ರೈಲು ನಿಲ್ದಾಣದಲ್ಲಿ ಭೂತ ಇಲ್ಲ,ಪಿಶಾಚಿಯೂ ಇಲ್ಲ!
Team Udayavani, Dec 31, 2017, 2:37 PM IST
ಬೆಗುಂಕೊದೊರ್ (ಪಶ್ಚಿಮ ಬಂಗಾಲ): ದೆವ್ವ, ಭೂತಗಳ ನಿಲ್ದಾಣವೆಂದು ಕುಖ್ಯಾತಿ ಪಡೆದಿರುವ ಪುರೂಲಿಯಾ ಜಿಲ್ಲೆಯ ಬೆಗುಂಕೊದೊರ್ ರೈಲ್ವೇ ನಿಲ್ದಾಣ ದಲ್ಲಿ ಉತ್ಸಾಹಿ ಯುವಕರ ತಂಡವೊಂದು ರಾತ್ರಿಯನ್ನು ಕಳೆದು ಸ್ಥಳೀಯ ಜನರ ಮೌಡ್ಯವನ್ನು ಸಾಬೀತುಪಡಿಸಿದೆ.
ವಿಚಾರವಾದಿಗಳ ವೇದಿಕೆಯಾದ ಪಶ್ಚಿಮ್ ಬಾಂಗ್ಲಾ ಬಿಗ್ಯಾನ್ ಮಂಚ್‌ಗೆ ಸೇರಿದ ಒಂಬತ್ತು ಯುವಕರು ಈ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ಯಾವುದೇ ಆತಂಕವಿಲ್ಲದೆ ಕಳೆದಿದ್ದಾರೆ. ಇವರಿಗೆ ಕೆಲ ಪೊಲೀಸ್ ಸಿಬಂ ದಿಯೂ ಸಾಥ್ ನೀಡಿದ್ದು ವಿಶೇಷ. ಸಂಶೋಧನೆಯ ದೃಷ್ಟಿಯಲ್ಲಿ ಇವರೆಲ್ಲರೂ ಕೆಮರಾ, ಕಂಪಾಸ್ ಮುಂತಾದ ಪರಿಕರಗಳನ್ನಿಟ್ಟುಕೊಂಡೇ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದಾರೆ.
ಕುಖ್ಯಾತಿಗೆ ಕಾರಣ: ಅಯೋಧ್ಯಾ ಹಿಲ್ಸ್ ಬಳಿಯಿರುವ ಈ ಬೆಗುಂಕೊದೊರ್ ರೈಲು ನಿಲ್ದಾಣ, ಪುರೂಲಿಯಾ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. 1960ರಲ್ಲಿ ನಿರ್ಮಾಣವಾಗಿದ್ದ ಈ ರೈಲು ನಿಲ್ದಾಣಕ್ಕೆ 1967ರಿಂದ ದೆವ್ವಗಳ ನಿಲ್ದಾಣ ವೆಂಬ ಹಣೆಪಟ್ಟಿ ಅಂಟಿಕೊಂಡಿತು. ಇದಕ್ಕೆ ಕಾರಣ, ಆ ವರ್ಷದ ಒಂದು ರಾತ್ರಿ ನಿಲ್ದಾ ಣದ ಸ್ಟೇಷನ್ ಮಾಸ್ಟರ್, ಬಿಳಿ ಸೀರೆಯುಟ್ಟಿದ್ದ ಹೆಣ್ಣೊಬ್ಬಳು ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡಿದ್ದನ್ನು ನೋಡಿ ಎದೆಯೊಡೆದು ಸತ್ತೇ ಹೋಗಿದ್ದು.
ಹೀಗಾಗಿ, ಇಲ್ಲಿಗೆ ಯಾವ ಪ್ರಯಾಣಿಕರೂ ಬರುತ್ತಿರಲಿಲ್ಲ. ಈ ನಿಲ್ದಾಣವನ್ನು ಮುಚ್ಚಲಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಲದ ಸಿಎಂ ಆದ ಅನಂತರ, ಈ ನಿಲ್ದಾಣ 2009ರಲ್ಲಿ ಪುನರಾರಂಭವಾಯಿತು. ಆಗಿನಿಂದ ಇಲ್ಲಿ ರೈಲು, ಜನರು ಓಡಾಡುತ್ತಾರಾದರೂ ಸಂಜೆ 5ರ ಅನಂತರ ಯಾರೂ ಇತ್ತ ಸುಳಿಯುತ್ತಲೇ ಇರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.