ಮನೆ ಪದರ ನಿಮ್ಮ ಮನೆಯಲ್ಲಿ ಇದೆಯಾ?
Team Udayavani, Jan 1, 2018, 4:41 PM IST
ಈಗ ಕಿಟಕಿಗಳಿಗೆ ಗ್ಲಾಸ್ ಹಾಕುವುದು ಎಲ್ಲೆಡೆ ಅತಿ ಜನಪ್ರಿಯವಾಗಿರುವುದರಿಂದ, ಕಿಟಕಿಗಳ ಹೊರಗೂ ಒಂದು ಪದರವಾಗಿ ಜಾಲಾಂಧ್ರವನ್ನು ಹಾಕಿಕೊಳ್ಳಬಹುದು. ಆಗ ನಮಗೆ ಕಿಟಕಿಯ ಬಾಗಿಲನ್ನು ತೆರೆದಿಟ್ಟರೂ ಹೊರಗಿನ ಪದರ ನಮಗೆ ಸಾಕಷ್ಟು ರಕ್ಷಣೆಯನ್ನು ನೀಡಬಲ್ಲದು.
ನಾವೆಲ್ಲ ಮನೆಗಳನ್ನು ಕಟ್ಟಿಕೊಳ್ಳುವುದು ಏಕೆ? ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ಪಡೆಯುವುದಕ್ಕೆ ಎನ್ನುವುದು ನಿಜವಾದರೂ, ಮನೆಗಳು ಸಂಪೂರ್ಣ ಮುಚ್ಚಿಕೊಂಡಿರಲು ಸಾಧ್ಯವಿಲ್ಲ ಅನ್ನೋದೂ ಸತ್ಯ. ಗಾಳಿ-ಬೆಳಕು ಧಾರಾಳವಾಗಿ ಹರಿದಾಡುವಂತಿರುವುದರ ಜೊತೆಗೆ ನಮ್ಮ ಮನೆ ಅತಿಥಿಗಳಿಗೆ ಆಹ್ವಾನ ನೀಡುವಂತೆಯೂ ಇರಬೇಕು ಎಂಬುದು ಮನೆ ಕಟ್ಟುವವರ ಬಯಕೆಯಾಗಿರುತ್ತದೆ. ಹಾಗಾಗಿ, ಮನೆ ಕಟ್ಟುವಾಗ ಎಷ್ಟು ತೆರೆದಿಟ್ಟಿರಬೇಕು, ಅದು ಯಾವ ರೀತಿಯಲ್ಲಿ ಇದ್ದರೆ ಉತ್ತಮ ಎಂಬುದೂ ಮುಖ್ಯವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮನೆಗೆ ಒಂದೆರಡು ಪದರಗಳನ್ನು ನೀಡುವುದು ಜನಪ್ರಿಯವಾಗುತ್ತಿದೆ. ಇದೇನೂ ಹೊಸದಲ್ಲವಾದರೂ ಕಂಪ್ಯೂಟರ್ ನಿಯಂತ್ರಿತ ಯಂತ್ರಗಳಿಂದ ತಯಾರಾದ ನೂತನ ವಿನ್ಯಾಸದ ಸ್ಕ್ರೀನ್ ಗಳನ್ನು ಮನೆಗೆ ಬಳಸುವುದರಿಂದ, ಹೊಸದೊಂದು ಮೆರುಗನ್ನು ನೀಡುತ್ತದೆ. ಜೊತೆಗೆ ಹೆಚ್ಚು ಖಾಸಗೀತನ ಪಡೆಯುತ್ತಲೇ ಸಾಕಷ್ಟು ತೆರೆದುಕೊಂಡ ಹಾಗೆ ಇರುವಂತೆಯೂ ಮಾಡಬಹುದು.
