ರಮಾನಾಥ ರೈಯದ್ದು ಮೊಸಳೆ ಕಣ್ಣೀರು: ಹರಿಕೃಷ್ಣ ಬಂಟ್ವಾಳ
Team Udayavani, Jan 2, 2018, 12:54 PM IST
ಮಂಗಳೂರು: ಬಿ.ಸಿ.ರೋಡ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಬಿ. ರಮಾನಾಥ ರೈ ಅವರು ಸುರಿಸಿದ್ದು ಮೊಸಳೆ ಕಣ್ಣೀರು. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕಣ್ಣೀರು ಬಂದಿದೆ. ಇದೇ ವೇಳೆ ರೈ ಅವರು ಪೂಜಾರಿಗೆ ಬೈದಿರುವ ವಿಚಾರದಲ್ಲಿ ಪೂಜಾರಿ ಅವರ ಮನೆಯವರನ್ನೂ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ಪೂಜಾರಿ ಅವರಿಗೆ ಬೈದಿರುವ ವಿಚಾರದಲ್ಲಿ ನಾನು ರೈ ಅವರನ್ನು ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬರಲು ಆಹ್ವಾನಿಸಿದ್ದೆ. ಬೈದಿರುವುದಕ್ಕೆ ಸಾಕ್ಷಿಯಾಗಿರುವ ಅರುಣ್ ಕುವೆಲ್ಲೋ ಅವರು ಕೂಡ ಧರ್ಮಸ್ಥಳಕ್ಕೆ ಬರಲು ಒಪ್ಪಿದ್ದಾರೆ ಎಂದು ಸಚಿವ ರಮಾನಾಥ ರೈಗೆ ಸವಾಲು ಹಾಕಿದರು.
ಪಲಾಯನ ಯತ್ನ
ಬೈಯುವ ಸಂದರ್ಭದಲ್ಲಿ ಪೂಜಾರಿ ಅವರ ಮನೆಯವರು ಇರಲಿಲ್ಲ. ಹೀಗಿರುವಾಗ ತಾವು ಬೈದಿರುವ ವಿಚಾರವನ್ನು ಪೂಜಾರಿ ಅವರ ಮನೆಯವರು ಹೇಳಬೇಕು ಎನ್ನುವ ಮೂಲಕ ರಮಾನಾಥ ರೈ ಅವರು ಈ ವಿಚಾರದಿಂದ ಪಲಾಯನ ಮಾಡಲು ನೋಡುತ್ತಿದ್ದಾರೆ. ನಾನು ಈ ಹಿಂದೆ ಹೇಳಿರುವ ಮಾತಿಗೆ ಈಗಲೂ ಬದ್ಧನಿದ್ದು, ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಕ್ಕೂ ಸಿದ್ಧನಿದ್ದೇನೆ. ಸಚಿವ ರೈ ಕೂಡ ಧರ್ಮಸ್ಥಳಕ್ಕೆ ಬರಲಿ ಎಂದು ಹರಿಕೃಷ್ಣ ಸವಾಲು ಹಾಕಿದ್ದಾರೆ.
ಬೈದಿರುವ ವಿಚಾರವನ್ನು ನಾನೇ ಸೃಷ್ಟಿಸಿದ್ದೇನೆ ಎಂಬ ಆರೋಪ ನನ್ನ ಮೇಲಿದೆ. ಆದರೆ ನನಗೆ ಈ ವಿಚಾರವನ್ನು ತಿಳಿಸಿದ್ದು ಪೂಜಾರಿ ಅವರೇ. ಅರುಣ್ ಮೊದಲು ಪೂಜಾರಿ ಅವರ ಬಳಿಯೇ ಈ ವಿಚಾರವನ್ನು ತಿಳಿಸಿದ್ದರು. ಬಳಿಕ ನಾನು ಅರುಣ್ ಅವರಿಂದ ವಿವರವಾದ ಮಾಹಿತಿ ಪಡೆದಿದ್ದೇನೆ. ಜತೆಗೆ ಬೈದಿರುವ ವಿಚಾರಕ್ಕೆ ಕಂಕನಾಡಿ ಗರಡಿಯಲ್ಲಿ ಕಣ್ಣೀರಿಡುವ ಮೂಲಕ ಪೂಜಾರಿ ಅವರು ಈಗಾಗಲೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಸಾಮಾನ್ಯ ವಿಚಾರಕ್ಕೆ ಕಣ್ಣೀರಿಡುವ ವ್ಯಕ್ತಿ ಪೂಜಾರಿ ಅವರಲ್ಲ. ಅವರು ಗಟ್ಟಿ ಸ್ವಭಾವದವರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ,
ನರಸಿಂಹ ರಾವ್ ಹೀಗೆ ಮೂರು ಜನ ಪ್ರಧಾನಿಗಳ ಬಳಿ ಕೆಲಸ ಮಾಡಿದ್ದಾರೆ. ವಿಪಕ್ಷ ದಲ್ಲಿದ್ದರೂ ಸಂಸದ ನಳಿನ್ ಅವರು ಕೂಡ ಪೂಜಾರಿ ಅವರ ಕಾಲಿಗೆ ಬಿದ್ದು ಗೌರವ ಸೂಚಿಸುತ್ತಾರೆ ಎಂದರು.
ಪರಿಷತ್‌ಗೆ ಟಿಕೆಟ್ ತಪ್ಪಿಸಿದ್ದರು
“ನನಗೆ ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಲಿದೆ, ನೀವು ಅರ್ಜಿ ಹಾಕಬೇಕು ಎಂದು ಸ್ವತಃ ಕೋಡಿಜಾಲ್ ಇಬ್ರಾಹಿಂ ಕರೆ ಮಾಡಿ ತಿಳಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಸಚಿವ ರೈ ಅವರು ಜಿಲ್ಲೆಯ ಶಾಸಕರ ಬಳಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ಹೆಸರು ಹೇಳಿಸಿದ್ದಾರೆ. ಇದು ಸುಳ್ಳು ಎಂದಾದರೆ ಈ ಹಿಂದೆ ಐವನ್‌ಗೆ ಪರಿಷತ್‌ಗೆ ಸೀಟು ಇಲ್ಲ ಎಂದಾಗ ರೈ ಅವರು ರಾಜೀನಾಮೆ ಕೊಡುವುದಾಗಿ ಬೆದರಿಸಿದ್ದರು. ನನಗೆ ಸೀಟು ಇಲ್ಲ ಎಂದಾಗ ಯಾಕೆ ರಾಜೀನಾಮೆ ಕೊಡುವುದಾಗಿ ಹೇಳಿಲ್ಲ? ಎಂದು ದೂರಿದ ಹರಿಕೃಷ್ಣ ಅವರು, 1985ರಲ್ಲಿ ಸರಪಾಡಿ ಜಿ.ಪಂ. ಕ್ಷೇತ್ರದಿಂದ ನನಗೆ ಟಿಕೆಟ್ ತಪ್ಪಿಸಿದವರು ಕೂಡ ರೈ ಅವರೇ. ಅಂದೇ ಅವರಿಗೆ ಗುಡ್‌ಬೈ ಹೇಳಿದ್ದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.