ನ್ಯೂಇಯರ್‌ ಆಟೋ ಬಜೆಟ್‌!


Team Udayavani, Jan 1, 2018, 4:41 PM IST

new-auto-budget.jpg

ಇವತ್ತು ಹೊಸ ವರ್ಷದ ಮೊದಲ ದಿನ.  ಈ ನೆಪದಲ್ಲಿ ಒಂದಷ್ಟು ಆಸೆಗಳು ಹುಟ್ಟುತ್ತವೆ. ಈ ವರ್ಷವಾದರೂ ಒಳ್ಳೆ ಕಾರು ತಗೊಳ್ಳೋಣ ಅಂತ ಶಪಥ ಮಾಡೋರೂ ಇದ್ದಾರೆ.  ಹೊಸ ವರ್ಷದಲ್ಲಿ ಹೊಸ ವಸ್ತು ಖರೀದಿಸುವುದು ಸಂಪ್ರದಾಯವೂ ಇದೆ. ವರ್ಷಾರಂಭದ ಜೀವನೋತ್ಸಾಹವನ್ನೇ ಮಾರ್ಕೆಟಿಂಗ್‌ ಸರಕನ್ನಾಗಿ ಉಪಯೋಗಿಸಿಕೊಳ್ಳುವ ಉದ್ಯಮಕ್ಷೇತ್ರ ತಿಂಗಳು ಮೊದಲೇ ಹೊಸ ಉತ್ಪಾದನೆಗಳ ಪ್ರಮೋಷನ್‌ಗೆ ಇಳಿದಿವೆ. ಅದರಂತೆ ಆಟೋಮೊಬೈಲ್‌ ಕ್ಷೇತ್ರದ ಪ್ರಮುಖ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ತಮ್ಮ  ಹೊಸ ಉತ್ಪಾದನೆಯ ಪ್ರಮೋಷನ್‌ ಜತೆ ಜೊತೆಗೇ ನಾನಾ ರೀತಿಯ ಆಫ‌ರ್‌ಗಳನ್ನು ನೀಡಲಾರಂಭಿಸಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಹಾಗೂ ನೋಟು ಅಮಾನ್ಯದಂತ ಪರಿಣಾಮಕಾರಿ ಆಡಳಿತ ವ್ಯವಸ್ಥೆಯ ಬದಲಾವಣೆಯಿಂದ 2017ರಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಆಟೋಮೊಬೈಲ್‌ ಕ್ಷೇತ್ರ 2018ರಲ್ಲಿ ಉತ್ತಮ ಪ್ರಗತಿ ಕಾಣುವ ನಿರೀಕ್ಷೆಯಲ್ಲಿದೆ. ಬಹುತೇಕ ಕಂಪನಿಗಳು ಹೊಸ ಕಾರುಗಳನ್ನು ಪರಿಚುಸಲು, ಹೊಚ್ಚ ಹೊಸ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜಾnನ ಅಳವಡಿಕೆಯೊಂದಿಗೆ ಬಿಡುಗಡೆ ಮಾಡಲು ಭಾರಿ ಸಿದ್ಧತೆಗಳನ್ನು ಮಾಡಿಕೊಂಡಿವೆ. 2018ರ ಫೆಬ್ರವರಿಯಲ್ಲಿ, ನವದೆಹಲಿಯಲ್ಲಿ ಪ್ರಸಕ್ತ ಸಾಲಿನ ಆಟೋ ಎಕ್ಸ್‌ಪೋ ನಡೆಯಲಿದೆ. ಇದರಲ್ಲಿ ತನ್ನ ಹೊಸ ಉತ್ಪಾದನೆಗಳನ್ನು ಪ್ರದರ್ಶಿಸಲು ಕಂಪನಿಗಳು ತಯಾರಿ ನಡೆಸಿವೆ.

ಹೊಸ ವರ್ಷದಲ್ಲಿ ಕಾರು ಕೊಂಡುಕೊಳ್ಳಬೇಕೆಂದು ಕನಸು ಹೊತ್ತಿರುವವರಿಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಲ್ಯಾಂಬೋನಿ ಉರುಸ್‌: ಇದು ಲಕ್ಸುರಿ ಎಸ್‌ಯು ಸೆಗ್ಮೇಂಟ್‌ನ ಕಾರು. ಭಾರತದಲ್ಲಿ ಇದನ್ನು ವರ್ಷಾರಂಭದಲ್ಲೇ ಅನಾವರಣಗೊಳಿಸುವಉದ್ದೇಶವನ್ನು ಲ್ಯಾಂಬೋನಿ ಕಂಪನಿ ಹೊಂದಿದೆ. 1980ರ ದಶಕದಲ್ಲಿ ಎಲ್‌ಎಂ002 ಮಾಡೆಲ್‌ ಮೂಲಕ ಎಸ್‌ಯು ಪರಿಚುಸಿದ್ದ ಲ್ಯಾಂಬೋನಿ ಬಹು ವರ್ಷಗಳ ಬಳಿಕ ಈಗ ಮತ್ತೆ ಈ ಸೆಗ್ಮೇಂಟ್‌ನ ಕಾರನ್ನು ಪರಿಚಯಿಸುತ್ತಿದೆ.
ಶೋ ರೂಂ ನಿರೀಕ್ಷಿತ ಬೆಲೆ: 3 ಕೋಟಿ ರೂ.

ಲೆಕ್ಸಸ್‌ ಎಲ್‌ಎಸ್‌: ಜಪಾನ್‌ ಕಾರು ತಯಾರಿಕ ಕಂಪನಿ ಟೊಯೋಟಾದ ಬಹುನಿರೀಕ್ಷಿತ ಲಕ್ಸುರಿ ಕಾರಿದು. ಎಫ್ ಸೆಗ್ಮೇಂಟ್‌ ಸೆಡಾನ್‌ ಮಾದರಿಯ ಈ ಕಾರು, ಇದೀಗ ಹೊಸ ವಿನ್ಯಾಸ, ಆಧುನಿಕ ತಂತ್ರಜಾnನದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಅತ್ಯಾಧುನಿಕ ತಂತ್ರಜಾnನ ಅಳವಡಿಸಲಾಗಿರುವ  ಲೆಕ್ಸಸ್‌ ಎಲ್‌ಎಸ್‌ ಕಾರು ಭಾರತದಲ್ಲಿ 2018ರ ಜನವರಿಯಲ್ಲಿ ಬಿಡುಗಡೆ ಆಗಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 1 ಕೋಟಿ ರೂ.

