ಅಡ್ವೆಂಚರ್ ಫೆಸ್ಟಿವಲ್: ಮಲ್ಪೆಯಲ್ಲಿ ಜನಸಾಗರ
Team Udayavani, Dec 31, 2017, 10:19 AM IST
ಮಲ್ಪೆ: ಉಡುಪಿ ಪರ್ಬ ಹಿನ್ನೆಲೆಯಲ್ಲಿ ಪ್ರವಾಸಿಗರು – ಸಾರ್ವಜನಿಕರಿಗೆ ಮಲ್ಪೆ ಕಡಲ ಕಿನಾರೆ ಹೊಸ ಮೆರುಗನ್ನು ನೀಡಿದೆ. ಬೀಚ್‌ನಲ್ಲಿ ಸೇರಿದ್ದ ಸಾವಿರಾರು ಮಂದಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿವಿಧೆಡೆಗಳಿಂದ ಆಗಮಿಸಿದ್ದ ಶೈಕ್ಷಣಿಕ ಪ್ರವಾಸಿ ವಿದ್ಯಾರ್ಥಿಗಳ ಸಹಿತ ಸ್ಥಳೀಯ ಮತ್ತು ಪರವೂರ ಸಾವಿರಾರು ಯಾತ್ರಿಕರು ಶನಿವಾರ ಉಡುಪಿ ಪರ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶನಿವಾರ ಬೆಳಗ್ಗೆ ರಾಷ್ಟ್ರಮಟ್ಟದ ಓಪನ್ ಈಜು ಸ್ಪರ್ಧೆಯಲ್ಲಿ ಕೇರಳ, ಹರಿಯಾಣ, ತ.ನಾಡು, ಆಂಧ್ರ ಪ್ರದೇಶ, ಪುದುಚೇರಿ ಸಹಿತ ವಿವಿಧ ರಾಜ್ಯಗಳ 320 ಕ್ರೀಡಾಪಟುಗಳು ಭಾಗವಹಿಸಿದ್ದರು.
ಬೆಳಗ್ಗೆ 10ರಿಂದ ಸಂಜೆಯವರೆಗೆ ಬೀಚ್ ಮತ್ತು ಸೈಂಟ್ ಮೇರೀಸ್ ದ್ವೀಪ ದಲ್ಲಿ ವಿವಿಧ ಸಾಹಸ ಕ್ರೀಡೆಗಳು ನಡೆದವು.
ಕಮಾಂಡೋ ಬ್ರಿಡ್ಜ್, ಸ್ಲೇಕ್‌ಲೈನ್, ಎಕ್ಸ್‌ಟ್ರೀಮ್ ನ್ಪೋರ್ಟ್ಸ್, ಬಿಎಂಎಕ್ಸ್, ಸ್ಕೇಟ್ ಬೋರ್ಡಿಂಗ್, ಜೆಟ್‌ಸ್ಕೈ, ವಿಂಡ್ ಸರ್ಫಿಂಗ್, ಬನಾನ ರೈಡ್, ಜಾಲಿ ರೈಡ್‌ಗಳು ನಡೆದರೆ, ಸೈಂಟ್ ಮೇರೀಸ್ ದ್ವೀಪದಲ್ಲಿ ಬೋಲ್ಡಿಂಗ್ ಸ್ಲೇಕ್‌ಲೈನ್, ಜುಮ್ಮರಿಂಗ್, ಬರ್ಮಾ ಬ್ರಿಡ್ಜ್ ರೈಡ್‌ಗಳು ನಡೆದವು. ಮಲ್ಪೆ ಬೀಚ್‌ನಲ್ಲಿ ಕಯಾಕಿಂಗ್ ಸ್ಪರ್ಧೆ ನಡೆಯಿತು. ಹಗ್ಗಜಗ್ಗಾಟ ಸ್ಪರ್ಧೆ ಯಲ್ಲಿ ಪುರುಷರ ವಿಭಾಗದಲ್ಲಿ 11 ತಂಡಗಳು, ಮಹಿಳೆಯರ ವಿಭಾಗದಲ್ಲಿ 6 ತಂಡಗಳು ಸ್ಪರ್ಧಿಸಿದ್ದವು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಹ್ಲಾದ ಆಚಾರ್ಯ ಅವರ ಶ್ಯಾಡೋ ಪ್ಲೇ ಮತ್ತು ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಕಾರ್ಯಕ್ರಮದ ವೀಕ್ಷಣೆಗೆ ಭಾರೀ ಜನಸ್ತೋಮ ಸೇರಿದ್ದು, ಕಡಲ ಕಿನಾರೆಯಲ್ಲಿ ಸಂಭ್ರಮ ಮನೆಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.