ಸಚಿವರ ಭೇಟಿ ಬಳಿಕ ಇತ್ತ ತಲೆಹಾಕದ ಅಧಿಕಾರಿ ವರ್ಗ

Team Udayavani, Jan 1, 2018, 2:16 PM IST

01-26.jpg

ಕುಂದಾಪುರ: ರಾಜ್ಯದ ಗಮನಸೆಳೆದಿದ್ದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರ ಕಾಲೊ¤àಡು ಗ್ರಾಮದ ಮೂರೂರು ಕೊರಗರ ಕಾಲೋನಿ ವಾಸ್ತವ್ಯಕ್ಕೆ ಡಿ.31ಕ್ಕೆ ಒಂದು ವರ್ಷ ತುಂಬಿದೆ. ವಾಸ್ತವ್ಯದ ಬಳಿಕ ಅಭಿವೃದ್ಧಿ, ಒಳಮೀಸಲಾತಿ ಸಹಿತ ಸಚಿವರು ಹಲವು ಭರವಸೆ ನೀಡಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಕಾಲೊನಿಯ ಪ್ರಗತಿ ಬದಿಗಿರಲಿ, ಸಚಿವರ ಭೇಟಿಯ ಬಳಿಕ ಒಬ್ಬನೇ ಒಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ.

ಗುಡಿಸಲಲ್ಲಿ ಕಾಲ ಕಳೆಯುತ್ತಿರುವ ಕೊರಗ ಕುಟುಂಬ.

ಕುಂದಾಪುರ ತಾಲೂಕಿನ ಕಾಲೊ¤àಡು ಗ್ರಾಮದ ಮೂರೂರಿನಲ್ಲಿ 7 ಕುಟುಂಬಗಳಿರುವ ಕೊರಗರ ಕಾಲೋನಿಗೆ ಸಚಿವ ಆಂಜನೇಯ 2016ರ ಡಿ.31ರಂದು ಭೇಟಿ ನೀಡಿ ಮರ್ಲಿ ಕೊರಗ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಕೊರಗರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಘೋಷಿಸಿದ್ದಲ್ಲದೆ, ಆದರ್ಶ ಗ್ರಾಮವನ್ನಾಗಿ ರೂಪಿಸುವ ಭರವಸೆ ನೀಡಿದ್ದರು. ಆ ಬಳಿಕ ಕಾಲೊನಿ ಎಷ್ಟು ಪ್ರಗತಿ ಕಂಡಿದೆ ಎನ್ನುವುದನ್ನು “ಉದಯವಾಣಿ’ ಬಳಗ ಭೇಟಿ ನೀಡಿ ಪರಿಶೀಲಿಸಿದಾಗ ಕಂಡುಬಂದ ಪರಿಸ್ಥಿತಿ ಶೋಚನೀಯವಾಗಿದೆ. 

ಮೂಲಸೌಕರ್ಯಗಳೇ ಇಲ್ಲ
ಸಚಿವರ ಭೇಟಿಯ ಬಳಿಕವೂ ಕಾಲೊನಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆ ಸಂಪರ್ಕ ಒದಗಿಲ್ಲ. ಸಚಿವರ ಭೇಟಿಗೂ ಮುನ್ನವೇ ಕಾಮಗಾರಿ ಆರಂಭಗೊಂಡಿದ್ದರೂ ಸೇತುವೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಕಾಲೊನಿಗೆ ನಳ್ಳಿ ನೀರಿನ ಸಂಪರ್ಕ ಇಲ್ಲ. ಇರುವ ಒಂದು ಸಮುದಾಯ ಬಾವಿಯ ನೀರು ಬತ್ತಿ ಹೋಗುವ ಪರಿಸ್ಥಿತಿಯಿದೆ. ಫೆಬ್ರವರಿ- ಮಾರ್ಚ್‌ನಲ್ಲಿ ಕುಡಿ ಯುವ ನೀರಿಗೆ ತತ್ವಾರ ಉಂಟಾಗಬಹುದು. ಸಮು ದಾಯ ಭವನದ ಕಾಮಗಾರಿ ನಡೆಯುತ್ತಿರುವುದು ಒಂದೇ ಸಮಾಧಾನಕರ ವಿಚಾರ. 3 ಮನೆಗಳ ನಿರ್ಮಾಣ ಕಾರ್ಯ ಪ್ರಾಥಮಿಕ ಹಂತದಲ್ಲೇ ಇದೆ. ಈ ಕುಟುಂಬದವರು ಇನ್ನೆಷ್ಟು ದಿನ ಪುಟ್ಟ ಗುಡಿಸಲಲ್ಲೇ ಕಾಲ ಕಳೆಯಬೇಕೋ ತಿಳಿದಿಲ್ಲ.