ಆಡಿ ಕ್ಯೂ5: ಈಗಾಗಲೇ ಧೂಳೆಬ್ಬಿಸಿರುವ ಜರ್ಮನ್‌ ಮೂಲದ ಕಂಪನಿಯ ಕ್ಯೂ5 ಸರಣಿ ಕಾರಿದು.  ಗ್ರಾಹಕನ ಬೇಡಿಕೆಯನ್ನಾಧರಿಸಿ ಇನ್ನೊಂದಿಷ್ಟು ವಿನ್ಯಾಸದಲ್ಲಿನ ಬದಲಾವಣೆ ಮೂಲಕ ಮತ್ತೆ ಮಾರುಕಟ್ಟೆ ಪ್ರವೇಶಿಸಲಿದೆ. ಸೆಕೆಂಡ್‌ ಜನರೇಷನ್‌ ಸದ್ಯಕ್ಕಿರುವ ಮಾಹಿತಿಯಂತೆ ಜನವರಿಯಲ್ಲಿ ಇದು ಅನಾವರಣಗೊಳ್ಳಲಿದೆ. ತಂತ್ರಜಾnನದ ಜತೆ ಹೆಚ್ಚಿನ ಸಾಮರ್ಥ್ಯವನ್ನೂ ಹೊಂದಿರಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 55 ಲಕ್ಷ ರೂ.

ಔಟ್‌ಲ್ಯಾಂಡರ್‌: ಜಪಾನ್‌ ಮೂಲದ ಮಿತ್ಸುಬಿ ಹೊಸವರ್ಷದಲ್ಲಿ ಎಸ್‌ಯು ಸೆಗ್ಮೇಂಟ್‌ನ ತನ್ನ ಹಳೆಯ ಬ್ರಾಂಡ್‌ ಕಾರು ಔಟ್‌ಲ್ಯಾಂಡರ್‌ ಅನ್ನು ಹೊಸ ವಿನ್ಯಾಸ, ಹೊಸ ತಂತ್ರಜಾnನದೊಂದಿಗೆ ಪರಿಚಯಿಸುತ್ತಿದೆ. ಫೆಬ್ರವರಿ ವೇಳೆಗೆಲ್ಲಾ ಕಾರನ್ನು ಬಿಡುಗಡೆ ಮಾಡಲು ಮಿತ್ಸುಬಿ ಇಂಡಿಯಾ ಸಿದ್ಧತೆ ಮಾಡಿಕೊಂಡಿದೆ. ಸಿಟಿ ಆಟೋಮ್ಯಾಟಿಕ್‌ ಪ್ಯಾಡಲ್‌ ಶಿಫ್ಟರ್/ 6ಸ್ಪೀಡ್‌ ಗೇರ್‌ಬಾಕ್ಸ್‌ ಹೊಂದಿರಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 20.25 ಲಕ್ಷ ರೂ.

ಜೆಟ್ಟಾ: ಭಾರತದಲ್ಲಿ ಉತ್ತಮ ಗ್ರಾಹಕರನ್ನು ಹೊಂದಿರುವ ಜೆಟ್ಟಾ, ಮತ್ತೆ ಹೊಸ ವಿನ್ಯಾಸದಲ್ಲಿ ರಸ್ತೆಗಿಳಿಯಲಿದೆ. ಈಗಾಗಲೇ 6ನೇ ಜನರೇಷನ್‌ ವೇರಿಯಂಟ್‌ ಪರಿಚಯಿಸಿರುವ ಜರ್ಮನಿ ಕಂಪನಿ ವೋಲ್ಸ್‌ವ್ಯಾಗನ್‌ 2018ರ ವರ್ಷಾಂತ್ಯದಲ್ಲಿ 7ನೇ ಜನರೇಷನ್‌ ಮಾಡೆಲ್‌ ಪರಿಚಯಿಸಲು ಸಿದ್ಧತೆ ನಡೆಸಿದೆ.
ಶೋ ರೂಂ ನಿರೀಕ್ಷಿತ ಬೆಲೆ: 20.08 ಲಕ್ಷ ರೂ.

ಐಯೋನಿಕ್‌: ಈಗಾಗಲೇ ಭಿನ್ನ ನ್ಯಾಸದೊಂದಿಗೆ ತನ್ನ ಗ್ರಾಹಕರಿಗೆ ಲಕ್ಸುರಿ ಮಾದರಿಯ ಹೈಬ್ರಿàಡ್‌ ಐಕೋನಿಕ್‌ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿರುವ ಹುಂಡೈ ಭಷ್ಯ ದೃಷ್ಟಿಯಲ್ಲಿರಿಸಿಕೊಂಡು ಲಿಥಿಯಮ್‌ ಬ್ಯಾಟರಿ ಚಾಲಿತ ಸಾಮರ್ಥ್ಯದ ಎಲೆಕ್ಟ್ರಿಕ್‌ ವ್ಯ ವಸ್ಥೆಯನ್ನೂ ಅಳವಡಿಸಿ ಪರಿಚಯಿಸುತ್ತಿದೆ.
ಶೋ ರೂಂ ನಿರೀಕ್ಷಿತ ಬೆಲೆ: 20 ಲಕ್ಷ ರೂ.

ಇ-ಪೇಸ್‌: ಜಾಗರ್‌ ಸೆಡಾನ್‌ ಸೆಗ್ಮೇಂಟ್‌ನ ಹೊಸ ಕಾಂಪೆಕ್ಟ್ ಎಸ್‌ಯು ಇ-ಪೇಸ್‌ ಪರಿಚಯಿಸುವ ತಯಾರಿಯಲ್ಲಿದೆ. ಆದರೆ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಟಾಟಾ ಮೋಟಾರ್ ಇನ್ನಷ್ಟೇ ಬರಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ, 2018ರ ಫೆಬ್ರವರಿ ಅಂತ್ಯಕ್ಕೆಲ್ಲ ಈ ಹೊಸಕಾರು ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 45 ಲಕ್ಷ ರೂ.

