ರಾಷ್ಟ್ರೀಯ ಜಲಸಮಾವೇಶಕ್ಕೆ ಸಾಕ್ಷಿಯಾದ ವಿಜಯಪುರ


Team Udayavani, Dec 31, 2017, 12:35 PM IST

vij-5.jpg

ರಾಷ್ಟ್ರೀಯ ಜಲ ಸಮಾವೇಶ: ವಿಜಯಪುರ ಜಿಲ್ಲೆಯಲ್ಲಿ ಐತಿಹಾಸಿಕ ಜಲಸಂಗ್ರಹಾಗಾರ ಸ್ಮಾರಕಗಳ ಸಂರಕ್ಷಣೆ ಕಾರ್ಯದ ಮೂಲಕ ದೇಶಕ್ಕೆ ಮಾದರಿ ಎನಿಸಿದ ವಿಜಯಪುರ ನಗರದಲ್ಲಿ ರಾಷ್ಟ್ರ ಮಟ್ಟದ ಜಲ ಬಿರಾದರಿ ಸಮಾವೇಶ ನಡೆಸಿ ಭೀಕರ ಬರಕ್ಕೆ ಪರಿಹಾರ ಕಂಡುಕೊಳ್ಳಲಾಯಿತು.

ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯ ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಬರಿದಾಗಿ
ವಿಜಯಪುರ ನಗರಕ್ಕೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿತ್ತು. ಪರಿಣಾಮ ಜಲಾಶಯದ ಹಿನ್ನೀರನ್ನು ಪಂಪ್‌
ಮಾಡಿ ಜಲದಾಹ ನೀಗಿಕೊಳ್ಳಲು ಪರದಾಟ ಮಾಡಿದ ಘಟನೆ ನಡೆಯಿತು.

ಗಣ್ಯರ ಭೇಟಿ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಮೊಮ್ಮಗ ರಾಜಮೋಹನ ದೇವದಾಸ ಗಾಂಧಿಜಿ ಗೋಲಗುಮ್ಮಟ ಸೇರಿದಂತೆ ನಗರದಲ್ಲಿರುವ ಐತಿಹಾಸಿಕ ಹಲವು ಸ್ಮಾರಕಗಳಿಗೆ ಭೇಟಿ ನೀಡಿ ಕಣ್ತುಂಬಿಕೊಂಡು ಹೋದುದು ಈ ವರ್ಷದಲ್ಲಿ ಎಂಬುದು ಸ್ಮರಣಾರ್ಹವಾಯಿತು. ದೇಶದ ಜಲಸಾಕ್ಷರ ಸಂತ ಎಂದೇ ಖ್ಯಾತಿ ಪಡೆದಿರುವ ಡಾ| ರಾಜೇಂದ್ರಕುಮಾರ ಅವರು ಹಲವು ಬಾರಿ ಜಿಲ್ಲೆಗೆ ಬಂದು ಹೋದರು.

ಚಿತ್ರರಂಗ: ಚಿತ್ರನಟ ದೊಡ್ಡಣ್ಣ ಅವರ ಅನಿರೀಕ್ಷಿತ ಅನಾರೋಗ್ಯಕ್ಕೆ ಜಿಲ್ಲೆಯ ವೈದ್ಯರು ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಮೇರು ನಟನಿಗೆ ಜಿಲ್ಲೆಯ ಜನತೆಯ ಪ್ರೀತಿ ಸ್ಮರಣೆಯಲ್ಲಿ ಉಳಿಯುವಂತೆ ಮಾಡಲಾಯಿತು. 

ಇದರ ಹೊರತಾಗಿಯೂ ಕಾರ್ಯಕ್ರಮದ ನಿಮಿತ್ತ ಚಿತ್ರರಂಗದ ಯಶ್‌, ರಾಧಿಕಾ ಪಂಡಿತ, ಸುಮನ್‌ ರಂಗನಾಥ ಸೇರಿ ಹಲವರು ಜಿಲ್ಲೆಗೆ ಬಂದು ಹೋದರು. ದೇಶ ಕಂಡ ಅಪರೂಪದ ಹಿರಿಯ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ, ವಿಜಯಪ್ರಕಾಶ, ಅರ್ಜುನ್‌ ಜನ್ಯ ಅವರು ಜಿಲ್ಲೆ ಬಂದು ಸಂಗೀತ ಕಾರ್ಯಕ್ರಮ ನೀಡಿ ಜಿಲ್ಲೆಯ ಜನರನ್ನು ರಂಜಿಸಿ ಹೋದರು. 

ನೀರಾವರಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಏತ ನೀರಾವರಿ ಮೂರನೇ ಲಿಫ್ಟ್‌ ಮಸೂತಿ ಮುಖ್ಯ ಸ್ಥಾವರದ ಪಂಪ್‌ ಹಾಗೂ ಬಸವನಬಾಗೇವಾಡಿ ತಾಲೂಕಿನ ಹಣಮಾಪುರ ಜಾಕ್‌ ವೆಲ್‌ನಲ್ಲಿ ಮಸೂತಿ ಲೀಡ್‌ಆಫ್‌ ಕಾಲುವೆಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು. ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ರಾಜಕೀಯ ವೈರಿಗಳಾಗಿರುವ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು.

ಪ್ರಶಸ್ತಿಗಳ ಮಹಾಪುರ: ಸಚಿವ ಎಂ.ಬಿ. ಪಾಟೀಲ ಅವರಿಗೆ ಸಿದ್ದೇಶ್ವರ ಜಾತ್ರೆಯ ಸಂಕ್ರಮಣ ಉತ್ಸವದಲ್ಲಿ ಆಧುನಿಕ ಭಗೀರಥ ಬಿರುದು ಪ್ರದಾನ ಮಾಡಲಾಯಿತು. ಕಲೆಯನ್ನೇ ಉಸಿರಾಗಿಸಿಕೊಂಡಿರುವ ಪಾರಿಜಾತ ಕಲಾವಿದೆ ಸಾರವಾಡದ ಈಶ್ವರವ್ವ ಮಾದರ ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕ ನಗರದ ಮನೋಹರ ಪತ್ತಾರ ರಾಜ್ಯೋತ್ಸವ ಪ್ರಶಸ್ತಿಲಭಿಸಿದೆ.

ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ವಿಜಯಪುರ ಜಿಪಂ ರೂಪಿಸಿದ್ದ ವೃಕ್ಷ ಅಭಿಯಾನ ಹಾಗೂ
ಐತಿಹಾಸಿಕ ಜಲಸ್ಮಾರಕಗಳ ಸಂರಕ್ಷಣೆ ಸ್ತಬ್ಧ ಚಿತ್ರಕ್ಕೆ ಸಮಾಧಾನಕರ ಪ್ರಶಸ್ತಿ ಲಭಿಸಿದೆ. ಈ ಸ್ತಬ್ಧ ಚಿತ್ರ ಆದಿಲ್‌ಶಾಹಿ ಕಾಲದ ಐತಿಹಾಸಿಕ ಪ್ರಸಿದ್ಧಿ ಪಡೆದ ತಾಜ್‌ ಬಾವಡಿ, ನೀರಿನ ಗಂಜ್‌ ಹಾಗೂ ಜಿಲ್ಲೆಯ ಪುನಶ್ಚೇತನಗೊಂಡ ಕೆರೆ ಬಾವಿಗಳ ಪರಿಕಲ್ಪನೆ ಹೊಂದಿತ್ತು.

ಇದರ ಹೊರತಾಗಿ ಜಿಲ್ಲೆಯ ರಂಗಕರ್ಮಿಗಳು ಯೋಗ ಪಟುಗಳು, ಕ್ರಿಕೆಟ್‌, ಕರಾಟೆ, ಟೆಕ್ವಾಂಡೋ ಹೀಗೆ ಹಲವು ರಂಗಗಳಲ್ಲಿ ಜಿಲ್ಲೆಯ ಪ್ರತಿಭೆಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ರಾಜಕೀಯ: ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮೀಸಲು ಕ್ಷೇತ್ರದ ಸ್ಪರ್ಧೆ ಕಾರಣಕ್ಕೆ ಸದಸ್ಯತ್ವ ರದ್ದುಗೊಂಡರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮತ್ತೆ ಅಧಿಕಾರದಲ್ಲಿ ಮುಂದುವರಿದರು.

ಎರಡನೇ ಬಾರಿಗೆ ಸಂಗೀತಾ ಪೋಳಗೆ ಮೀಸಲು ಮೇಯರ್‌ ಭಾಗ್ಯ ಪಡೆದರು. ಮಹಾನಗರ ಪಾಲಿಕೆ ಆಡಳಿತದ 4ನೇ ಅವಧಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಫಲವಾಗಿ ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್‌ ಸ್ಥಾನ ಮೀಸಲಾಗಿದ್ದ ಸ್ಥಾನಕ್ಕೆ ಮೇಯರ್‌ ಆಗಿ ಸಂಗೀತಾ ಪೋಳ ಎರಡನೇ ಬಾರಿಗೆ ಆಯ್ಕೆಯಾದರು. ಜೆಡಿಎಸ್‌ ನ ರಾಜೇಶ ದೇವಗಿರಿ ಉಪ ಮೇಯರ್‌ ಆಗಿ ಅವಿರೋಧ ಆಯ್ಕೆಯಾದರು.

