ಪಣಂಬೂರು ಬೀಚ್ ಉತ್ಸವ: ಕ್ರೀಡಾಕೂಟಗಳಿಗೆ ನೀರಸ ಪ್ರತಿಕ್ರಿಯೆ
Team Udayavani, Dec 31, 2017, 10:47 AM IST
ಪಣಂಬೂರು: ಇಲ್ಲಿನ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಬೀಚ್ ಉತ್ಸವದ ವಿವಿಧ ಕ್ರೀಡಾ ಕೂಟಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶುಕ್ರವಾರ ಹಾಗೂ ಶನಿವಾರ ಆಯೋಜಿಸಿದ್ದ ಬೀಚ್ ವಾಲಿಬಾಲ್ ಮತ್ತು ತ್ರೋಬಾಲ್ ಕ್ರೀಡೆಗೆ ಬಹುತೇಕ
ನೋ ಎಂಟ್ರಿ ಬಂದಿದೆ. ಒಂದೆರಡು ತಂಡಗಳು ಅಭ್ಯಾಸ ಪಂದ್ಯದಂತೆ ಆಡಿ ಉತ್ಸವದ ನಿಯಮ ಪೂರೈಸಿವೆ. ಜಿಲ್ಲಾ
ಡಳಿತದ ಪ್ರೋತ್ಸಾಹದ ಕೊರತೆ, ಮೂಲ ಸೌಲಭ್ಯದ ಕೊರತೆಯಿಂದಲೂ ಹೆಚ್ಚಿನ ತಂಡಗಳು ಆಸಕ್ತಿ ವಹಿಸಿಲ್ಲ. ಇನ್ನು
ಆಕರ್ಷಣೀಯವಾಗಿದ್ದ ದೋಣಿ ಸ್ಪರ್ಧೆಯನ್ನೂ ಈ ಬಾರಿ ಕೈ ಬಿಡಲಾಗಿದೆ.
ಮನರಂಜನೆಗೆ ಸಖತ್ ಜನ
ಶುಕ್ರವಾರ ಸಂಜೆ ವಿವಿಧೆಡೆಯಿಂದ ಆಗಮಿಸಿದ ಪ್ರವಾಸಿಗರು ಬೀಚ್ ಉತ್ಸವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ವೀಕ್ಷಿಸಿದರಲ್ಲದೆ ಕಡಲ ತೀರದಲ್ಲಿ ಸಮುದ್ರದ ಅಲೆಗಳ ನಡುವೆ ಈಜುತ್ತಾ ಸಂಭ್ರಮಿಸಿದರು. ಚುರುಮುರಿ, ಮೆಣಸು ಹುಡಿ ಹಾಕಿದ ಕಾಯಿ ಮಾವಿನ ಕಾಯಿ, ಮುಳ್ಳು ಸೌತೆ, ಕುಲಿ , ಐಸ್ ಕ್ರೀಂ ಸಹಿತ ವಿವಿಧ ಆಹಾರ ಖಾದ್ಯ ಸವಿದರು.
ಗಾಳಿ ಪಟ ಹಾರಾಟ ಸಂಭ್ರಮ
ಬೀಚ್ ನಲ್ಲಿ ಸಣ್ಣ ಸಣ್ಣ ಗಾಳಿ ಪಟ ಮಾರಾಟಕ್ಕಿಡಲಾಗಿದ್ದು, ಪ್ರವಾಸಿ ಗರುಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿ ಪಟ ಹಾರಿಸಿ ಚಿತ್ತಾರ ಬಿಡಿಸಿದರು. ಇನ್ನು ಕುದುರೆ, ಸವಾರಿ, ಒಂಟೆ ಸವಾರಿ, ಜಟ್ಕಿನ್ ರೈಡ್, ದೋಣಿ ವಿಹಾರ ನಡೆಸುವವರ ಸಂಖ್ಯೆಯೂ ಹೆಚ್ಚಿತ್ತು. ಕಡಲ ತೀರದಲ್ಲಿ ಬೀಚ್ ರಕ್ಷಣಾ ದಳದವರ ಕಣ್ಗಾವಲು ಇದ್ದರೆ, ಭದ್ರತೆಗಾಗಿ ಪೊಲೀಸ್ ಔಟ್ ಪೋಸ್ಟ್ ತೆರೆದು ಸಿಬಂದಿಗಳನ್ನು ನಿಯೋಜಿಸಲಾಗಿದೆ. ವಾಹನಗಳನ್ನು ಬೈಕಂಪಾಡಿ ರೈಲ್ವೇ ಸೇತುವೆಯಾಗಿ ಮೀನಕಳಿಯ ರಸ್ತೆಯಲ್ಲಿ ಬಿಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.