ಎಕ್ಸ್‌ 3: ಲಕ್ಸುರಿ ಕಾರುಗಳ ಉತ್ಪಾದನೆಯಲ್ಲಿ ತನ್ನದೇ ಆದ ಮಾರುಕಟ್ಟೆ ಹೊಂದಿರುವ ಬಿಎಂಡಬ್ಲ್ಯು ಹೊಸ ವರ್ಷಕ್ಕೆ ಎಕ್ಸ್‌3 ಹೆಸರಿನ ಕಾರನ್ನು ಪರಿಚಯಿಸುತ್ತಿದೆ. ಬಹುತೇಕ ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿರುವ ಜರ್ಮನಿ ಕಂಪನಿ ಡೀಸೆಲ್‌ ಮತ್ತು ಪೆಟ್ರೋಲ್‌ ಎರಡೂ ಇಂಧನ ಬಳಕೆಯ ವೇರಿಯಂಟ್‌ಗೆ ಅವಕಾಶ ನೀಡಿದೆ.
ಶೋ ರೂಂ ನಿರೀಕ್ಷಿತ ಬೆಲೆ: 49-52.2 ಲಕ್ಷ ರೂ.

ಕ್ಯಾಮ್ರಿ: ಲಕ್ಸುರಿ ಸೆಡಾನ್‌ ಕಾರುಗಳ ಸಾಲಿನಲ್ಲಿ ಬೆಸ್ಟ್‌ ಚಾಯ್ಸ ಎನ್ನುವ ಮಟ್ಟಕ್ಕೆ ಗುರುತಿಸಿಕೊಂಡಿರುವ “ಕ್ಯಾಮ್ರಿ’ಯ ಹೊಸ ವೇರಿಯಂಟ್‌ ಬಿಡುಗಡಗೆ ಟೊಯೋಟಾ ಸಿದ್ಧತೆಯಲ್ಲಿದೆ. ಈಗಾಗಲೇ ಹೈಬ್ರಿಡ್‌ ವೇರಿಯಂಟ್‌ ಕೂಡ ಪರಿಚಯಿಸಿರುವ ಕಂಪನಿ, ಆಟೋ ಟ್ರಾನ್ಸ್‌ಮಿಷನ್‌ ಮಾದರಿಯಲ್ಲೇ ಇನ್ನೊಂದು ವೇರಿಯಂಟ್‌ ಪರಿಚಯಿಸುತ್ತಿದೆ.
ಶೋ ರೂಂ ನಿರೀಕ್ಷಿತ ಬೆಲೆ: 30-37.96 ಲಕ್ಷ ರೂ.

ಪನಮೇರಾ: ಲಕ್ಸುರಿ ಕಾರುಗಳ ತಯಾರಿಕೆಯಲ್ಲಿ ಪ್ರತಿಷ್ಠಿತ ಕಂಪನಿ ಎನಿಸಿಕೊಂಡಿರುವ ಜರ್ಮನ್‌ ಕಂಪನಿ ಪೋರ್ಷೆ, ಹೊಸ ವರ್ಷಕ್ಕೆ ಭಾರತೀಯ ಮಾರುಕಟ್ಟೆಗೆ ಪನಮೇರಾ ಕಾರನ್ನು ಪರಿಚುಸುತ್ತಿದೆ. ವರ್ಷಾಂತ್ಯಕ್ಕೆಲ್ಲಾ ಪನಮೇರಾ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಟಬೋ ಮತ್ತು ಟಬೋ ಎಕ್ಸಿಕ್ಯೂಟೀವ್‌ ಹೆಸರಿನ ಎರಡು ವೇರಿಯಂಟ್‌ ಕಾರುಗಳು ಬಿಡುಗಡೆ ಆಗಲಿವೆ.
ಶೋ ರೂಂ ನಿರೀಕ್ಷಿತ ಬೆಲೆ: 1.99 ಕೋಟಿ ರೂ.

ಐ3, ಎಕ್ಸ್‌2, ಟರಿಸ್ಮೋ: ಆಟೋಮೊಬೈಲ್‌ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಬಿಎಂಡಬ್ಲ್ಯು, ತನ್ನ ಲಕ್ಸುರಿ ಕಾರುಗಳಲ್ಲೇ ಅಗ್ರ ಪಂಕ್ತಿಯಲ್ಲಿ ನಿಲ್ಲುವ “ಐ3’ಯನ್ನು ಭಾರತದಲ್ಲಿಯೂ ಪರಿಚುಸಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಅತ್ಯಾಧುನಿಕ ತಂತ್ರಜಾnನ ಅಳವಡಿಕೆಯೊಂದಿಗೆ ಮಾರ್ಚ್‌ ವೇಳೆಗೆಲ್ಲ ಬಿಡುಗಡೆ ಮಾಡಲಿದೆ. ಅಷ್ಟೇ ಅಲ್ಲ, ಲಕ್ಸುರಿ ಎಸ್‌ಯು ಸೆಗ್ಮೇಂಟ್‌ನ ಎಕ್ಸ್‌2 ಕೂಡ ಏಪ್ರಿಲ್‌ ತಿಂಗಳಾಂತ್ಯದಲ್ಲಿ ಭಾರತೀಯ ರಸ್ತೆಗಳಲ್ಲಿ ಓಡಾಡಲಿದೆ. ಎಕ್ಸ್‌6 ಮತ್ತು ಎಕ್ಸ್‌4ಗಿಂತ ಭಿನ್ನವಾಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೇ ಸೀರೀಸ್‌ 8ರ ಸೆಡಾನ್‌ನ ಹೊಸ ವೇರಿಯಂಟ್‌ ಕೂಡ. ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರುತ್ತದೆಂದು ನಿರೀಕ್ಷಿಸಲಾಗಿದೆ. 6ಸೀರೀಸ್‌ ಸೆಡಾನ್‌ ಗ್ರ್ಯಾನ್‌ ಟರಿಸ್ಮೋ ಕೂಡ ಹೊಸ ವಿನ್ಯಾಸ, ಸಾಮರ್ಥ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 
ಐ3: 1 ಕೋಟಿ ರೂ.
ಎಕ್ಸ್‌2: 30 ಲಕ್ಷ ರೂ.
8ಸೀರೀಸ್‌: 85 ಲಕ್ಷ ರೂ.
ಗ್ರ್ಯಾನ್‌ ಟರಿಸ್ಮೋ: 1.2-1.3 ಕೋಟಿ ರೂ.