ಜಿಲ್ಲೆಯ ನಾಲ್ಕು ಎಪಿಎಂಸಿಗಳಿಗೆ ಚುನಾವಣೆ ನಡೆದವು. ಹತ್ಯೆ ಯತ್ನ ಆರೋಪದಲ್ಲಿ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಬಂಧನ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಜಿಲ್ಲೆಯವರಾದ ದಿ| ಬಿ.ಎಂ. ಪಾಟೀಲ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ, ಜಿಲ್ಲೆಯ ರಾಜಕೀಯ ರಂಗದ ತಾರೆ ಎನಿಸಿಕೊಂಡಿದ್ದ ಬಿ.ಎಸ್‌. ಪಾಟೀಲ ಮನಗೂಳಿ ಪುತ್ಥಳಿ ತವರು ಗ್ರಾಮದಲ್ಲಿ ತಲೆ ಎತ್ತಿದವು. 

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ನವ ಕರ್ನಾಟಕ ನಿರ್ಮಾಣ ಯಾತ್ರೆ ಸೇರಿದಂತೆ ಹಲವು ಕಾರಣಕ್ಕೆ ಸಿಎಂ
ಸಿದ್ದರಾಮಯ್ಯ ಆರೇಳು ಬಾರಿ ಜಿಲ್ಲಾದ್ಯಂತ ಸಂಚರಿಸಿ ಹೋದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪರಿವರ್ತನಾ ಯಾತ್ರೆ ನೆಪದಲ್ಲಿ ಜಿಲ್ಲೆಯನ್ನು ಸುತ್ತು ಹಾಕಿದರು. ರಾಯಣ್ಣ ಬ್ರಿಗೇಡ್‌ ಕಟ್ಟಲು ಕೆ.ಎಸ್‌. ಈಶ್ವರಪ್ಪ ಜಿಲ್ಲೆಗೆ ಬಂದು ಹೋದರೆ, ಶಾಸಕ ವರ್ತೂರ ಪ್ರಕಾಶ ಅವರು ತಮ್ಮದೇ ನಾಯಕತ್ವದಲ್ಲಿ ರಾಜಕೀಯ ಪಕ್ಷ ಕಟ್ಟುವುದನ್ನು ಜಿಲ್ಲೆಯಲ್ಲಿ ಘೋಷಿಸಿದ್ದು 2017 ವರ್ಷದಲ್ಲಿ.

ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ನೀಲಗಾಯ್‌ ಎಂಬ ಈ ವನ್ಯಜೀವಿ ಸಿಂದಗಿ ತಾಲೂಕ ಹಚ್ಯಾಳ ಗ್ರಾಮದಲ್ಲಿ ಕಾಣಿಸಿಕೊಂಡು ಕಾಲುವೆ ಬಿದ್ದು ಜೀವನ್ಮರಣದೊಂದಿಗೆ ಹೋರಾಡಿ ಅಂತಿಮವಾಗಿ ಸ್ಥಳೀಯರ ನೆರವಿನಿಂದ ಸಂರಕ್ಷಿಸಲ್ಪಟ್ಟು ಅರಣ್ಯ ಇಲಾಖೆ ವಶಕ್ಕೆ ಸೇರಿಕೊಂಡಿತು. 

ನಗರದ ಹೊರ ವಲಯದಲ್ಲಿರುವ ಅಲಿಯಾಬಾದ ಬಳಿ ರೈಲು ಹಳಿಯಲ್ಲಿ ಬಿರುಕು ಬಿಟ್ಟ ಸದ್ದು ಕೇಳಿಸಿಕೊಂಡ ಪ್ರಯಾಣಿಕರ ರೈಲು ಚಾಲಕ ಸಮಯ ಪ್ರಜ್ಞೆಯಿಂದ ರೈಲು ಸಂಚಾರ ನಿಲ್ಲಿಸಿ ಸಂಭಾವ್ಯ ದುರಂತ ತಪ್ಪಿಸಿದರು.

ಟಾಪ್ ನ್ಯೂಸ್

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.