ಮಹಾ ನಗರಪಾಲಿಕೆಯಿಂದ ಸ್ವಚ್ಛ ಮೈಸೂರು ಪ್ರಶಸ್ತಿ ಪ್ರದಾನ
Team Udayavani, Jan 2, 2018, 1:03 PM IST
ಮೈಸೂರು: ನಗರದ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಸಾರ್ವಜನಿಕರ ಸಹಭಾಗಿತ್ವವನ್ನು ಪೋ›ತ್ಸಾಹಿಸಲು ಮೈಸೂರು ಮಹಾನಗರ ಪಾಲಿಕೆ ಆಯೋಜಿಸಿದ್ದ ಸ್ವಚ್ಛ ಮೈಸೂರು ಸ್ಪರ್ಧೆಯಲ್ಲಿ ವಿಜೇತರಾದ ಶಾಲೆ, ಆಸ್ಪತ್ರೆ ಹಾಗೂ ಸಂಘ-ಸಂಸ್ಥೆಗಳಿಗೆ ಸೋಮವಾರ ಪ್ರಶಸ್ತಿ ನೀಡಲಾಯಿತು.
ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯಲು ಸತತ ಪ್ರಯತ್ನ ನಡೆಸುತ್ತಿರುವ ಪಾಲಿಕೆಯಿಂದ ಇದೇ ಮೊದಲ ಬಾರಿಗೆ ಸ್ವಚ್ಛ ಮೈಸೂರು ಪ್ರಶಸ್ತಿ ನೀಡಲಾಯಿತು. ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2018ರ ಹಿನ್ನೆಲೆಯಲ್ಲಿ ಸ್ವಚ್ಛ ಶಾಲೆ, ಸ್ವಚ್ಛ ಆಸ್ಪತ್ರೆ, ಸ್ವಚ್ಛ ಹೋಟೆಲ್, ಸ್ವಚ್ಛ ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸ್ವಚ್ಛ ಮಾರುಕಟ್ಟೆ ಸಂಘಗಳು ಹೀಗೆ ಐದು ವಿಭಾಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ನಗರದ ಬಹುತೇಕ ಶಾಲೆ, ಹೋಟೆಲ್, ಆಸ್ಪತ್ರೆ ಹಾಗೂ ಸಂಘ-ಸಂಸ್ಥೆಗಳು ಭಾವಹಿಸುವ ಮೂಲಕ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. ಆದರೆ, ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆ ಸದಸ್ಯರು ನಡೆಸಿದ ಮೌಲ್ಯಮಾಪನದ ಆಧಾರದ ಮೇಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ವಿಜೇತರ ವಿವರ: ಸ್ವಚ್ಛ ಶಾಲೆ: ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆ(ಪ್ರ), ಮೇಟಗಳ್ಳಿ ಜೆಎಸ್‌ಎಸ್ ಪ್ರೌಢಶಾಲೆ(ದ್ವಿ) ಹಾಗೂ ಮಂಚೇಗೌಡನ ಕೊಪ್ಪಲಿನ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆ(ತೃ) ಬಹುಮಾನ ಪಡೆಯಿತು. ಸ್ಪಚ್ಛ ಆಸ್ಪತ್ರೆ: ಜೆಎಸ್‌ಎಸ್ ಆಸ್ಪತ್ರೆ(ಪ್ರ), ಕೊಲಂಬಿಯಾ ಆಸ್ಪತ್ರೆ(ದ್ವಿ) ಹಾಗೂ ಎಚ್‌ಎಚ್‌ಎಂಬಿಜಿ(ಪಿಎಚ್‌ಸಿ) ತೃತೀಯ ಬಹುಮಾನ ತಮ್ಮದಾಗಿಸಿಕೊಂಡಿವೆ.
ಸ್ವಚ್ಛ ಹೋಟೆಲ್: ಹೋಟೆಲ್ ಸದರನ್ ಸ್ಟಾರ್(ಪ್ರ), ರಾಯಲ್ ಆರ್ಕಿಡ್ ಮೆಟ್ರೋಪೋಲ್(ದ್ವಿ) ಹಾಗೂ ಹೋಟೆಲ್ ಮಹೇಶ್ ಪ್ರಸಾದ್(ತೃ).