ಸೊನಾಟಾ: ಹುಂಡೈ ಕಂಪೆನಿ ತನ್ನ ಜನಪ್ರಿಯ ಸೆಡಾನ್‌ ಕಾರುಗಳಲ್ಲಿ ಒಂದಾದ ಸೊನಾಟಾ ಕಾರಿನ ಹೈಬ್ರಿàಡ್‌ ವೇರಿಯಂಟ್‌ ಪರಿಚಯಿಸುತ್ತಿದೆ. 360 ಎಲೆಕ್ಟ್ರಿಕ್‌ ಎಂಜಿನ್‌ ಹಾಗೂ 2.0ಲೀ. 4 ಸಿಲಿಂಡರ್‌ನೊಂದಿಗೆ ಈ ಹಿಂದಿನ ವೇರಿಯಂಟ್‌ಗಿಂತ 21%ನಷ್ಟು ಬದಲಾವಣೆಯೊಂದಿಗೆ ಹೊಸ ಕಾಲ ಮಾರುಕಟ್ಟೆ ಪ್ರವೇಶಿಸಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 20.77 ಲಕ್ಷ ರೂ.

ಎಕ್ಸ್‌-ಟ್ರೆ„ಲ್‌: ಲಕ್ಸುರಿ ಕಾರುಗಳ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ನಿಸಾನ್‌ ಕಂಪನಿ,  ಈಗಾಗಲೇ ಯುರೋಪ್‌ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಎಕ್ಸ್‌-ಟ್ರೆ„ಲ್‌ ಎಸ್‌ಯು ಸೆಗ್ಮೇಂಟ್‌ನ ಕಾರನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಭಾರತಕ್ಕೂ ಪರಿಚಯಿಸಲಿದೆ. ಅಂದುಕೊಂಡಂತೆ ಆದಲ್ಲಿ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 22.6 ಲಕ್ಷ ರೂ.

ಎಕ್ಸ್‌ಸಿ40: ತಂತ್ರಜಾnನ ಅಳವಡಿಕೆಯೊಂದಿಗೆ ಸ್ಮೂತ್‌ ಪರ್ಫಾರೆನ್ಸ್‌ನಲ್ಲಿ ತನ್ನದೇ ಆದ ಛಾಪು ಒತ್ತಿರುವ ವೋಲ್ವೊ ಕಂಪನಿ ಜೂನ್‌ ವೇಳೆ ಮಿನಿ ಎಸ್‌ಯು ಸೆಗ್ಮೇಂಟ್‌ನ ಎಕ್ಸ್‌ಸಿ40 ಕಾರುಗಳನ್ನು ಪರಿಚಯಿಸಲಿದೆ. ಕ್ಯೂ3, ಎಕ್ಸ್‌1 ಕಾರುಗಳಿಗೆ ಪ್ರಬಲ ಸ್ಪರ್ಧಿಯಾಗಿ ಬರಲಿರುವ ಎಕ್ಸ್‌ಸಿ40 5 ಸೀಟರ್‌ ಆಗಿದ್ದು, ದೂರ ಪ್ರಯಾಣಕ್ಕೆ ಹೇಳಿಮಾಡಿಸಿದಂತಿದೆ ಎನ್ನಲಾಗುತ್ತಿದೆ. 
ಶೋರೂಂ ನಿರೀಕ್ಷಿತ ಬೆಲೆ: 50 ಲಕ್ಷ ರೂ.

ರೆನೆಗೇಡ್‌: ಜೀಪ್‌ ಭಾರತೀಯ ಮಾರುಕಟ್ಟೆಗೆ ಬಲಿಷ್ಠ ಎಸ್‌ಯು ಸೆಗ್ಮೇಂಟ್‌ನ ರೆನೆಗೇಡ್‌ ಪರಿಚಯಿಸಲಿದ್ದು, ಕಳೆದೆರಡು ವರ್ಷಗಳಲ್ಲಿ ಪರಿಚಯಿಸಿದ ಮಾಡೆಲ್‌ಗ‌ಳಿಗಿಂಥ ಇದು ಭಿನ್ನವಾಗಿದೆ. ನೂತನ ತಂತ್ರಜಾnನ ಅಳವಡಿಸಲಾಗಿದ್ದು, ಹೆಚ್ಚುಕಡಿಮೆ ಹಿಂದಿನ ವರ್ಷನ್‌ನಂತೆ ವಿನ್ಯಾಸಗೊಳಿಸಲಾಗಿದೆ.
ಶೋ ರೂಂ ನಿರೀಕ್ಷಿತ ಬೆಲೆ: 20 ಲಕ್ಷ ರೂ.

ಕರಾಕ್‌: ಸ್ಕೋಡಾ ಕಂಪನಿ, 2018ರ ಅಂತ್ಯಕ್ಕೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಮಿನಿ ಎಸ್‌ಯು ಸೆಗ್ಮೇಂಟ್‌ ಕಾರನ್ನು ಪರಿಚಯಿಸಲಿದೆ. 7ಸೀಟರ್‌ ಕರಾಕ್‌, 7 ಸ್ಪೀಡ್‌ ಡ್ಯುಯಲ್‌ ಕ್ಲಚ್‌ ಇದರ ಶೇಷತೆ.
ಶೋ ರೂಂ ನಿರೀಕ್ಷಿತ ಬೆಲೆ: 20 ಲಕ್ಷ ರೂ.