ನಮ್ಮ ದೇಹಕ್ಕೆ ರಕ್ಷಣೆ ನೀಡುವಲ್ಲಿ ಚರ್ಮ ಮೊದಲನೆಯ ಪದರ ಎಂದಾದರೆ, ಎರಡನೆಯ ಪದರ ನಾವು ಧರಿಸುವ ಧಿರಿಸು. ಚಳಿಗಾಲದಲ್ಲಿ ಬಟ್ಟೆಯನ್ನೂ ಎರಡು ಮೂರು ಪದರಗಳಲ್ಲಿ ಹಾಕಿಕೊಂಡು ಮೈಶಾಖವನ್ನು ಹೊರಬಿಡದಂತೆ ಉಣ್ಣೆಯ ಸ್ವೆಟರ್ ಧರಿಸಿ ಕಾಪಾಡಿಕೊಂಡರೆ, ಮಳೆಗಾಲದಲ್ಲಿ ಜೆರ್ಕಿನ್ ಮಾದರಿಯ ಹೆಚ್ಚುವರಿ ಪದರ ನೀರಿನಿಂದ ರಕ್ಷಿಸುತ್ತದೆ. ಹಾಗೆಯೇ ನಮ್ಮ ಮನೆಯೂ ಈ ಪದರಗಳ ರಕ್ಷಣೆಯ ಮುಂದುವರಿದ ಭಾಗದಂತಿದ್ದು, ತೀವ್ರಥರವಾದ ಗಾಳಿ, ಬಿಸಿಲು, ಮಳೆ ಹಾಗೂ ಇತರೆ ತೊಂದರೆಗಳಿಂದಲೂ ರಕ್ಷಿಸುತ್ತದೆ.
ಒಂದು ಕೋಣೆಯ ಕಿಟಕಿ ಮುಚ್ಚಿದರೆ ನಮಗೆ ಹೊರಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗುತ್ತದೆ. ತೆರೆದಿಟ್ಟರೆ ನಮಗೆ ಬೇಡವಾದವೂ ಒಳನುಸುಳಿ ಕಿರಿಕಿರಿ ಮಾಡಬಹುದು. ಇಂಥ ಸಂದರ್ಭದಲ್ಲಿ, ಕಿಟಕಿ ತೆರೆದಿಟ್ಟರೂ ಹೆಚ್ಚಿನ ಕಿರಿಕಿರಿಯಾಗದಂತೆ ಒಂದು ಪದರ ಜಾಲಾಂಧ್ರವನ್ನು ಹೆಚ್ಚುವರಿಯಾಗಿ ನೀಡಿದರೆ ಸಾಕಷ್ಟು ಪ್ರ„ವೆಸಿ ಜಾಗ ಮಾಡಿದಂತಾಗುತ್ತದೆ.
ಇಟ್ಟಿಗೆ, ಬ್ಲಾಕ್ ನಿಂದ ಪದರ: ಕೆಲವೊಮ್ಮೆ ಮನೆಯ ಮುಂಬದಿಯ ಬಾಗಿಲನ್ನು ಒಂದು ಕಡೆಗೆ ಇಡಬೇಕು ಎಂದು ನಿರ್ಧರಿಸಿದರೆ, ಅದರ ಎದುರೇ ಪಕ್ಕದ ಮನೆಯ ಟಾಯ್ಲೆಟ್ ಇದ್ದರೆ ಇರಿಸು ಮುರಿಸಾಗುತ್ತದೆ. ಇಲ್ಲವೇ ಮನೆಯ ಮುಂಬದಿಯೇ ಮುಖ್ಯ ರಸ್ತೆಯೊಂದಿದ್ದು ವಾಹನಗಳ ಕಿರಿಕಿರಿ ಹೆಚ್ಚಿರಬಹುದು. ಹಾಗೆಯೇ ಅಕ್ಕಪಕ್ಕದಲ್ಲಿ ಶಬ್ದ ಇಲ್ಲವೆ ಇತರೆ ಕಿರಿಕಿರಿಗೊಳಿಸುವ ಸಂಗತಿಗಳು ಇರಬಹುದು.