ಸ್ವಚ್ಛ ನಿವಾಸಿ ಕ್ಷೇಮಾಭಿವೃದ್ಧಿ ಸಂಘ: ಮೈಸೂರು ಬ್ಯಾಂಕ್ ಕಾಲೋನಿ ಕ್ಷೇಮಾಭಿವೃದ್ಧಿ ಸಂಘ, ಶ್ರೀರಾಂಪುರ(ಪ್ರ), ಪುನರ್ವಸು ಕ್ಷೇಮಾಭಿವೃದ್ಧಿ ಸಂಘ, ಕುವೆಂಪುನಗರ(ದ್ವಿ) ಹಾಗೂ ಜಿ ಅಂಡ್ ಎಚ್ ಬ್ಲಾಕ್ ಕ್ಷೇಮಾಭಿವೃದ್ಧಿ ಸಂಘ,
ರಾಮಕೃಷ್ಣನಗರ(ತೃ). ಸ್ವಚ್ಛ ಮಾರುಕಟ್ಟೆ ಸಂಘ: ದೇವರಾಜ ಮಾರುಕಟ್ಟೆ ವರ್ತಕರ ಸಂಘ(ಪ್ರ), ಮಂಡಿ ಮಾರುಕಟ್ಟೆ ವರ್ತಕರ ಸಂಘ(ದ್ವಿ) ಹಾಗೂ ವಾಣಿವಿಲಾಸ ಮಾರುಕಟ್ಟೆ ವರ್ತಕರ ಸಂಘ(ತೃ) ಬಹುಮಾನ ತಮ್ಮದಾಗಿಸಿಕೊಂಡಿತು. ಇದಲ್ಲದೆ ಸ್ಪರ್ಧೆಯಲ್ಲಿ ಬಾಗವಹಿಸಿದ್ದ ಹಲವು ಶಾಲೆ, ಹೋಟೆಲ್ ಹಾಗೂ ಕ್ಷೇಮಾಭಿವೃದ್ಧಿ ಸಂಘಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಚಾಲಕರಿಗೂ ಪ್ರಶಸ್ತಿ: ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ನಗರಪಾಲಿಕೆಯ ಕಸ ಸಾಗಿಸುವ ವಾಹನಗಳ ಚಾಲಕರಿಗೆ ಪ್ರತಿ ತಿಂಗಳಿಗೊಬ್ಬರಂತೆ ಆರು ಮಂದಿಗೆ ಸ್ವಚ್ಛ ಮೈಸೂರು ಪ್ರಶಸ್ತಿ. ಅದರಂತೆ ಮಫೀಸ್ ಅಹಮದ್(ವಾರ್ಡ್ 32), ಎನ್.ಚಂದ್ರಶೇಖರ್(ವಾರ್ಡ್ 48), ಶ್ರೀಧರ್(ವಾರ್ಡ್ 37), ರಾಘವೇಂದ್ರ(ವಾರ್ಡ್ 45), ಮಕುºಲ್ ಅಹಮ್ಮದ್(ವಾರ್ಡ್ 64) ಹಾಗೂ ಗುಂಡ ಅವರುಗಳಿಗೆ ಉತ್ತಮ ಚಾಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಆಯುಕ್ತ ಜೆ.ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹದೇವಪ್ಪ, ಕೆ.ವಿ.ಮಲ್ಲೇಶ್, ಪಾಲಿಕೆ ಸದಸ್ಯರಾದ ಅಯ್ಯೂಬ್ ಖಾನ್, ಜಗದೀಶ್, ಆರೋಗ್ಯಾಧಿಕಾರಿ ಡಾ.ನಾಗರಾಜ್ ಇನ್ನಿತರರು ಹಾಜರಿದ್ದರು.
ಮೈಸೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ವಚ್ಛ ಮೈಸೂರು ಪ್ರಶಸ್ತಿ ನೀಡಲಾಗುತ್ತಿದ್ದು, ಹೊರಗಿನವರೊಂದಿಗೆ ಸ್ಪರ್ಧೆ ನಡೆಯುವುದಕ್ಕಿಂತ ನಮ್ಮ ನಡುವೆಯೇ ಸ್ಪರ್ಧೆ ನಡೆದರೆ ಹೆಚ್ಚಿನ ಪೈಪೋಟಿ ಹಾಗೂ ಗುರಿ ಮುಟ್ಟಲು ಸ್ಫೂರ್ತಿ ನೀಡಲಿದೆ. ಹೀಗಾಗಿ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗಳು ಭಾಗವಹಿಸಬೇಕಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಸಿಗದಿದ್ದವರು ಮುಂದೆಯೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು.
-ಜೆ.ಜಗದೀಶ್, ಪಾಲಿಕೆ ಆಯುಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.