ಕಡಿಮೆ ಬೆಲೆ ಕಾರುಗಳು…: ಬದಲಾವಣೆ ಲಕ್ಸುರಿ ಕಾರುಗಳಲ್ಲಷ್ಟೇ ಅಲ್ಲ. ಸಾಮಾನ್ಯ ಕಾರುಗಳಲ್ಲೂ ಆಗಲಿದೆ. ಹೆಚ್ಚಿನ ಕಂಪನಿಗಳು ವರ್ಷಾರಂಭದಲ್ಲಿ ತನ್ನ ಗ್ರಾಹಕರಿಗೆ ಒಂದಿಷ್ಟು ಆಫ‌ರ್‌ ನೀಡುವುದು ಸಾಮಾನ್ಯ. ಆದರೆ ಆಫ‌ರ್‌ ನೀಡುವ ವೇಳೆ ಹೊಸ ವಿನ್ಯಾಸ, ಆಧುನಿಕ ತಂತ್ರಜಾnನ ಸೇರಿ ಕಾರಿನಲ್ಲಿ ಏನೇನು ಹೊಸದಿದೆ? ಇದು ಎಷ್ಟು ಪ್ರಯೋಜನಕಾರಿ? ಅದು ಚಾಲನಸ್ನೇ ಆಗಿದೆಯೇ? ಎನ್ನುವ ಅಂಶಗಳನ್ನೆಲ್ಲ ನೋಡಿಯೇ ನೋಡುತ್ತಾರೆ. ಹಾಗಾದರೆ ಯಾವೆಲ್ಲಾ ಸಣ್ಣ-ಪುಟ್ಟ ಕಾರುಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ, ಯಾವೆಲ್ಲ ಕಂಪನಿಗಳು ಹೊಸ ಮಾಡೆಲ್‌ ಪರಿಚಯಿಸಲಿದೆ ಎನ್ನುವುದರ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ರೆಡಿ ಗೋ ಗೋಲ್ಡ್‌: ನಿಸಾನ್‌ ಕಂಪನಿ ಜತೆ ಕೈಜೋಡಿಸಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಗೆ ಪ್ರಯಾಸ ಪಡುತ್ತಿರುವ ಡಾಟ್ಸನ್‌ ರೆಡಿ ಗೋ, ಮತ್ತೆ ಕೆಲವು ಬದಲಾವಣೆಯೊಂದಿಗೆ ರಸ್ತೆಗಿಳಿಯುವ ಪ್ರಯತ್ನದಲ್ಲಿದೆ. ಕೆಲ ತಿಂಗಳ ಹಿಂದಷ್ಟೇ 1.0 ಲೀ. ವರ್ಷನ್‌ನ ಕಾರನ್ನು ಪರಿಚಯಿಸಿದ್ದ ಜಪಾನ್‌ ಮೂಲದ ಕಂಪನಿ,  ಇದೀಗ ರೆಡಿ ಗೋ ಗೋಲ್ಡ್‌ ಹೆಸರಲ್ಲಿ ಮತ್ತೆ ಪರಿಚಯಿಸುತ್ತಿದೆ. ಮಾರ್ಚ್‌ ವೇಳೆಗೆ ಗೋ ಕ್ರಾಸ್‌ ವರ್ಷನ್‌ ಕೂಡ ಬಿಡುಗಡೆ ಮಾಡುತ್ತಿದೆ.
ಶೋ ರೂಂ ನಿರೀಕ್ಷಿತ ಬೆಲೆ: 
– ರೆಡಿ ಗೋ ಗೋಲ್ಡ್‌ 2.50-3.3 ಲಕ್ಷ ರೂ.
– ಗೋ ಕ್ರಾಸ್‌ 4.4 ಲಕ್ಷ ರೂ.

ಸ್ವಿಫ್ಟ್ ನ್ಯೂ: ಹದಿನಾಲ್ಕು ವೇರಿಯಂಟ್‌ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಮಾರುತಿ ಸ್ವಿಫ್ಟ್ ಕಾರು ಮತ್ತೆ ಕೆಲವೊಂದು ಬದಲಾವಣೆ ಮೂಲಕ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿದೆ. ಕಂಪನಿ ಫೆಬ್ರವರಿಯಲ್ಲಿ ಬಿಡುಗಡೆಗೆ ತಯಾರಿ ನಡೆಸಿಕೊಂಡಿದೆ. ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾದ ಸ್ವಿಫ್ಟ್ ಹೊಸ ಇಂಟೀರಿಯರ್‌ನ ಇಂಟೀರಿಯರ್‌ ಬದಲಾಗಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 7.50 ಲಕ್ಷ ರೂ.

ಕ್ರೆಟಾ: ಭಾರತದಲ್ಲಿ ಬಹಳ ದೊಡ್ಡ ಮಾರುಕಟ್ಟೆ ಹೊಂದಿರುವ ದಕ್ಷಿಣ ಕೊರಿಯಾ ಮೂಲದ ಕಂಪನಿ ಹುಂಡೈ, ತನ್ನ ಜನಪ್ರಿಯ ಮಿನಿ ಎಸ್‌ಯು ಕ್ರೆಟಾದ ಹೊಸ ವೇರಿಯಂಟ್‌ ಬಿಡುಗಡೆಗೆ ಎದುರು ನೋಡುತ್ತಿದೆ. ಆಧುನಿಕ ತಂತ್ರಜಾnನ ಹಾಗೂ ಫೇಸ್‌ಲಿಫ್ಟ್ ವಿನ್ಯಾಸದೊಂದಿಗೆ ಮತ್ತೆ ಪರಿಚಯಿಸಲಿರುವ ಹುಂಡೈ ಹೊಸ ವರ್ಷದ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 9.30-ರಿಂದ 14.59 ಲಕ್ಷ ರೂ.

ಯಾಸ್‌: ಟೊಯೋಟಾ,  ಹೊಸ ವರ್ಷಕ್ಕೆ ಹೊಸ “ಸಿ’ ಸೆಗ್ಮೇಂಟ್‌ ಸೆಡಾನ್‌ ಯಾಸ್‌ ಪರಿಚಯಿಸಲಿದೆ. ಹೆಚ್ಚುಕಡಿಮೆ ಲಕ್ಸುರಿ ಕಾರುಗಳಲ್ಲಿನ ತಂತ್ರಜಾnನ ಅಳವಡಿಕೆ ಹಾಗೂ ಹೊಸ ವಿನ್ಯಾಸದಲ್ಲಿ ಇರಲಿದೆ. ಎಟಿಯಾಸ್‌ ಎಂಜಿನ್‌ ಸಾಮರ್ಥ್ಯ, ಆಧುನಿಕ ತಂತ್ರಜಾnನದೊಂದಿಗೆ ಫೆಬ್ರವರಿ ವೇಳೆಗೆ ಮಾರುಕಟ್ಟೆಗೆ ಪರಿಚಯಿಸುವ ಲೆಕ್ಕಾಚಾರದಲ್ಲಿ ಕಂಪನಿ ಇದೆ. ಕೆಲವೇ ತಿಂಗಳ ಅಂತರದಲ್ಲಿ ಇನ್ನೊಂದು ಸೆಡಾನ್‌ ಸಿ-ಎಚ್‌ಆರ್‌ ಕಾರನ್ನೂ ಪರಿಚಯಿಸಲಿದೆ. ಜೂನ್‌ ವೇಳೆ ಮಾರುಕಟ್ಟೆಗೆ ಬರಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 
– ಯಾಸ್‌: 10 ಲಕ್ಷ ರೂ.
– ಸಿ-ಎಚ್‌ಆರ್‌: 10 ಲಕ್ಷ ರೂ.