ಕೆಲವೊಂದು ನೋಡಲು ಕಷ್ಟವಾದರೆ, ಮತ್ತೆ ಕೆಲವು ಕಿವಿಗಡಚಿಕ್ಕುತ್ತವೆ. ಹಾಗಾಗಿ ನಾವು ತೀರಾ ಮುಚ್ಚಿಕೊಂಡಂತೆ ಆಳೆತ್ತರದ ಗೋಡೆಕಟ್ಟಿಕೊಳ್ಳದೆ, ಅದೇ ವಸ್ತುಗಳಿಂದ ಜಾಲಾಂದ್ರದ ಮಾದರಿಯಲ್ಲಿ, ಒಂದು ಇಟ್ಟಿಗೆ ಇಲ್ಲ ಬ್ಲಾಕ್ ಬಿಟ್ಟು ಕಟ್ಟಿದರೆ ಸಾಕಷ್ಟು ಪ್ರ„ವಸಿ ದೊರೆತು, ತೊಂದರೆಯನ್ನು ದೂರಮಾಡಿದಂತೆಯೂ ಆಗುತ್ತದೆ.
ಶೀಟ್ ಮೆಟಲ್‌ಪದರ: ಈಗ ಹೆಚ್ಚು ಫ್ಯಾಷನ್ ಆಗಿರುವುದು ಕಂಪ್ಯೂಟರ್‌ಗಳಿಂದ ಕೊರೆಸಿದ ಸ್ಟೈನ್‌ಲೆಸ್ ಸ್ಟೀಲ್ ಹಾಳೆಯ ಸ್ಕ್ರೀನ್‌ಗಳು. ಮಾಮೂಲಿ ಉಕ್ಕಿನ ಹಾಳೆಗಳಲ್ಲಿ ಮಾಡಿದರೆ ಅವಕ್ಕೆ ತುಕ್ಕು ನಿರೋಧಕ ಪೇಂಟ್ ಮಾಡುವುದು ಅನಿವಾರ್ಯ. ಈ ಹಾಳೆಗಳನ್ನು ನಮಗೆ ಬೇಕಾದ ಆಕಾರ ಹಾಗೂ ವಿನ್ಯಾಸದಲ್ಲಿ ಗಣಕ ಯಂತ್ರದ ಪರದೆಯ ಮೇಲೆ ನೋಡಿ ನಂತರ ಕೊರೆಯಲು ನೀಡಬಹುದು. ನಮ್ಮ ಅಗತ್ಯಕ್ಕೆ ತಕ್ಕಂತೆ ಈ ವಿನ್ಯಾಸಗಳು ಹೆಚ್ಚು ತೆರೆದಂತೆಯೂ, ನಮ್ಮ ಒಟ್ಟಾರೆ ಮನೆಯ ಡಿಸೈನ್‌ಗೆ ಹೊಂದಿಕೊಂಡಂತೆಯೂ ಮಾಡಿಕೊಳ್ಳಬಹುದು.
ಪುನರ್ ಬಳಕೆ: ಈ ಹಿಂದೆಲ್ಲಾ ಒಳಗಿನಿಂದ ಹೊರನೋಡಬಹುದು. ಆದರೆ ಹೊರಗಿನವರಿಗೆ ಮನೆಯವರು ಕಾಣಬಾರದು ಎಂಬುದು ಕಟ್ಟುನಿಟ್ಟಾಗಿದ್ದಾಗ, ಮನೆಯ ಕಿಟಕಿಗಳಿಗೇ ಜಾಲಾಂಧ್ರವನ್ನು ಅಳವಡಿಸಲಾಗುತ್ತಿತ್ತು. ಈ ಮಾದರಿಯ ಮನೆ ಹಾಗೂ ಅರಮನೆಗಳು ರಾಜಾಸ್ಥಾನದಂತಹ ಪ್ರದೇಶದಲ್ಲಿರಲು ಅಲ್ಲಿಯ ಸಂಪ್ರದಾಯದ ಜೊತೆಗೆ ಹವಾಮಾನವೂ ಮುಖ್ಯ ಕಾರಣವಾಗಿರುತ್ತಿತ್ತು.
