ಚಾಂಪಿಯನ್ ಜೊಕೋವಿಕ್ ಗೈರಲ್ಲಿ ಕತಾರ್ ಓಪನ್ ಟೆನಿಸ್ ಕ್ಷಣಗಣನೆ
Team Udayavani, Jan 1, 2018, 6:15 AM IST
ದೋಹಾ: ಕಳೆದೆರಡು ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್ ಗೈರಲ್ಲಿ ಕತಾರ್ ಓಪನ್ ಟೆನಿಸ್ ಪಂದ್ಯಾವಳಿ ಸೋಮವಾರದಿಂದ ದೋಹಾದಲ್ಲಿ ಆರಂಭವಾಗಲಿದೆ. ಮಣಿಗಂಟಿನ ನೋವಿನಿಂದ ಅವರು ಈ ಕೂಟದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಲ್ಲೂ ಜೊಕೋ ಪಾಲ್ಗೊಳ್ಳುವುದು ಅನುಮಾನವೆನಿಸಿದೆ.
ಕಳೆದ ಸಲದ ಥ್ರಿಲ್ಲಿಂಗ್ ಫೈನಲ್‌ನಲ್ಲಿ ನಂಬರ್ ವನ್ ಆಟಗಾರನಾಗಿದ್ದ ಜೊಕೋವಿಕ್ ಬ್ರಿಟನ್ನಿನ ಆ್ಯಂಡಿ ಮರ್ರೆ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು. ಇದರ ಹಿಂದಿನ ವರ್ಷ ರಫೆಲ್ ನಡಾಲ್ ಅವರನ್ನು ಮಣಿಸಿದ್ದರು. ಬಳಿಕ 6ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನೂ ಎತ್ತಿದ್ದರು.
ಥೀಮ್‌ಗೆ ಅಗ್ರ ಶ್ರೇಯಾಂಕ
ಜೊಕೋವಿಕ್ ಹಿಂದೆ ಸರಿದುದರಿಂದ ಅವರ ನಂಬರ್ ವನ್ ಶ್ರೇಯಾಂಕವನ್ನು ವಿಶ್ವದ ನಂ.5 ಟೆನಿಸಿಗ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರಿಗೆ ಲಭಿಸಿದೆ. ಆದರೆ ಶುಕ್ರವಾರವಷ್ಟೇ ಮುಗಿದ “ಮುಬಾದಲ ವರ್ಲ್ಡ್ ಟೆನಿಸ್ ಚಾಂಪಿಯನ್‌ಶಿಪ್’ ಫೈನಲ್‌ನಲ್ಲಿ ಅವರು ಕೆವಿನ್ ಆ್ಯಂಡರ್ಸನ್‌ಗೆ ಶರಣಾಗಿದ್ದರು. ಮೊದಲ ಸುತ್ತಿನ ಪಂದ್ಯದಲ್ಲಿ ಥೀಮ್ ರಶ್ಯದ ಎವೆYನಿ ಡಾನ್‌ಸ್ಕಾಯ್ ವಿರುದ್ಧ ಆಡಲಿದ್ದಾರೆ.
ನಂ.2 ಶ್ರೇಯಾಂಕಿತ ಪಾಬ್ಲೊ ಕರೆನೊ ಬುಸ್ಟ ಕ್ರೊವೇಶಿಯಾದ ಬೋರ್ನ ಕೊರಿಕ್ ವಿರುದ್ಧ ಸೆಣಸುವರು. ಜೆಕೋಸ್ಲೊವಾಕಿಯಾದ 32ರ ಹರೆಯದ ಹಿರಿಯ ಆಟಗಾರ ಥಾಮಸ್ ಬೆರ್ಡಿಶ್, ಸ್ಪೇನಿನ ಆಲ್ಬರ್ಟ್ ರಮೋಸ್ ವಿನೋಲಸ್, ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ, ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಕತಾರ್ ಓಪನ್‌ನಲ್ಲಿ ಆಡುವ ಪ್ರಮುಖ ಆಟಗಾರರು. ಬೆರ್ಡಿಶ್ ಕಳೆದೆರಡೂ ವರ್ಷ ಸೆಮಿಫೈನಲ್‌ನಲ್ಲಿ ಎಡವಿದ್ದರು. ವೆರ್ದಸ್ಕೊ ಕೂಡ ಕಳೆದ ವರ್ಷ ಸೆಮಿಫೈನಲ್ ತನಕ ಸಾಗಿಬಂದಿದ್ದು, ಅಲ್ಲಿ ಜೊಕೋವಿಕ್‌ಗೆ ಶರಣಾಗಿದ್ದರು. ಆ್ಯಂಡಿ ಮರ್ರೆ, ರಫೆಲ್ ನಡಾಲ್ ಕೂಡ ಗಾಯಾಳಾಗಿ ಹಿಂದೆ ಸರಿದಿರುವುದರಿಂದ ದೋಹಾದಲ್ಲಿ ಯುವ ಆಟಗಾರರಿಗೆ ಮಿಂಚುವ ಅವಕಾಶವೊಂದು ಒದಗಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.