ರ್ಟಸ್‌: ಲಕ್ಸುರಿ ಸೆಗ್ಮೇಂಟ್‌ಗಳ ಸಾಲಿಗೆ ಸೇರಿವ ವೆಂಟೋ ಹಾಗೂ 6ನೇ ಜನರೇಷನ್‌ನ ಪೊಲೋ ಮಾದರಿಯಲ್ಲೇ ಕೆಲವೊಂದು ಬದಲಾವಣೆ ಮೂಲಕ ವರ್ಟಸ್‌ ಕಾರನ್ನು ಭಾರತದಲ್ಲೂ ಪರಿಚಯಿಸಲು ವೋಲ್ಸ್‌ವ್ಯಾಗನ್‌ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಗ್ರಾಹಕರ ಬೇಡಿಕೆಯನ್ನಾಧರಿಸಿ ಚಾಲಕ ಸ್ನೇಹಿತರ ತಂತ್ರಜಾnನ ಅಳವಡಿಸಿ ಪರಿಚಯಿಸುತ್ತಿದೆ.
ಶೋ ರೂಂ ನಿರೀಕ್ಷಿತ ಬೆಲೆ: 15 ಲಕ್ಷ ರೂ.

ಯಾರಿಸ್‌ ಅಟಿವ್‌: ಎರಡನೇ ಜನರೇಷನ್‌ ಎಟಿಯೋಸ್‌ ಪರಿಚಯಿಸುವ ಯಾವುದೇ ಯೋಜನೆ ಇಲ್ಲದ ಹಿನ್ನೆಲೆಯಲ್ಲಿ ಟೊಯೋಟಾ ಕಂಪನಿ ಪರ್ಯಾಯವಾಗಿ ಇದೇ ರೇಂಜ್‌ನಲ್ಲಿ ಯಾರಿಸ್‌ ಅಟಿವ್‌ ಹೆಸರಿನ ಸೆಡಾನ್‌ ಕಾರನ್ನು ಪರಿಚಯಿಸುವ ತಯಾರಿಯಲ್ಲಿದೆ. ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ ಯಾರಿಸ್‌ ಆಟಿವ್‌ ಹೆಸರಿನ ಕಾರು ಬಿಡುಗಡೆ ಆಗಲಿದೆ. 
ಶೋ ರೂಂ ನಿರೀಕ್ಷಿತ ಬೆಲೆ: 8 ಲಕ್ಷ ರೂ.

ಸಿಕ್‌, ವೆಜೆಲ್‌: ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನಮಾನ ಗಳಿಸಿದ ಹೋಂಡಾ, ತನ್ನ ಜನಪ್ರಿಯ ಸೆಡಾನ್‌ ಮಾದರಿ ಕಾರುಗಳಲ್ಲಿ ಒಂದಾದ ಸಿಕ್‌ನ 10ನೇ ಜನರೇಷನ್‌ ವರ್ಷನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಹೊಸ ತಂತ್ರಜಾnನ ಅಳವಡಿಕೆಯೊಂದಿಗೆ ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಅಷ್ಟೇ ಅಲ್ಲ, ಮಿನಿ ಎಸ್‌ಯು ಸೆಗ್ಮೇಂಟ್‌ ನ ವೆಜೆಲ್‌ ಕಾರನ್ನೂ ಹೊಂಡಾ ಕಂಪೆನಿ ಬಿಡುಗಡೆ ಮಾಡಲಿದೆ.
ಶೋ ರೂಂ ನಿರೀಕ್ಷಿತ ಬೆಲೆ: 
– ಸಿಕ್‌: 15 ಲಕ್ಷ ರೂ.
– ವೆಜೆಲ್‌: 10 ಲಕ್ಷ ರೂ.

ಎಸ್‌ 201, ತಿವೋಲಿ: ಭಾರತದ ಆಟೋಮೊಬೈಲ್‌ ಕ್ಷೇತ್ರದಲ್ಲಾದ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹೀಂದ್ರಾ ಆಂಡ್‌ ಮಹೀಂದ್ರಾ ಮಗದೊಂದು ಮಿನಿ ಎಸ್‌ಯು ‘ಎಸ್‌ 201’ ಹಾಗೂ ‘ಸ್ಯಾಂಗ್‌ಸಂಗ್‌ ತಿವೋಲಿ’ಯನ್ನು ಪರಿಚುಸುತ್ತಿದೆ. ನೂತನ ವಿನ್ಯಾಸ, ಅತ್ಯಾಧುನಿಕ ತಂತ್ರಜಾnನವನ್ನು ಹೊಂದಿರುವ ಲಕ್ಸುರಿ ಎಸ್‌ಯುಗಳಿಗೂ ಪ್ರಬಲ ಸ್ಪರ್ಧೆಯೊಡ್ಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಉತ್ಪನ್ನವನ್ನು ಕಂಪೆನಿಯು ಜೂನ್‌ನಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಅಲ್ಲದೆ ಟಿಯು300 ಪ್ಲಸ್‌ ಹೊಸ ವಿನ್ಯಾಸದಲ್ಲಿ ಬರಲಿದೆ. 
ಶೋ ರೂಂ ನಿರೀಕ್ಷಿತ ಬೆಲೆ: 
– ಸ್ಯಾಂಗ್‌ಸಂಗ್‌ ತಿವೋಲಿ: 20 ಲಕ್ಷ ರೂ.
– ಎಸ್‌ 201: 9.9 ಲಕ್ಷ ರೂ.
– ಟಿಯು300 ಪ್ಲಸ್‌: 9 ಲಕ್ಷ ರೂ.

