಿತರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. 

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.