ಮಂಗಳೂರು, ಮಂಡ್ಯದಲ್ಲಿ ನಡೆಯೋ ಪ್ರಕರಣಗಳ ಮಾಹಿತಿ ಆಘಾತಕಾರಿ!
Team Udayavani, Jan 2, 2018, 2:29 PM IST
ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ರೀತಿಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿದ್ದು, ಮಂಡ್ಯದಲ್ಲಿ ಅತೀ ಹೆಚ್ಚು ಅತ್ಯಾಚಾರ, ಮೈಸೂರಿನಲ್ಲಿ ಪ್ರೇಮ ಪ್ರಕರಣ, ಕಲಬುರ್ಗಿ, ಹಾವೇರಿಯಲ್ಲಿ ಅತೀ ಹೆಚ್ಚು ಗರ್ಭಪಾತ ಪ್ರಕರಣ ನಡೆಯುತ್ತಿರುವುದಾಗಿ ರಾಜ್ಯ ಮಹಿಳಾ ಆಯೋಗ ಆಘಾತಕಾರಿ ಮಾಹಿತಿ ನೀಡಿರುವುದಾಗಿ ಖಾಸಗಿ ಟಿವಿ ಚಾನೆಲ್ ವೊಂದರ ವರದಿ ತಿಳಿಸಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಚಾನೆಲ್ ಜತೆ ಮಾತನಾಡುತ್ತ ಈ ವಿವರ ನೀಡಿದ್ದಾರೆ.
ಮಂಗಳೂರಿನಲ್ಲಿ ಮಹಿಳೆಯರ ಸಾಗಣೆ ಮತ್ತು ವೇಶ್ಯಾವಾಟಿಕೆ ಪ್ರಕರಣ ಹೆಚ್ಚಾಗಿದ್ದು, ರಾಮನಗರದಲ್ಲಿ ಅತೀ ಹೆಚ್ಚು ಬಹುಪತ್ನಿತ್ವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.
ನಾವು ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ವರದಿ ಸಿದ್ದಪಡಿಸಿದ್ದೇವೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.