ಈಗ ಕಿಟಕಿಗಳಿಗೆ ಗ್ಲಾಸ್ ಹಾಕುವುದು ಎಲ್ಲೆಡೆ ಅತಿ ಜನಪ್ರಿಯವಾಗಿರುವುದರಿಂದ, ಕಿಟಕಿಗಳ ಹೊರಗೂ ಒಂದು ಪದರವಾಗಿ ಜಾಲಾಂಧ್ರವನ್ನು ಹಾಕಿಕೊಳ್ಳಬಹುದು. ಆಗ ನಮಗೆ ಕಿಟಕಿಯ ಬಾಗಿಲನ್ನು ತೆರೆದಿಟ್ಟರೂ ಹೊರಗಿನ ಪದರ ನಮಗೆ ಸಾಕಷ್ಟು ರಕ್ಷಣೆಯನ್ನು ನೀಡಬಲ್ಲದು. ಅತಿ ಹೆಚ್ಚು ಮಳೆ ಇಲ್ಲವೇ ಬಿಸಿಲು ಇರುವ ಸ್ಥಳಗಳಲ್ಲಿ ಸಾಂಪ್ರದಾಯಿಕವಾಗೇ ಬಿದಿರು, ಈಚಲ ಇಲ್ಲವೆ ಇತರೆ ವಸ್ತುಗಳನ್ನು ಬಳಸಿ ಹೆಚ್ಚುವರಿ ಪರದೆಯೊಂದನ್ನು ಆಯಾಕಾಲಕ್ಕೆ ಉಪಯೋಗಿಸುವ ಪರಿಪಾಠವಿದೆ.
ಇವನ್ನು ಬೇಡವೆಂದಾಗ ಸುತ್ತಿಡುವಂತೆಯೂ ವಿನ್ಯಾಸ ಮಾಡಲಾಗುತ್ತಿತ್ತು. ಮಳೆ ಅಡ್ಡಡ್ಡವಾಗಿ ಬಿದ್ದರೆ, ನಾವು ಎಷ್ಟೇ ಉದ್ದದ ಸಜಾj ಹಾಕಿದ್ದರೂ ಕಿಟಕಿಯ ಒಳಗೆ ನೀರು ನುಗ್ಗುವುದನ್ನು ತಡೆಯಲು ಆಗದು. ಅಂಥ ಸಂದರ್ಭದಲ್ಲಿ ಎರಡು ಮೂರು ಅಡಿ ದೂರದಲ್ಲಿ ಒಂದು ಪದರ ಜಾಲಾಂಧ್ರ ನೀಡಿದರೆ, ನಾವು ಜೋರು ಮಳೆ ಹೊಡೆಯುತ್ತಿದ್ದಾಗಲೂ ಕಿಟಕಿಯನ್ನು ಸ್ವಲ್ಪವಾದರೂ ತೆರೆದಿಟ್ಟು ಫ್ರೆಶ್ ಗಾಳಿ ಒಳ ಬಂದು ಮನೆಯ ತಾಜಾತನವನ್ನು ಕಾಪಾಡಿಕೊಳ್ಳು ಸಾಧ್ಯ.
ಆರ್ ಸಿಸಿ ಕಾಂಕ್ರಿಟ್ ನಿಂದಲೂ ತೆಳ್ಳನೆಯ ಪದರವನ್ನು ಜಾಲಾಂಧ್ರದಂತೆ ಮಾಡಿಕೊಳ್ಳಬಹುದು. ಕಾಂಕ್ರಿಟ್ ವೇಸ್ಟ್ ಆಗದ ರೀತಿಯಲ್ಲಿ, ನಮಗೆ ಬೇಕಾದ ವಿನ್ಯಾಸವನ್ನು ಎರಕ ಹೊಯ್ಯಲೂಬಹುದು. ಕಾಂಕ್ರಿಟ್ ತೆಳ್ಳಗಾದಷ್ಟೂ ಅದರ ಒಳಗೆ ಕಡ್ಡಾಯವಾಗಿ ನೀಡಬೇಕಾದ ಉಕ್ಕಿನ ಸರಳುಗಳಿಗೆ ಸೂಕ್ತ ಕವರ್ – ನೀರು ನಿರೋಧಕ ಪದರ ಕಡಿಮೆಯಾಗಿ ತುಕ್ಕು ಡಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಕಡ್ಡಾಯವಾಗಿ ಜಿ ಐ ತಂತಿಗಳನ್ನುಬಳಸಿ ಕಾಂಕ್ರಿಟ್ ಜಾಲಾಂಧ್ರಗಳನ್ನು ತಯಾರಿಸಬೇಕಾಗುತ್ತದೆ.
ಹೆಚ್ಚಿನ ಮಾತಿಗೆ ಫೋನ್: 98441 32826
* ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.