3 ಫೇಸ್‌ ವಿದ್ಯುತ್‌ ಸಂಪರ್ಕ ಒದಗಿಸಲು ಸಚಿವರು ಸೂಚಿಸಿದ್ದರೂ ಈಗಲೂ ಒಂದು ಬಲ್ಬ್ನ “ಭಾಗ್ಯ ಜ್ಯೋತಿ’ ಮಾತ್ರ ಈ ಮನೆಗಳನ್ನು ಬೆಳಗುತ್ತಿದೆ. ಸಚಿವರು ಭೇಟಿ ನೀಡಿದ ಬಳಿಕ ಕಳೆದ ಒಂದು ವರ್ಷದಲ್ಲಿ ಕಾಲೋನಿಯಲ್ಲಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳೇನೂ ನಡೆದಿಲ್ಲ. ಅಂದರೆ, ಇದು ಕಾಟಾಚಾರದ ಗ್ರಾಮವಾಸ್ತವ್ಯವೇ ಎನ್ನುವ ಅನುಮಾನ ಮೂಡಿದೆ. ಸಚಿವರ ಭೇಟಿಯ ಬಳಿಕ ಸರಕಾರದ ಹಲವು ಸವಲತ್ತುಗಳು ಮನೆ ಬಾಗಿಲಿಗೆ ಹರಿದು ಬರಬಹುದು ಎನ್ನುತ್ತಾ ಕನಸಿನ ಗೋಪುರವನ್ನೇ ಕಟ್ಟಿಕೊಂಡಿದ್ದ ಕೊರಗ ಕುಟುಂಬಗಳ ನಿರೀಕ್ಷೆ ಹುಸಿಯಾಗಿದೆ. 

ಬಸ್‌ ಸಂಪರ್ಕ ಇಲ್ಲ
ಉಡುಪಿಯಿಂದ ಮೂರೂರಿಗೆ 80 ಕಿ.ಮೀ., ಕುಂದಾಪುರದಿಂದ 56 ಕಿ.ಮೀ. ದೂರವಿದೆ. ಏಳು ಕೊರಗ ಕುಟುಂಬಗಳು ವಾಸಿಸುತ್ತಿರುವ ಇಲ್ಲಿಗೆ ತಾಲೂಕು ಕೇಂದ್ರದಿಂದ ನೇರ ಬಸ್‌ ಸಂಪರ್ಕ ಇಲ್ಲ. ಅತಿ ಸನಿಹದ ಬಸ್‌ ನಿಲ್ದಾಣಕ್ಕೆ ತಲುಪಲು 10 ಕಿ.ಮೀ.ಗೂ ಹೆಚ್ಚು ದೂರ ಕಾಲ್ನಡಿಗೆ ಅಥವಾ ಅನ್ಯ ವಾಹನಗಳ ಮೂಲಕ ಪ್ರಯಾಣಿಸಬೇಕು. ಪಡಿತರ ಸಾಮಗ್ರಿಗಳನ್ನು ಮನೆಗೆ ತರಲು ವಾಹನ ಬಾಡಿಗೆಯಾಗಿ 250 ರೂ. ತೆರಬೇಕು. ಹತ್ತಿರದ ಅರೆಶಿರೂರಿನ ಪೇಟೆಗೆ ಬರಬೇಕಾದರೆ ರಿಕ್ಷಾ ಬಾಡಿಗೆ 100 ರೂ. ವ್ಯಯಿಸಬೇಕು.

ಸಚಿವರಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಮನವಿ ಮಾಡಿಕೊಂಡಿದ್ದೆವು. 3 ಫೇಸ್‌ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದರು. ಇನ್ನೂ ಮಂಜೂರಾಗಿಲ್ಲ. ಸ್ವೂದ್ಯೋಗ ಯೋಜನೆಯಡಿ ಟೈಲರಿಂಗ್‌ ಘಟಕ ಹಾಗೂ ಕೈಮಗ್ಗ ಕೈಗಾರಿಕೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆವು. ಇದಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದರು. ಒಳಮೀಸಲಾತಿ ಬಗ್ಗೆ ಪ್ರಸ್ತಾವಿಸಿದ್ದರು. ಆದರೆ ಅದಿನ್ನೂ ಘೋಷಣೆಯಾಗಿಯೇ ಉಳಿದಿದೆ. 
 ಗುಲಾಬಿ ಕೊರಗ, ಮೂರೂರು

ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.