ವ್ಯಾಗನ್‌ ಆರ್‌, ಗ್ರ್ಯಾಂಡ್‌ ತಾರ: ಆಗಸ್ಟ್‌ ವೇಳೆಗೆ ಮಾರುತಿ ಮೋಟಾರ್ ಎಸ್‌ಯು ಸೆಗ್ಮೇಂಟ್‌ನ ‘ಗ್ರ್ಯಾಂಡ್‌ ತಾರ’ವನ್ನು ಬಿಡುಗಡೆ ಮಾಡಲಿದೆ. ಬೂಸ್ಟರ್‌ಜೆಟ್‌ ಎಂಜಿನ್‌ನ ತಾರ ಎಸ್‌ ಮಾಡೆಲ್‌ ಕಾರನ್ನು ಲಂಡನ್‌ನಲ್ಲಿ ಬಿಡುಗಡೆ ಮಾಡಿರುವ ಮಾರುತಿ ಇದೇ ಮಾದರಿಯಲ್ಲೇ ಭಾರತದ ರಸ್ತೆಗಳಿಗೆ ಸಹಕಾರಿಯಾಗುವಂತೆ ಇದನ್ನು ವಿನ್ಯಾಸಗೊಳಿಸಿದೆ. ಬರೋಬ್ಬರಿ 20 ಲಕ್ಷ ಕಾರುಗಳನ್ನು ಮಾರಾಟ ಮಾಡಿರುವ ಹೆಗ್ಗಳಿಕೆಯ ವ್ಯಾಗನ್‌ ಆರ್‌ ಮಲ್ಟಿಪರ್ಪಸ್‌ ಕಾರನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಪರಿಚುಸಲು ಮಾರುತಿ ಮೋಟಾರ್ ಸಿದ್ಧತೆ ನಡೆಸಿದೆ. ಜೂನ್‌ ವೇಳೆಗೆ ಹೊಸ ವೇರಿಯಂಟ್‌ ಬಿಡುಗಡೆಗೊಳ್ಳಲಿದೆ. 
ಶೋ ರೂಂ ನಿರೀಕ್ಷಿತ ಬೆಲೆ: 
– ವ್ಯಾಗನ್‌ ಆರ್‌: 5.31 ಲಕ್ಷ ರೂ.
– ಗ್ರ್ಯಾಂಡ್‌ ತಾರ: 22.7 ಲಕ್ಷ ರೂ.

ಹುಂಡೈನಿಂದ ಮಿನಿ ಕಾರು: ಇಯಾನ್‌ ಹಾಗೂ ಗ್ರ್ಯಾಂಡ್‌ ಐ10 ಮೂಲಕ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಹುಂಡೈ, ಮುಂದಿನ ಸೆಪ್ಟೆಂಬರ್‌ ವೇಳೆಗೆಲ್ಲಾ ಸಣ್ಣ ಕಾರೊಂದನ್ನು ಪರಿಚಯಿಸುತ್ತಿದೆ. ಟಾಟಾ ಟಿಯಾಗೋ, ಮಾರುತಿ ಸೆಲೆರಿಯೋ, ರೆನೋ ಕ್ವಿಡ್‌, ವ್ಯಾಗನ್‌ ಆರ್‌ ಕಾರುಗಳಿಗೆ ಸವಾಲಾಗುವುದರಲ್ಲಿ ಅನುಮಾನ ಇಲ್ಲ ಎಂದೇ ಹೇಳಲಾಗುತ್ತಿದೆ.
ಶೋ ರೂಂ ನಿರೀಕ್ಷಿತ ಬೆಲೆ: 3.5 ಲಕ್ಷ ರೂ.

ಅರ್ಗೋ: ಫಿಯೆಟ್‌ ಕಂಪನಿ, ಸೆಪ್ಟೆಂಬರ್‌ ವೇಳೆಗೆಲ್ಲ ತನ್ನದೇ ಬ್ರಾಂಡ್‌ ಪುಂಟೊ ಬದಲಿಯಾಗಿ ಅದೇ ಸೆಗ್ಮೇಂಟ್‌ನ ಅರ್ಗೋ ಕಾರನ್ನು ಪರಿಚುಸಲಿದೆ. ನ್ಯಾಸದಲ್ಲಿ ಫಿಯೆಟ್‌ ಈ ಹಿಂದೆ ಪರಿಚಯಿಸಿದ ಇಂಥ ಮಾದರಿ ಕಾರುಗಳಿಗಿಂತ ಅರ್ಗೋ ಭಿನ್ನವಾದ ವಿನ್ಯಾಸವನ್ನೇ ಹೊಂದಿದೆ. ಇದಲ್ಲದೇ, ಕ್ರೊನಾಸ್‌ ಸೆಡಾನ್‌ ಸೆಗ್ಮೇಂಟ್‌ ಕಾರನ್ನೂ ಮಾರುಕಟ್ಟೆಗೆ ಪರಿಚಯಿಸಲಿದೆ. 
ಶೋ ರೂಂ ನಿರೀಕ್ಷಿತ ಬೆಲೆ: 
– ಅರ್ಗೋ: 7 ಲಕ್ಷ ರೂ. 
– ಕ್ರೊನಾಸ್‌: 11 ಲಕ್ಷ ರೂ.

ದ್ವಿಚಕ್ರವಾಹನ… 
ಕ್ಯೂಟ್‌: ದ್ವಿಚಕ್ರ ವಾಹನ ಉತ್ಪಾದನಾ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಬಜಾಜ್‌ ಕಂಪನಿ 2018ರ ಡಿಸೆಂಬರ್‌ ವೇಳೆಗೆ ಬಹುದೊಡ್ಡ ಕ್ರಾಂತಿಗೆ ನಾಂದಿ ಹಾಡುವ ಸಿದ್ಧತೆಯಲ್ಲಿದೆ. 5 ಸ್ಪೀಡ್‌ ಟ್ರಾನ್ಸ್‌ುಷನ್‌ನ ಕ್ಯೂಟ್‌ ಕಾರನ್ನು ಪರಿಚಯಿಸುವ ತಯಾರಿಯಲ್ಲಿದೆ. ಪೆಟ್ರೋಲ್‌ ಎಂಜಿನ್‌ ಹೊಂದಿರುವ ಕ್ಯೂಟ್‌ ಕಾರನ್ನು ಎಲ್‌ಪಿಜಿ ಅಳವಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 70 ಕಿಲೋಮೀಟರ್‌ ಮಾತ್ರ. ಸದ್ಯ ಭಾರತದಲ್ಲಿ ಮೂರು ಚಕ್ರಗಳ ಆಟೋರಿûಾಗೆ ಬದಲಿಯಾಗಿ ಅದೇ ಬೆಲೆಯಲ್ಲಿ ನಾಲ್ಕು ಚಕ್ರಗಳ ಕಾರು ಪರಿಚಯಿಸುವ ಉದ್ದೇಶದಿಂದ ಮಾರುಕಟ್ಟೆಗೆ ತರಲಾಗುತ್ತಿದೆ. 
ಶೋ ರೂಂ ನಿರೀಕ್ಷಿತ ಬೆಲೆ: 2 ಲಕ್ಷ ರೂ.

