ಪ್ರಾಣಿ, ಪಕ್ಷಿ ಪ್ರೀತಿಯಿಂದ ದೇವರ ಅನುಗ್ರಹ
Team Udayavani, Jan 1, 2018, 1:53 PM IST
ಉಡುಪಿ: ಪ್ರಾಣಿ, ಪಕ್ಷಿಗಳನ್ನು ಪ್ರೀತಿಯಿಂದ ಕಂಡರೆ ದೇವರ ಅನುಗ್ರಹ ಲಭಿಸುತ್ತದೆ ಎಂಬ ನಂಬಿಕೆ ಇದೆ. ನಮ್ಮ ಕುಟುಂಬ ಕೂಡ ದನ, ನಾಯಿಗಳನ್ನು ಸಾಕುತ್ತಾ ಬಂದಿದೆ. ನಾನು ಕೂಡ ಅದನ್ನು ಮುಂದುವರಿಸುತ್ತಿದ್ದೇನೆ, ನನಗೂ ಪ್ರಾಣಿಗಳೆಂದರೆ ಪ್ರೀತಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
“ಉಡುಪಿ ಪರ್ಬ’ದ ಅಂಗವಾಗಿ ರವಿವಾರ ಅಜ್ಜರಕಾಡು ಭುಜಂಗ ಪಾರ್ಕ್ನ ಬಯಲು ರಂಗಮಂದಿರ ದಲ್ಲಿ ಜಿಲ್ಲಾಡಳಿತ, ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಶಾಖೆ, ಜಿಲ್ಲಾ ಪ್ರಾಣಿದಯಾ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಶ್ವಾನ ಪ್ರದರ್ಶನ-2017’ನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಒಂದೆಡೆ ಬೀದಿ ನಾಯಿಗಳ ಬಗ್ಗೆ ಸಾರ್ವಜನಿಕರ ದೂರು, ಇನ್ನೊಂದೆಡೆ ಶ್ವಾನಪ್ರಿಯರ ಪ್ರೀತಿ- ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಮುಂದು ವರಿಯುವುದು ಆಡಳಿತದಲ್ಲಿರು ವವರಿಗೆ ಸವಾಲು. ಉಡುಪಿ ಯಲ್ಲಿಯೂ ಶ್ವಾನಪ್ರಿಯರ ಸಂಖ್ಯೆ ಸಾಕಷ್ಟಿದೆ. ಚಿಕಿತ್ಸೆಗಾಗಿ ಪಶು ವೈದ್ಯರು ಕೂಡ ಇದ್ದಾರೆ. ಉತ್ತಮ
ಬಹುಮಾನಗಳೊಂದಿಗೆ “ಶ್ವಾನಪ್ರದ ರ್ಶನ’ವನ್ನು ಆಯೋಜಿಸಲಾಗಿದೆ ಎಂದು ಪ್ರಮೋದ್ ಹೇಳಿದರು.
ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಎಸ್ಪಿ ಡಾ| ಸಂಜೀವ ಪಾಟೀಲ್ ಉಪಸ್ಥಿತರಿದ್ದರು. ಉಪನಿರ್ದೇಶಕ ಡಾ| ಸರ್ವೋತ್ತಮ ಉಡುಪ ಸ್ವಾಗತಿಸಿದರು. ಡಾ| ಉದಯ ಕುಮಾರ್ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು. ಡಾ| ಹರೀಶ್ ವಂದಿಸಿದರು. ಮೈಸೂರಿನ ಡಾ| ಸಂಜೀವ ಮೂರ್ತಿ ಮತ್ತು ಡಾ| ಡಿ.ಟಿ. ಜಯರಾಮಯ್ಯ ತೀರ್ಪುಗಾರ ರಾಗಿದ್ದರು.
ಗೋಲ್ಡನ್ ರಿಟ್ರಿವರ್ ಚಾಂಪಿಯನ್
ಉಡುಪಿ ಮತ್ತು ಮಂಗಳೂರಿನ 25 ವಿಧದ ತಳಿಗಳ 150ಕ್ಕೂ ಅಧಿಕ ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಎಲ್ಲ ವಿಭಾಗಗಳಲ್ಲಿಯೂ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಯಿತು. ಅನ್ವಿಲ್ ಮೂಲ್ಕಿ ಅವರ ಗೋಲ್ಡನ್ ರಿಟ್ರಿವರ್ ತಳಿಯ ಶ್ವಾನ ಚಾಂಪಿಯನ್ಶಿಪ್ ಗೆದ್ದುಕೊಂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.