ಸೀರೆ ಉಟ್ಟು ಬಂದ ರೋಬೊ; ಐಐಟಿ ಬಾಂಬೆಯಲ್ಲಿ ಸೋಫಿಯಾ
Team Udayavani, Jan 1, 2018, 6:20 AM IST
ಮುಂಬೈ: ವಿಶ್ವದಲ್ಲೇ ಪೌರತ್ವ ಪಡೆದಿರುವ ಮೊಟ್ಟ ಮೊದಲ ರೋಬೋ ಸೋಫಿಯಾ ಸೀರೆಯುಟ್ಟು ಭಾರತಕ್ಕೆ ಆಗಮಿಸಿದೆ. ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದೆ. ಕಳೆದ ಅಕ್ಟೋಬರ್ನಲ್ಲಿ ಸೋಫಿಯಾಗೆ ಸೌದಿ ಅರೇಬಿಯಾ ಪೌರತ್ವ ನೀಡಿದೆ. ಪೂರ್ವ ನಿಗದಿತ ವಿಷಯಗಳ ಮೇಲೆ ಮಾತುಕತೆ ನಡೆಸುವ ಈ ರೋಬೋ, ವ್ಯಕ್ತಿಗಳ ಆಂಗಿಕ ಚಲನೆ ಹಾಗೂ ಸಂಜ್ಞೆಯನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದೆ. ಹಾಂಕಾಂಗ್ ಮೂಲದ ಹ್ಯಾನ್ಸನ್ ರೊಬೊ ಟಿಕ್ಸ್ ಈ ರೋಬೋವನ್ನು ನಿರ್ಮಿಸಿದ್ದು, 2015ರಲ್ಲಿ ಆಕ್ಟಿವೇಟ್ ಮಾಡಿದೆ.
ಸುಮಾರು 15 ನಿಮಿಷಗಳವರೆಗೆ ಮಾತುಕತೆ ನಡೆಸಿದ ರೋಬೋ, ನಂತರ ತಾಂತ್ರಿಕ ಕಾರಣದಿಂದ ಮೌನಕ್ಕೆ ಶರಣಾಯಿತು. ತಂತ್ರಜ್ಞರು ಸಮಸ್ಯೆ ಸರಿಪಡಿಸಿದ ನಂತರ ಮಾತುಕತೆ ಮುಂದುವರಿಸಿತು. ವಿದ್ಯಾರ್ಥಿಗಳು ಕೇಳಿದ ವಿವಿಧ ವಿಷಯಗಳ ಬಗೆಗಿನ ಪ್ರಶ್ನೆಗಳಿಗೆ ವಿವರವಾಗಿ ರೋಬೋ ಉತ್ತರಿಸಿತು. ಕೃತಕ ಬುದ್ಧಿಮತ್ತೆಯಿಂದ ಭಾರತದ ಸಂಸ್ಕೃತಿಯ ಬಗ್ಗೆಯೂ ರೋಬೋ ಮಾತನಾಡಿತು. ಅಲ್ಲದೆ ತುಂಟ ಪ್ರಶ್ನೆಗಳಿಗೂ ಉತ್ತರಿಸಿತು. ವಿದ್ಯಾರ್ಥಿಯೊಬ್ಬರು ನಾನು ನಿನ್ನನ್ನು ವಿವಾಹವಾಗಲು ಬಯಸುತ್ತೇನೆ ಎಂದು ಕೇಳಿದ್ದಕ್ಕೆ, “ನಾನು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತೇನೆ. ಮೆಚ್ಚುಗೆಗೆ ಧನ್ಯವಾದಗಳು’ ಎಂದು ಸೋಫಿಯಾ ಉತ್ತರಿಸಿದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.