ಭಟ್ಟರ ಚಿತ್ರಕ್ಕೆ ವಿಹಾನ್ ಹೀರೋ
Team Udayavani, Dec 31, 2017, 10:58 AM IST
ನಿರ್ದೇಶಕ ಯೋಗರಾಜ್‌ಭಟ್ ಹೊಸಬರ ಸಿನಿಮಾವೊಂದನ್ನು ನಿರ್ದೇಶಿಸುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಆಗ ಆ ಚಿತ್ರಕ್ಕೆ ಹೀರೋ ಆಗಲಿ, ನಿರ್ಮಾಪಕರಾಗಲಿ ತಂತ್ರಜ್ಞರಾಗಲಿ ಪಕ್ಕಾ ಆಗಿರಲಿಲ್ಲ. ಈಗ ಯೋಗರಾಜ್‌ಭಟ್ ಸಿನಿಮಾಗೆ ಹೀರೋ ಸಿಕ್ಕಿದ್ದಾಗಿದೆ. ಒಂದಷ್ಟು ವಿಷಯಗಳೂ ಪಕ್ಕಾ ಆಗಿವೆ. ಹೌದು, ಯೋಗರಾಜ್‌ಭಟ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ವಿಹಾನ್‌ಗೌಡ ಹೀರೋ ಆಗಿದ್ದಾರೆ.
ಆದರೆ, ವಿಹಾನ್‌ಗೌಡಗೆ ನಾಯಕಿ ಮಾತ್ರ ಇನ್ನೂ ಆಯ್ಕೆಯಾಗಿಲ್ಲ. ಹರಿಪ್ರಸಾದ್ ಅವರು ಭಟ್ಟರ ಚಿತ್ರಕ್ಕೆ ನಿರ್ಮಾಪಕರು. ಇನ್ನು, ಈ ಚಿತ್ರ ಯೋಗರಾಜ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಆದರೆ, ಎಂದಿನಂತೆ ಯೋಗರಾಜ್ ಭಟ್ ಅವರ ತಂತ್ರಜ್ಞರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದಾರೆ.
ಸುಜ್ಞಾನ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಶಶಿಧರ್ ಅಡಪ ಅವರ ಕಲಾನಿರ್ದೇಶನ ಚಿತ್ರಕ್ಕಿದೆ. ಸುರೇಶ್ ಆರ್ಮುಗನ್ ಸಂಕಲನವಿದೆ. ಇದೊಂದು ಯೂತ್ಸ್ಫುಲ್ ಕಥೆಯಾಗಿದ್ದು, ಹಾಸ್ಯದೊಂದಿಗೆ ನವಿರಾದ ಪ್ರೇಮಕಥೆ ಇದೆ. ಸಾಕಷ್ಟು ನೈಜತೆಗೆ ಹತ್ತಿರವಾಗಿರುವ ಅಂಶಗಳು ಚಿತ್ರದ ಮತ್ತೂಂದು ಹೈಲೈಟ್. ಮುಖ್ಯವಾಗಿ ಯುವಪೀಳಿಗೆಯನ್ನು ಮನಸ್ಸಲಿಟ್ಟುಕೊಂಡೇ ಭಟ್ಟರು ಕಥೆ ಹೆಣೆದಿದ್ದಾರೆ.
ಈಗಿನ ವಾಸ್ತವತೆಯ ಸಾರ ಚಿತ್ರದುದ್ದಕ್ಕೂ ಕಾಣಸಿಗಲಿದೆ. ಕೇವಲ ಯೂತ್ಸ್ಗಷ್ಟೇ ಅಲ್ಲ, ಫ್ಯಾಮಿಲಿ ಆಡಿಯನ್ಸ್ ಕೂಡ ನೋಡುವಂತಹ ಹೊಸಬಗೆಯ ಕಥೆ ಹೆಣೆದು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಭಟ್ಟರು. ಇದು ಭಟ್ಟರ 12 ನೇ ಚಿತ್ರ ಎಂಬುದು ಇನ್ನೊಂದು ವಿಶೇಷ. ಈ ಚಿತ್ರದ ನಾಯಕ ವಿಹಾನ್‌ಗೌಡ ಈ ಹಿಂದೆ “ಕಾಲ್‌ಕೇಜಿ ಪ್ರೀತಿ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು.
ಆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಇನ್ನುಳಿದಂತೆ ಚಿತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಮತ್ತು ಹೊಸ ಪ್ರತಿಭೆಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿವೆ. ಜನವರಿ 22 ರಿಂದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ರಾಮನಗರ ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.