ಯುವಕರು-ಯುವತಿಯರಿಗೆ ದ್ವಿಚಕ್ರವಾಹನಗಳಲ್ಲಿ ಓಡಾಡುವ ಕ್ರೇಜ್‌ ಹೆಚ್ಚಿದೆ. ಹೀಗಾಗಿ ಬೈಕ್‌, ಸ್ಕೂಟರ್‌ಗಳನ್ನು ಉತ್ಪಾದಿಸುವ ಕಂಪನಿಗಳು ಹೊಸ ವರ್ಷವನ್ನೇ ಗುರಿಯಾಗಿಸಿಕೊಂಡು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿವೆ.
  
ಡಿಎಸ್‌ಕೆ ಮೋಟೋಲ್ಸ್‌ ಅವರ ಹೈಸಂಗ್‌ ಜಿಡಿ450 (ನಿರೀಕ್ಷಿತ ಬೆಲೆ: 2.50 ಲಕ್ಷ ರೂ.), ರಾಯಲ್‌ ಎನ್‌ಫೀಲ್ಡ್‌ ಅವರ ಥಂಡರ್‌ಬರ್ಡ್‌ 500 ಎಕ್ಸ್‌ (ನಿರೀಕ್ಷಿತ ಬೆಲೆ: 2ಲಕ್ಷ ರೂ.), ಕವಾಸಕಿ ವಲ್‌ಕ್ಯಾನ್‌ ಎಸ್‌(ನಿರೀಕ್ಷಿತ ಬೆಲೆ: 6ಲಕ್ಷ ರೂ.), ಹೀರೋ ಪ್ಯಾಶನ್‌ ಎಕ್ಸ್‌ಪೋ› ಬೆಲೆ: 55,000 ರೂ.), ಹೀರೋ ಸೂಪರ್‌ ಸ್ಪೆÉಂಡರ್‌ ಐ3ಎಸ್‌ ಡ್ರಮ್‌ ಅಲಾಯ್‌ (ನಿರೀಕ್ಷಿತ ಬೆಲೆ: 60,000 ರೂ.), ಹೀರೋ ಎಚ್‌ಎಕ್ಸ್‌ 250ಆರ್‌ (ನಿರೀಕ್ಷಿತ ಬೆಲೆ: 1.50 ಲಕ್ಷ ರೂ.),

ಸುಜುಕಿ ಗಿಕ್ಸರ್‌ 250 (ನಿರೀಕ್ಷಿತ ಬೆಲೆ: 3ಲಕ್ಷ ರೂ.), ಟ್ರಿಂಪ್‌ ಸ್ಪೀಡ್‌ ಟ್ರಿಪಲ್‌ (ನಿರೀಕ್ಷಿತ ಬೆಲೆ: 12ಲಕ್ಷ ರೂ.), ಬಜಾಜ್‌ ಪಲ್ಸರ್‌ ಎಸ್‌ಎಸ್‌ 400 (ನಿರೀಕ್ಷಿತ ಬೆಲೆ: 1.70 ಲಕ್ಷ ರೂ.), ಕ್ಲೀವ್‌ಲ್ಯಾಂಡ್‌ ಸೈಕಲ್‌ವೆರ್ಕ್ಸ್ ಏಸ್‌/ ಮಿಸ್‌ಫಿಟ್‌ (ನಿರೀಕ್ಷಿತ ಬೆಲೆ: 1.25ಲಕ್ಷ ರೂ. / 1.50 ಲಕ್ಷ ರೂ.), ಡುಕಾಟಿ ಮಾನ್‌ಸ್ಟಾರ್‌ 821 (ನಿರೀಕ್ಷಿತ ಬೆಲೆ: 10.50 ಲಕ್ಷ ರೂ.), ಬೆನೆಲ್ಲಿ ಅಇಆರ್‌ಕೆ 502 (ನಿರೀಕ್ಷಿತ ಬೆಲೆ: 4 ಲಕ್ಷ ರೂ.),

ಯಮಾಹ ವೈಜಡ್‌ಎಫ್ ಆರ್‌15 3.0 (ನಿರೀಕ್ಷಿತ ಬೆಲೆ: 1.18 ಲಕ್ಷ ರೂ.), ಅಗಸ್ತಾ ಡ್ರ್ಯಾಗ್‌ಸ್ಟರ್‌800 ಆರ್‌ಆರ್‌ (ನಿರೀಕ್ಷಿತ ಬೆಲೆ: 12.70ಲಕ್ಷ ರೂ.), ಟಾರ್ಕ್‌ ಟಿ6ಎಕ್ಸ್‌ (ನಿರೀಕ್ಷಿತ ಬೆಲೆ: 1.24 ಲಕ್ಷ ರೂ.), ಹೀರೋ ಎಕ್ಸ್‌ಟ್ರೀಮ್‌ 200 ಎಸ್‌ (ನಿರೀಕ್ಷಿತ ಬೆಲೆ: 95,000 ರೂ.), ಎಸ್‌ಡಬ್ಲ್ಯುಎಂ ಸೂಪರ್‌ಡ್ನೂಲ್‌ ಟಿ (ನಿರೀಕ್ಷಿತ ಬೆಲೆ: 5 ಲಕ್ಷ ರೂ.), ರಾಯಲ್‌ ಎನ್‌ಫೀಲ್ಡ್‌ ಇಂಟರ್‌ಕ್ಯಾಪ್ಟರ್‌ 650 (ನಿರೀಕ್ಷಿತ ಬೆಲೆ: 3.50 ಲಕ್ಷ ರೂ.) ಹಾಗೂ ಕಾಂಟಿನೆಂಟಲ್‌ ಜಿಟಿ 650 (ನಿರೀಕ್ಷಿತ ಬೆಲೆ: 4.25 ಲಕ್ಷ ರೂ.) ಸೇರಿದಂತೆ ಇನ್ನೂ ಒಂದಿಷ್ಟು ದ್ವಿಚಕ್ರ ವಾಹನಗಳು ಹೊಸ ವರ್ಷದಲ್ಲಿ ಧೂಳೆಬ್ಬಿಸಲಿವೆ.

ಟಾಪ್ ನ್ಯೂಸ್

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.